ಆಲೂಗಡ್ಡೆ ಉಪ್ಪಿನಕಾಯಿ

ಆಲೂಗಡ್ಡೆ ಉಪ್ಪಿನಕಾಯಿ

ಬೇಕಿರುವ ಸಾಮಗ್ರಿ

ಆಲೂಗಡ್ಡೆ (ಬಟಾಟೆ) ಅರ್ಧ ಕಿಲೋ, ಕೆಂಪು ಒಣ ಮೆಣಸಿನಕಾಯಿಗಳು (ಹುರಿದದ್ದು) ೧೫-೧೮, ಕೊತ್ತಬಂಬರಿ ಬೀಜ ಸ್ವಲ್ಪ, ಮೆಂತೆ ೨ ಚಮಚ, ಸಣ್ಣ ಲಿಂಬೆ ಗಾತ್ರದ ಹುಣಸೇ ಹುಳಿ, ಸಾಸಿವೆ ೩ ಚಮಚ, ಇಂಗು ಒಂದು ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ.

ತಯಾರಿಸುವ ವಿಧಾನ

ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ತೆಗೆದಿಡಬೇಕು. ಮೆಂತೆ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗಡ್ಡೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು. 

ಈಗ ಒಂದು ಚಿಕ್ಕ ಬಾಣಲೆಗೆ ೪-೫ ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಇಂಗು ಮತ್ತು ಮೊದಲೇ ಮಾಡಿಟ್ಟ ಮೆಂತೆ, ಸಾಸಿವೆ ಪೇಸ್ಟ್ ಹಾಕಿ ಸ್ವಲ್ಪ ಉಪ್ಪು ಹಾಕಬೇಕು. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಹಾಕಿ ೫-೬ ನಿಮಿಷ ಹುರಿಯಬೇಕು. ನಂತರ ಒಲೆ ಆರಿಸಿ ತಣ್ಣಗಾಗಲು ಬಿಡಬೇಕು. ಈಗ ರುಚಿಕರವಾದ ಆಲೂಗಡ್ಡೆ ಉಪ್ಪಿನಕಾಯಿ ತಯಾರು.