ಆರು ಹನಿಗಳು !
ಡಿಸೈಡರ್!
ಈ ಸಂಸಾರ
ಎಂಬುದೊಂದು
ರಾಜ ಹಂಸ ಬಸ್ಸು...
ಗಂಡನದರ
ವಾಹಕ...
ಹೆಂಡತಿ
ನಿರ್ವಾಹಕಿ...
ಸೀನಿಯರ್
ಸಿಟಿಜನ್ಸ್
ಸೀಟಿನಲಿ
ತಂದೆ-ತಾಯಿ...
ಮಕ್ಕಳೆಲ್ಲಾ
ಜೂನಿಯರ್ಸ್...
ಸೋದರ-ಸೋದರಿ
ಇಳಿದು ಹೋಗುವ
ಯಾತ್ರಿಗಳು...
ಸಂಬಂಧಿಕರು
ಮಧ್ಯೆ-ಮಧ್ಯೆ
ಇಳಿದು ಹತ್ತುವ
ಪ್ರಯಾಣಿಕರು...
ಸ್ನೇಹಿತರೇ
ಮೆಕ್ಯಾನಿಕ್...
ಹೈವೇನಲಿ
ಪ್ರಯಾಣ...
ಆ ದೇವರೇ
ಬಸ್ ನ ಓನರ್
ಹಾಗೂ
ಡೆಸ್ಟಿನೇಷನ್
ಡಿಸೈಡರ್!
*
ಪ್ರೇಮ ಲೋಕ!
ಪ್ರೀತಿ-
ಪ್ರೇಮಗಳು
ಎಂದೂ
ಆಯುಧ
ಆಗಬಾರದು
ಅದು
ಹೋರಾಟದ
ಬದುಕಿಗೆ
ನಾಂದಿ....
ಅವು
ಪ್ರೇಮಲೋಕದ
ದಾಸಾನು-
ದಾಸರಾಗಿ
ಪರಸ್ಪರ
ಅಭಿವ್ಯಕ್ತ
ಗೊಂಡಾಗಲೇ
ದಾಂಪತ್ಯದ
ಬಾಳದು
ತೊಳೆದು
ಪುಟವಿಟ್ಟ
ಚಿನ್ನ!
ಬದುಕಿನ
ಪರಮಾನ್ನ!!
*
ಸುಳ್ಳು ಮತ್ತು ಸತ್ಯ
ಸುಳ್ಳು
ಸಮರ್ಥನೆಗೆ
ಸಾವಿರ
ಬಾಗಿಲು
ಇಲ್ಲಿ ಬರೀ
ವಿಕಾರ...
ಸತ್ಯಕ್ಕೆ
ಒಂದೇ
ಹೆಬ್ಬಾಗಿಲು
ಅದೇ
ಪರಮ
ನಿರಾಕಾರ!
*
ಸತ್ಯದ ಓಲೈಕೆ
ಈ ರಾಜಕಾರಣಿ
-ಗಳನೆಂದೂ
ಓಲೈಸದಿರಿ...
ಓಲೈಸುವುದಾದರೆ
ಓಲೈಸಿ ಬಿಡಿ-
ಭಕ್ತಿ ಭಂಡಾರಿ
ಬಸವನನು;
ಸತ್ಯವಾಹಕ
ಗಾಂಧಿಯನು;
ಭಗವಾನ್
ಬುದ್ಧನನು...
ಸತ್ಯದಾಲದ
ಮರದಡಿ
ಕುಳಿತ
ಮಹಾತ್ಮರನು!
*
ಸ್ವಾರ್ಥ-ನಿಸ್ವಾರ್ಥ
ನಮಗೆ
ನಾವೇ
ಮಾಡಿಕೊಂಡರೆ
ಅದು
ನಮ್ಮ
ಹಿಂಡುವ
ಸ್ವಾರ್ಥ...
ಅನ್ಯರಿಗೆ;
ಸಮಾಜಕೆ;
ದುರ್ಬಲರಿಗೆ
ಮಾಡಿದರೆ
ಅದು
ಬೆಳಗುವ
ನಿಸ್ವಾರ್ಥ!
*
ಘಮ ಸೋಪು...
ಓ ಸುಮಭರಿತ
ಘಮ ಸೋಪೇ...
ಆರಂಭದಲಿ
ಅದೆಷ್ಟು ಸುವಾಸನೆ!
ಉಪಯೋಗಿಸಿದಷ್ಟೂ
ಸವೆದು ಬಿಡುವೆ ;
ಅದಕೆ ತ್ಯಾಗದ
ಲೇಪನ ಬೇರೆ...
ಕೊನೆಯಲ್ಲಿ
ಒಮ್ಮೊಮ್ಮೆ
ತುಂಡಾಗಿ ಬಿಡುವೆ ;
ಇಲ್ಲವೇ ಸವೆದು
ಮಾಯವಾಗಿ
ಸುಮಧುರ
ಸುವಾಸನೆಯ
ನೆನಪುಗಳನು
ಉಳಿಸಿ ಬಿಡುವೆ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