ಆರ್ ವಿ ಭದ್ರಯ್ಯ = ನೀರ್ ಭದ್ರಯ್ಯ: ಇಂತವರೂ ಇದ್ದಾರೆ......
ಸಂಪದ ಮಿತ್ರರೇ
ಇದು ಒಬ್ಬ ಸಾಮಾನ್ಯ ಮನುಷ್ಯನ ಜನೋಪಯೋಗಿ ಕೆಲಸದ ಕಥೆ ...
ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಆಧಾರ:ಬೆಂಗಳೂರು ಮಿರರ್ ೦೫.೦೪.೨೦೦೯ (ಒಳ್ಳೆಯದ್ದು ಎಲ್ಲಿದ್ದರು ಅದನ್ನು ಎಲ್ಲರಿಗೂ ತಿಳಿಸುವುದು , ತಿಳಿಯುವಂತೆ ಮಾಡುವುದು ನಡೆಯುತ್ತಿರಬೇಕು)
ಇವರ ಹೆಸರು ಆರ್ ವಿ ಭದ್ರಯ್ಯ ಈಗ ೬೫ ರ ಇಳಿವಯಸ್ಸಲ್ಲಿರುವ ಇವರು ರಾಜಾಜಿನಗರದಲ್ಲಿ ವಾಸಮಾಡುತ್ತಿದ್ದು, ವೀಳ್ಯದ ಎಲೆ, ಕುಂಕುಮ ವಿಬೂತಿ ,ಹೀಗೆ ಬಹುಪಯೋಗಿ ಪೂಜಾ ಸಾಮಾಗ್ರಿ ಮಾರುವ ಅಂಗಡಿ ಇಟ್ಟುಕೊಂಡಿದ್ದಾರೆ. ಈಗೀಗ ಅವರಿಗೆ ವಯಸ್ಸಾಗಿರುವುದರಿಂದ ಅವರ ಮಕ್ಕಳು ಅಂಗಡಿ ಮತ್ತು ನಾನು ಈಗ ಹೇಳ ಹೊರಟಿರುವ 'ಆ ಕೆಲಸ' ವನ್ನು ವಹಿಸಿಕೊಂಡಿದ್ದಾರೆ.
ನೀವು ಯಾವತಾದ್ರು ನೀರಡಿಕೆಯಿಂದ ಸುಸ್ತಾಗಿ ನೀರು ಹುಡುಕಿಕೊಂಡು ಅಲೆದಾಡಿ, ಕೊನೆಗೆ ಅದು ದೊರೆತಾಗ , ಅದನ್ನು ಕುಡಿದಾಗ ಆಗುವ 'ಅನಿರ್ವರಚನೀಯ ಅನುಭವ' ವನ್ನು ಅನುಭವಿಸಿದ್ದೀರಾ? ಈಗಂತೂ ಮೊದಲೇ ಬಿರು ಬೇಸಗೆ ಇಂತ ದಿನದಲ್ಲಿ ನಾವು ಹೋದಲ್ಲೆಲ್ಲ ಬಾಟಲಿಯಲ್ಲಿ ನೀರು ಹಿಡಿದುಕೊಂಡು ಹೋಗಲಂತೂ ಆಗಲಿಕ್ಕಿಲ್ಲ, ಹಾಗಿದ್ದಾಗ ನಾವು ಹೋಟೆಲಿಗೋ ಇಲ್ಲ ಜೂಸ್ ಅಂಗಡಿಗೋ ಹೋಗುವುದು ಸಾಮನ್ಯ, ಅದೂ ಹತ್ತಿರವಿದ್ದರೆ ಸರಿ,
ದೂರ ಇದ್ದರೆ?
ನೀವು ಎಂದಾದರೂ ರಸ್ತೆ ಬದಿ ಇಟ್ಟಿರುವ ಟ್ಯಾಂಕ್, ಗಡಿಗೆ ನೀರು ಕುಡಿದಿದ್ದೀರ?
ಹಾಗಾದರೆ ಅದು 'ಆರ್ ವಿ ಭದ್ರಯ್ಯನವರದೇ' ಕೊಡುಗೆ..
