ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!
ಇರುಳಿನ ಮುಸುಕು ಈ ಕರಾಳ ಶತಮಾನಗಳ ನೆತ್ತಿಯಿಂದ ಬೀಳಿದಾಗ,
ವೇದನೆಯ ಮೇಘಗಳು ಕರಗಿ ಮತ್ತು ಹದುಳ ಸಾಗರವು ಉಕ್ಕಿ ಹರಿದಾಗ,
ಆಕಾಶವು ಪಳಗಿರದೆ ನೃತ್ಯಿಸಿದಾಗ, ಮತ್ತು ಭೂಮಿಯು ಹಾಡಿದಾಗ,
ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!
ಸಾವುಗಳನು ಸಹಿಸುವ ಯುಗ-ಯುಗಗಳಿಗಾಗಿ, ನಾವು ಬದುಕುತ್ತಿರುವ ಪ್ರಾತಃ,
ನಂಜಿನ ಕರಡು ಗುಟುಕಿಸುವ ನಾವು, ಯಾವ ಅಮೃತಗಾಗಿ ತವಕಿಸುವ ಪ್ರಾತಃ,
ಆ ಹಸಿದ ಬಾಯಾರಿದ ಅಮ್ತರಾತ್ಮಗಳಿಗೊಂದು ದಿನ ಕರುಣತೆ ಪ್ರಧಾನಿಸುವುದು,
ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!
ಈ ನಾಳು ನಮ್ಮ ನಸೆಗಳಲ್ಲಿ ಮೌಲ್ಯವಿಲ್ಲವೆಂದು ಒಪ್ಪಿಕೊಂಡೆ,
ಆವೆಮಣ್ಣಿಗೂ ಬೆಲೆ ಬಂದರು, ಮಾನವತ್ವ ಪ್ರಾಧಾನ್ಯಕಳೆಯುದು ;
ಕೃತಕ ನಾಣ್ಯಗಳಲ್ಲಿ ವ್ಯಕ್ತಿಯ ಘನತೆ ತೂಕವಾಗದಿದ್ದಾಗ,
ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!
ಪದಾತಿಗಳ ಪರಿಶುದ್ಧತೆಯು ಮಾರಾಟವಾಗದಿದ್ದಾಗ,
ಪ್ರೀತಿ ಜಜ್ಜಲಾಗುವುದಿಲ್ಲ; ಗೌರವಗಳು ಹರಾಜುಗೊಳ್ಳದಿದ್ದಾಗ;
ತನ್ನ ನಿರ್ಲಜ್ಜ ಕಾರ್ಯಗಳಿಗೆ ಈ ಜಗತ್ತು ನಾಚಿಕೆಯಾಗುವಾಗ,
ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!
ನಿಸ್ಸಹಾಯಕ ವೃದ್ಧಾಪ್ಯವು ಹಾಳು ಬೀದಿಗಳ ಧೂಳನ್ನು ತಿನ್ನದಿರುವಾಗ;
ಕೃತ್ರಿಮವರಿಯದ ಯುವಕರು ಕಶ್ಮಲ ಬೀದಿಗಳಲ್ಲಿ ಭಿಕ್ಷೆ ಬೇಡದಿರುವಾಗ;
ತಮ್ಮ ಹಕ್ಕುಗಳನ್ನು ಕೇಳುವವರಿಗೆ ಗಲ್ಲು ಶಿಕ್ಷೆಯನ್ನು ದಂಡಿಸದಿದ್ದಾಗ;
ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!
ಜನಸಾಮಾನ್ಯರು ಅನಶನದ ಅಗ್ನಿಯಿಂದ ದಹಿಸಲ್ಪಡದಿರುವಾಗ;
ಕುಚಗಳ ಸುಡುಹ ನರಕಗಳಲ್ಲಿ ಆಸೆ ಬಯಕೆಗಳು ಕಬಳಿಸದಿದ್ದಾಗ;
ನರಕಕ್ಕಿಂತ ಕಶ್ಮಲ ಈ ಪ್ರಪಂಚವು ಸ್ವರ್ಗವಾಗಿ ಪರಿವರ್ತಿಸಿದ್ದಾಗ;
ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!
* * * * *
ಉರ್ದು ಮೂಲ : ಸಾಹಿರ್ ಲುಧಿಯಾನವಿ
ಕನ್ನಡಕ್ಕೆ : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು
ಆಕಾರ ಗ್ರಂಥ : ಗಾತಾ ಜಾ ಎ ಬಂಜಾರ.
ನವ ದೆಹಲಿ: ಪಂಜಾಬಿ ಪುಸ್ತಕ್ ಭಂಡಾರ್, 1964.
