ಆತ್ಮವಿಶ್ವಾಸ ದೃಢವಾಗಿರಲಿ

ಆತ್ಮವಿಶ್ವಾಸ ದೃಢವಾಗಿರಲಿ

ಕವನ

ನಮ್ಮ ಆತ್ಮವಿಶ್ವಾಸ ದೃಢವಾಗಿರಲಿ

ಯಾರು ಏನೇ ಹೇಳಲಿ

ಸಾಧಿಸುವ ಛಲ ಹಠ ನಿಷ್ಠೆಯಿರಲಿ

ಸಾಗುವ ಹಾದಿ ಸುರಕ್ಷತೆಯಲಿರಲಿ

 

ಮುಂದೆ ಹೋಗುವುದಕೆ ಅಡೆತಡೆ ಬರಲಿ

ಬೆನ್ನ ಹಿಂದಿನಿಂದೆಳೆದು ಜಗ್ಗುವರಿರಲಿ

ಬೆದರದಿರು ಬೆಚ್ಚದಿರು ತೃಪ್ತಿಯಿರಲಿ

ಹಿರಿಯರ ಮಾತಿನಲಿ ವಿಶ್ವಾಸವಿರಲಿ

 

ಸ್ವಾರ್ಥ ಮೋಸ ಕಪಟ ವಂಚನೆಗಳಲಿ

ಕೊತಕೊತನೆ ಕುದಿವ ಹೃದಯದಲಿ

ಬಲಿಯಾಗಿ ಅಂಜದೆ ಹೆಜ್ಜೆಯೂರಿರಲಿ

ಆತ್ಮಗೌರವವ ಬಲಿಕೊಡದಿರಲಿ

 

ಯಾರೋ ಏನೋ ಹೇಳಿದರೆಂದು ಕೊರಗದಿರಲಿ

ಆಯುಷ್ಯ ಆರೋಗ್ಯ ಹಾಳಾಗದಿರಲಿ

ತಲೆಕೊರೆದವರು ತೃಪ್ತಿಯಲಿ ನೆಮ್ಮದಿಯಿಂದಿರಲಿ

ಬದುಕಿನಲಿ ನಿತ್ಯ ಸತ್ಯ ಅಡಗಿರಲಿ

 

ಒಂದು ಮಳೆಗೆ ಒಂದು ಕೊಡೆ ಆಗದಿರಲಿ

ಕಾಲಾಯ ತಸ್ಮ್ಯೆ ನಮಃ ನಡೆಯುತಿರಲಿ

ನೀರು ಮೇಲಿನಿಂದ ಕೆಳಕ್ಕೆ ಹರಿಯುತಿರಲಿ

ಜೀವನ ಸಾರಿದಂತೆ ಸಾಗುತಿರಲಿ

 - ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್