ಇವರು ತಮ್ಮ ಅಂಗಡಿಯಿಂದ ಬರುವ ಅಲ್ಪ ಪ್ರಮಾಣದ ಲಾಭದಲ್ಲೇ ಸಂಜಕ್ಕೆ ಉಪಯೋಗವಾಗಲಿ ಅಂತ ಅಲ್ಲಲ್ಲಿ ಕುಡಿಯುವ ನೀರಿನ ಸುಮಾರು ೪೦೦ ಟ್ಯಾಂಕ್ ಗಳನ್ನೂ ಇಟ್ಟಿದ್ದಾರೆ, ಅದಕ್ಕೆ ದಿನ ಬೆಳಗ್ಗೆ ಮತ್ತು ಸಂಜೆಯೊಳಗೆ ಎರಡು ಸಾರಿ 'ತಣ್ಣೀರ್' ಹೌದು ತಣ್ಣೀರು ಸುರಿಯುತ್ತಾರೆ. ಹೀಗೆ ದಿನಂಪ್ರತಿ ಸಾವಿರಾರು ಜನ ಬಾಯಾರಿದವರು ಅದನ್ನು ಕುಡಿದು ಅದನ್ನು ಅಲ್ಲಿ ಮದಗಿದವರಿಗೆ ಧನ್ಯವಾದ ಅರ್ಪಿಸುತ್ತಾರೆ. ಇದಕ್ಕೆ ಆಗುವ ಖರ್ಚು ಎಷ್ಟು? ಅವರು ಹೇಳುವುದಿಲ್ಲ ನಾವೇ ಊಹಿಸಬಹುದು. ಇದಕ್ಕಾಗಿ ಮನೆಯವರು ಮೊದಲಿಗೆ ವಿರೋಧ ಮಾಡಿದರೂ ಕ್ರಮೇಣ ಇವರಿಗೆ ಸಹಕರಿಸಿದರು. ಇದೆಲ್ಲ ಶುರುವಾಗಿದ್ದು ಹೀಗೆ ಇವರು ವ್ಯಾಪಾರ ಶುರು ಮಾಡಿದ ಹೊಸದರಲ್ಲಿ ಮಹಿಳೆಯೊಬ್ಬಳು ಬಿರುಬಿಸಿಲಲ್ಲಿ ಮಗುವನ್ನು ಹೊತ್ತುಕೊಂಡು ಇವರ ಹತ್ತಿರ ಬಂದು ನೀರು ಕೇಳಿದಳಂತೆ, ಇವರು ಇಲ್ಲ ಅಂದರು.
ಹೀಗಾಗಿ ಇವರು ಮೊದಲಿಗೆ ೧೭ ರೂಪಾಯಿ ಕೂಡಿಸಿ ಒಂದು ಗಡಿಗೆ ತಂದು ಅದರಲ್ಲಿ ನೀರು ತುಂಬಿಸಿ ಮರಳು ಹಾಕಿ(ಮರಳು ಬಿಸಿಲನ್ನು ಹೀರಿಕೊಂಡು ನೀರನು ತಂಪು ಆಗಿಡುತ್ತೆ ) ಇತ್ತರಂತೆ ಆಗ ದಾರಿಯಲ್ಲಿ ಹೋಗಿ ಬರುವವರೆಲ್ಲ ಆ ನೀರು ಕುಡಿದು ದಣಿವಾರಿಸಿಕೊಂಡರು. ಇದು ಹೀಗೆ ನಡೆದು ಕೆಲ ವರ್ಷಗಳ ನಂತರ ವ್ಯಾಪ್ತಿಯೂ ದೊಡ್ಡದಾಗಿ ಈಗ ಹಲವೆಡೆ ಬಸ್ ಸ್ಟ್ಯಾಂಡ್ , ಸಿಮೆಂಟ್ ಚೇರ್ ಮತ್ತು ಅದರ ಪಕ್ಕದಲ್ಲೇ ನೀರಿನ ಟ್ಯಾಂಕ್ ಸಹಾ ನಿರ್ಮಿಸಿದ್ದಾರೆ, ಮೊದಲಿಗೆ ತಾವೇ ಸ್ವತಹ ನೀರಿನ ಟ್ಯಾಂಕ್ ಶುದ್ಧಗೊಳಿಸಿದ್ದರಂತೆ ಈಚೀಚೆಗೆ ವಯಸಾಗಿದ್ದರಿಂದ ಅದನ್ನು ಮಕ್ಕಳಿಗೆ ವಹಿಸಿದ್ದಾರೆ. ಇವರ ಜನಪ್ರಿಯತೆ ಎಸ್ತಿದೆಯೆಂದರೆ, ಬೆಂಗಳೂರಿನ ಮೂಲೆ ಮೂಲೆಯಿಂದ ನಮ್ಮಲ್ಲೂ ಒಂದು ನೀರಿನ ಟ್ಯಾಂಕ್ ನಿರ್ಮಿಸಿ/ಹಾಕಿ ಎಂದು ಕೋರಿಕೆ ಬರುತ್ತಿದೆ, ಕೆಲವೊಂದು ಕಡೆ ಅಕ್ಕ-ಪಕ್ಕದವರೇ ನೀರಿನ ಟ್ಯಾಂಕ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಇವರು ನೀರಿನ ಟ್ಯಾಂಕ್ ಬಸ್ ಸ್ಟ್ಯಾಂಡ್ , ಸಿಮೆಂಟ್ ಚೇರ್ ಈ ಎಲ್ಲ ಸ್ಥಳಗಳಲ್ಲಿ ಹಾಕಿಸಿದ್ದಾರೆ. .ಭಾಷ್ಯಮ್ ಸರ್ಕಲ್ ರಾಜಾಜಿನಗರ್ .
