ಇದೆಂಥಾ ಸಂಸ್ಕೃತಿ
ಬರಹ
ಏನ್ಗುರು ಎಂಬ ಬ್ಲಾಗ್ ಒಂದನ್ನು ಯಾರೋ ಉತ್ಸಾಹಿಗಳು ಆರಂಭಿಸಿದ್ದಾರೆ. ಅಂತರ್ಜಾಲದಲ್ಲಿ ಹೀಗೆ ಕನ್ನಡ ಕಾಣಿಸಿಕೊಳ್ಳುವುದು ಸಂತೋಷದ ಸಂಗತಿ. ಆದರೆ ಇದನ್ನು ಸಂದರ್ಶಿಸುವವರ ಸಂಖ್ಯೆ ಹೆಚ್ಚಲಿ ಎಂಬ ಉದ್ದೇಶದಿಂದ ಸಿಕ್ಕ ಸಿಕ್ಕ ಬ್ಲಾಗ್ ಗಳಲ್ಲಿ ಕಂಡ ಲೇಖನಗಳ ಅಡಿಯಲ್ಲಿ ಲೇಖನದ ಬಗ್ಗೆ ಅಭಿಪ್ರಾಯ ಬರೆಯದೆ ಏನ್ಗುರು ಓದಿ ಎಂಬ ಒಂದು ಸಂದೇಶವನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಬಗೆಯ ಸ್ಪ್ಯಾಮಿಂಗ್ ನನಗೇನೋ ಅಶ್ಲೀಲ ಅನ್ನಿಸುತ್ತದೆ. ಕನ್ನಡದಲ್ಲಿರುವ ಯಾವ ಬ್ಲಾಗಿಗರೂ ಈ ಬಗೆಯ ಸ್ಪ್ಯಾಮಿಂಗ್ ನಲ್ಲಿ ತೊಡಗಿಲ್ಲ. ಏನ್ಗುರು ಬಳಗ ಇನ್ನಾದರೂ ಇದರಿಂದ ದೂರವಿರಲಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