ಆಶಯ- ಒಂದು ಗಝಲ್

ಆಶಯ- ಒಂದು ಗಝಲ್

ಕವನ

ಬಾಳಿನುದ್ದಕ್ಕೂ ಕಡಲ ತೆರೆಯಂತೆ

ಜೊತೆಯಾಗು|

ತರುವಿಗೆ ಅಂಟಿಕೊಂಡ ಲತೆಯಂತೆ

ಜೊತೆಯಾಗು||

 

ಹೃದಯಕೆ ಸಂತಸವ ನೀಡಿದ

ಚೆಲುವ ಮದನಿಕೆ|

ಸುಮದ ಗಂಧವರಸುವ ದುಂಬಿಯಂತೆ

ಜೊತೆಯಾಗು||

 

ಗಗನದಲಿ ತೇಲುವ ಗೌರವರ್ಣದ

ಜೀಮೂತಗಳು|

ನಲ್ಲನ ಹುಡುಕುತಿರುವ ಪ್ರೇಮಿಯಂತೆ

ಜೊತೆಯಾಗು||

 

ಇಂದ್ರನ ಸಗ್ಗದಲ್ಲಿನ ಅಪ್ಸರೆಯಾಗಿ

ಕುಣಿಯುತಿರು|

ನಂದನವನದ ಗೋಪಿಕೆ ರಾಧೆಯಂತೆ

ಜೊತೆಯಾಗು||

 

ಕಾವ್ಯದೇವಿಯ ಆರಾಧಕ ಅಭಿನವನ

ನೂತನ ಕವಿತೆ|

ಮನಕೆ ಮುದಗೊಳಿಸುವ ಕಾಂತೆಯಂತೆ

ಜೊತೆಯಾಗು||

 

*ಶಂಕರಾನಂದ ಹೆಬ್ಬಾಳ*, ಕನ್ನಡ ಉಪನ್ಯಾಸಕರು 

 

ಚಿತ್ರ್