ಟೋಲ್ ಗೇಟ್ ರಾಜಾಜಿ ನಗರ್ .
ಸುಜಾತಾ ಚಿತ್ರಮಂದಿರ ಎದುರುಗಡೆ ರಾಜಾಜಿ ನಗರ್ .
ನವರಂಗ್ ಸರ್ಕಲ್ .
ರಾಮ ಮಂದಿರ್ ರಾಜಾಜಿ ನಗರ್ .
ಕಮ್ಮನಹಳ್ಳಿ ಸರ್ಕಲ್
.ನಂದಿನಿ ಲಿ ಔಟ್ ಬಸ್ ಸ್ಟಾಪ್ .
ಇಸ್ಕಾನ್ ದೇವಸ್ಥಾನ ಎದುರಿಗೆ .
ಆನಂದರಾವ್ ಸರ್ಕಲ್ .
ಚಿಕ್ಕಪೇಟೆ ಸರ್ಕಲ್ .
ಜಯನಗರ ನಾಲ್ಕನೇ ಬ್ಲಾಕ್ ಕಾಂಪ್ಲೆಕ್ಸ್ ಬಳಿ .
ವಿಜಯನಗರ ಬಸ್ ಸ್ಟಾಪ್ .
ಬಸವೇಶ್ವರನಗರ ಬಸ್ ಸ್ಟಾಪ್ (ಇನ್ನು ಹಲವೆಡೆ ಇರಬಹುದು) ...
ಈಗ ಹೇಳಿ ಈಗಿನ ಕಾಲದಲ್ಲೂ ನೀರಡಿಕೆಯನ್ನು ಹಿಂಗಿಸುವ 'ಮಹತ ಕಾರ್ಯ ' ಮಾಡುವ ಇಂತವರು ಇರುತಾರೆಯೇ? (ಇದೆ ತರಹ ಹಲವೆಡೆ ಕೆಲ ಸಂಘ ಸಂಸ್ಥೆಗಳು ನೀರಿನ ಟ್ಯಾಂಕ್ ಇಟ್ಟಿವೆ ಅವರಲ್ಲಿ ಮುಖ್ಯವಾಗಿ ಜೈನರು ರಾಜಸ್ಥಾನಿಗಳು ಇದನ್ನು ನಾವು ಉತ್ತರ ಕರ್ನಾಟಕದ ಹಲವೆಡೆ ಕಾಣಬಹುದು ಇದು ಮುಖ್ಯವಾಗಿ ಬಿಸಿಲು ಕಾಲದಲ್ಲಿ ಕಾಣಸಿಗುತ್ತದೆ ) ಹೀಗೆ ಯಾರಿಗೂ ಗೊತ್ತಾಗದಂತೆ ಎಸ್ಟೊಂದು ಜನ ಮಹಾನ್ ಕಾರ್ಯ ಮಾಡುತ್ತಿರುತ್ತಾರೆ, ಅದು ಎಲ್ಲರಿಗೂ ಇಳಿಯಬೇಕು, ನಾವೂ ಅವರನ್ತಾಗಬೇಕು, ಅನ್ನಿಸುತ್ತಿಲ್ಲವೇ? ಈ ಬರಹ ಓದಿ ಹೇಗನ್ನಿಸಿತು ತಿಳಿಸ್ತೀರಲ್ಲ......
ಇದೆ ತರಹದ ಹಲವು ವಿಷಯಗಳು ಇರಬಹುದು ನಿಮಗೆ ಗೊತ್ತಿದ್ದರೆ ದಯಮಾಡಿ ತಿಳಿಸಿ..
ಮಹಾತ್ಮ ಕಬೀರ್ ಅವರ ಒಂದು ಹೇಳಿಕೆ ಇಲ್ಲಿ ನೆನಪಿಗೆ ಬರುತೆ ಅದು
''When the Wealth in the House Increases, When Water fills a Boat, Thro them out with both Hands" 'MAHAATMA KABIR'