ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !

ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !

ಬರಹ

ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್, ನವೆಂಬರ್, ೮, ೧೯೦೮ ರಲ್ಲಿ ಬಹಳ ಹೆಸರುವಾಸಿಯಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರ ಶಿಕ್ಷಣ ಬಾಲ್ಯದಿಂದ ಪದವಿಯವರೆವಿಗೂ ಕನ್ನಡನೆಲದಲ್ಲೇ ನಡೆಯಿತು. ಸ್ನಾತಕೊತ್ತರ ಶಿಕ್ಷಣಕ್ಕಾಗೆ ಅವರು ಯುರೊಪಿನ ಸೋರ್ಬೊನಿಯದ, ಮೌಂಟ್ ಪೆಲೀರ್ ವಿಶ್ವವಿದ್ಯಾನಿಲಯದಲ್ಲಿ ಸಂಶೊಧನೆ ಮಾಡಲು ತಮ್ಮ ೧೯ ನೇ ವಯಸ್ಸಿನಲ್ಲೇ ಹಡಗಿನಲ್ಲಿ ಪ್ರಯಾಣ ಮಾಡಿದರು.ಅಲ್ಲಿ, ಅವರ ಶಿಕ್ಷಣವೆಲ್ಲಾ ಪ್ರೆಂಚ್ ಭಾಷೆಯಲ್ಲಿ ನಡೆಯಿತು.ಆದರೆ ಅವರು ಮುಂದೆ ಬರೆದ ಕಾದಂಬರಿಗಳೆಲ್ಲಾ ಹೆಚ್ಚಾಗಿ ಇಂಗ್ಲೀಷಿನಲ್ಲೇ ! ಫ್ರಾನ್ಸಿನಲ್ಲಿ ಕಳೆದ ೧೦ ವರ್ಷಗಳ ಜೀವನದಲ್ಲಿ, ೧೯೩೧ ರಲ್ಲಿ ಫ್ರೆಂಚ್ ಭಾಷಾ ತಜ್ಞೆ, 'ಕ್ಯಾಮಿಲ್ಲೆ ಮೌಲಿ'ಯವರ ಒಡನಾಟದಿಂದ ಪ್ರಾರಂಭವಾಗಿ ಮದುವೆಯಲ್ಲಿ ಕೊನೆಗೊಂಡಿತು.೧೯೩೯ ರಲ್ಲಿ ಕಾರಣಾಂತರಗಳಿಂದ ಮದುವೆ ಮುರಿಯಿತು. ೧೯೩೧-೩೨ ರಲ್ಲಿ ಅವರು ೪ ಕನ್ನಡ ಲೇಖನಗಳನ್ನು 'ಜಯಕರ್ಣಾಟಕ' ವೆಂಬ ನಿಯತಕಾಲಿಕಕ್ಕೆ ಬರೆದುಕೊಟ್ಟಿದ್ದರು.ವಿವಾಹ ವಿಚ್ಛೇದನದ ನಂತರ, ಬೇಸತ್ತ ಅವರು, ಭಾರತಕ್ಕೆ ಬಂದು ಕೆಲವುಕಾಲ ಆಶ್ರಮಗಳಲ್ಲಿ ಕಳೆದರು.೧೯೩೮ ರಲ್ಲಿ ಬರೆದ 'kantapura',ಅವರಿಗೆ ಅಂತರ ರಾಷ್ಟ್ರೀಯ ಖ್ಯಾತಿ ತಂದಿತ್ತು.ಈ ಕಾದಂಬರಿಯು ಬ್ರಿಟೀಷರ ಅಂದಿನ ಆಳ್ವಿಕೆಯ ವಿರುದ್ಧದ ಅಹಿಂಸಾತ್ಮಕ ಹೋರಾಟದ ಕುರಿತಾದ, ಗಾಂಧಿಜಿಯವರ ಬೋಧನೆಗಳ ಪ್ರಭಾವಗಳ ನೈಜ ಚಿತ್ರಣವಾಗಿದೆ.ರಾಯರು 'Tomorrow'ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದರು. ವಿಶ್ವಯುದ್ಧದನಂತರ ಅವರು ಫ್ರಾನ್ಸ್ ಗೆ ವಾಪಸ್ ಹೋದರು. ಅಲ್ಲಿಂದ ಅವರು ವಿಶ್ವದಾದ್ಯಂತ ಸುತ್ತಿದರು.೧೯೪೭ ರಲ್ಲಿ 'The cow of the Barricades' ಪ್ರಕಟಿಸಿದರು. ೧೯೫೦ ರಲ್ಲಿ ಅಮೆರಿಕಕ್ಕೆ ಭೇಟಿಮಾಡಿದರು.೧೯೬೫ ರಲ್ಲಿ ಅಲ್ಲಿನ ನಟಿ, 'ಕ್ಯಾಥರೀನ್ ಜೊನ್ಸ್' ರವರೊಡನೆ ಮರು ವಿವಾಹ ಮಾಡಿಕೊಂಡರು.೧೯೬೫ ರಿಂದ ೧೯೮೩ ರ ವರೆಗೆ ಭಾರತೀಯ ತತ್ವಶಾಸ್ತ್ರ ಮತ್ತು ಬೌದ್ಧ ಮತವನ್ನು ಟೆಕ್ಸಾಸ್ ವಿಶ್ವ ವಿದ್ಯಾನಿಲಯದಲ್ಲಿ, ಭೋಧಿಸುತ್ತಾ ಬಂದರು. ಅವರು ಬರೆದ ಕಾದಂಬರಿಗಳು :

೧. ೧೯೩೯ 'Changing India' (I. Singh ಜೊತೆ )
೨. ೧೯೪೮ 'Whither India' (I. Singh ಜೊತೆ)
೩. ೧೯೬೪ 'ಕೇಂದ್ರೀಯ ಅಕ್ಯಾಡಮಿ ಪ್ರಶಸ್ತಿ'.
೪. ೧೯೬೯ 'ಪದ್ಮ ಭೂಷಣ ಪ್ರಶಸ್ತಿ'.
೫. ೧೯೭೬ 'Comrade Kirillov'
೬ ೧೯೭೮' The Policeman and the Rose.
೭. ೧೯೮೮ ' The Chess master and his life.
೧೯೮೮ ' Neustadt International priZe' for
Literature, ಪ್ರಶಸ್ತಿ.
೮. ೧೯೯೩ ' On the Ganga Ghat'
೯. ೧೯೯೬ 'The meaning of india'
೧೦. ೧೯೯೬ ' Great Indian way'
೧೧. ೧೯೯೮ 'The Best of Raja rao'
೧೯೯೭ 'ಕೇಂದ್ರ ಸಾಹಿತ್ಯ ಅಕ್ಯಾಡಮಿ ಫೆಲೋ ಆಗಿ ಆಯ್ಕೆ.

ಅವರು ಇತ್ತೀಚೆಗೆ ಬರೆದ ' Daughter of the mountain' ಸಧ್ಯದಲ್ಲೇ ಬರಲಿದೆ.

ಆರ್. ಕೆ. ನಾರಾಯಣ್ ರಂತೆಯೆ, ಶ್ರೀ ರಾಜಾರಾಯರು ಭಾರತದ ಒಬ್ಬ ಖ್ಯಾತ ಇಂಗ್ಲೀಷ್ ಕಾದಂಬರಿಕಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರೊಬ್ಬ ಹುಟ್ಟುಕನ್ನಡಿಗರೆಂಬುದು ನಮಗೆ ಸಂತಸ ನೀಡುವ ಸಂಗತಿ !