ಆಸರೆ
ಕವನ
ಬಾಳ ಇರುಳ ದೀಪಕೆ, ಹನಿ ಎಣ್ಣೆಯ ಆಸರೆ,
ಆರಿಹೋಗೊ ಜ್ಯೋತಿಗೆ, ಜೋಡಿ ಕೈಯ ಆಸರೆ,
ದೂರ ಪಯಣ ದೋಣಿಗೆ, ಬೀಸೋ ಹುಟ್ಟೇ ಆಸರೆ,
ತೇಲಿಗೆ ಹೋಗೋ ಆ ದೋಣಿಗೆ, ಅಲೆಯ ತಾಳದಾಸರೆ,
ಮೂಗ್ಗಾಗಿ ನಿಂತ ಹೂವಿಗೆ, ಮಂಜ ಹನಿಯೇ ಆಸರೆ,
ಅರಳೋ ಆ ಹೂವಿಗೆ, ದುಂಬಿ ಗುನುಗು ಆಸರೆ,
ಮುಗಿಲ ಮೋಡಕೆ, ತಂಪು ಗಾಳಿಯೇ ಆಸರೆ,
ಕರಗುವ ಆದೇ ಮೋಡಕೆ, ಅದರ ಹನಿಯ ಬಳಗದಾಸರೆ.
ಹಸಿರು ಹರಡಿ ನಿಂತ ಇಳೆಗೆ, ಸೊನೆ ಮಳೆಯಾಸರೆ,
ಮುಗುಳ್ನಗುವ ಧರೆಗೆ, ಚಂದಿರ ಬೆಳೆದಿಂಗಳಾಸರೆ,
ತೂಗಿ ಹಾಡೊ ಹಕ್ಕಿಗೆ, ಎಲೆಯ ಚಿಗುರು ಆಸರೆ,
ಗೂಡಲ್ಲಿ ಬಾಳೊ ಹಕ್ಕಿಗೆ, ಮರದ ಕೊಂಬೆಯೇ ಆಸರೆ.
ಮುಳುಗೊ ಸೂರ್ಯನೆಡೆಯ ನಡಿಗೆಗೆ, ದಿಂಗತದ ಅರಿವೇ ಆಸರೆ,
ಚುಕ್ಕಿ ಚಂದ್ರಮ ವೆಲ್, ನಮ್ಮ ದಾರಿಗಾಸರೆ,
ಬಾಳ ಪಥದಲಿ ನಿನ್ನ ಇರುವೆಕೆಯೇ ನನಗಾಸರೆ,
ಬಾಳ ಕೊನೆಯ ನಡಿಗೆವರಿಗೂ, ನಿನದೆ ಹೆಜ್ಜೆ ಆಸರೆ.