ಇದೇನಾ “ಧಿಮ್ಮಿತನ” ವೆಂದರೆ?

ಇದೇನಾ “ಧಿಮ್ಮಿತನ” ವೆಂದರೆ?

ಬರಹ

“ಆವರಣ”, ನಾನು ಕೊಂಡು ಓದಿದ ಮೊದಲ ಕಾದಂಬರಿ! ಅದೂ ಕೇವಲ ೪ ದಿನದಲ್ಲಿ! ಇದು ಬೇರೆಯವರಿಗೆ ಸಾಮಾನ್ಯ ಅನ್ನಿಸಬಹುದು, ಆದರೆ ನನ್ನ ಮಟ್ಟಿಗೆ ಇದು 'ಆಶ್ಚರ್ಯ’. ನಾನು ಯಾವತ್ತೂ ಯಾವುದೂ ಕಾದಂಬರಿಯನ್ನ ಕೊಂಡು ಓದಿದವನಲ್ಲ. ಹಾಗಂತ ಓದುವುದೇ ಇಲ್ಲ ಅಂತಲ್ಲ. ಪತ್ರಿಕೆ ಹಾಗು ಅಂಕಣ/ಲೇಖನಗಳನ್ನು ಓದುತ್ತೀನಿ. ದೇಶಕ್ಕೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಸರಿ, ಏನೋ ಕುತೂಹಲ. ಅದರಲ್ಲೂ ಇತಿಹಾಸದ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ. ಹಾಗಾಗಿ ನನ್ನ ಮನಸ್ಸು ಯಥಾಪ್ರಕಾರ “ಆವರಣ”ದ ಕಡೆ ಓಡಿತು.

 

ನಾನು ಕಾದಂಬರಿಯಲ್ಲಿ ಬರುವ ‘ಡಾ.ರಾಜಧಾನ್’ ಹಾಗು ‘ಲಕ್ಷ್ಮಿ(ರಜಿಯಾ)’ಯ ಮಿಶ್ರಣದಂತೆ. ಡಾ.ರಾಜಧಾನ ಸತ್ಯವನ್ನು ಒಪ್ಪಿಕೊಂಡರೂ/ಅರಿತರೂ, ಸಭೆಯಲ್ಲಿ ಲಕ್ಷ್ಮಿಯ ಜೊತೆ ದನಿಗೂಡಿಸುವುದಿಲ್ಲ. ಬಹುಶಃ ನಾನು ಅವನ ಸ್ಥಾನದಲ್ಲಿದ್ದಿದ್ದರೆ, ಲಕ್ಷ್ಮಿಗೆ ಬೆಂಬಲಿಸುತ್ತಿದ್ದೆನೋ ಏನೋ. ಆದರೂ ಪ್ರೊ.ಶಾಸ್ತ್ರಿ ಅಂಥವರು ಇನ್ನೂ ಹೆಚ್ಚು, ಇಲ್ಲದ ಉಲ್ಲೇಖನೆಗಳನ್ನು (ಸುಳ್ಳು) ಕೊಡುತ್ತಿದ್ದರೆ ಮತ್ತೆ ಅವರ ಕಡೆಗೆ ವಾಲುತ್ತಿದ್ದೆನೋ ಏನೋ. ಅದೇನೇ ಇರಲಿ, ತುಂಬಾ ಜನರು ಹೇಳಿರುವ ಪ್ರಕಾರ, ಓದುತ್ತಾ ಓದುತ್ತಾ ರಕ್ತ ಕುದಿಯಿತು, ಮೈ ಝುಂ ಎಂದಿತು. ಪುಸ್ತಕ ಮುಗಿಸುವತನಕ ಊಟ ನೆನಪಿಗೆ ಬರಲಿಲ್ಲ. ಮುಗಿಸಿದಮೇಲೆ ೩ ದಿನ ನಿದ್ದೆ ಬರಲಿಲ್ಲ. ಪ್ರತಿಯೊಬ್ಬ ಭಾರತೀಯನೂ ಇದನ್ನು ಓದಬೇಕು. ಅದಕ್ಕೆ ಎಲ್ಲಾ ಭಾಷೆಗಳಲ್ಲೂ ಇದನ್ನು ಅನುವಾದಿಸಬೇಕು. ಯಾವುದೇ ಪೂರ್ವಗ್ರಹವಿಲ್ಲದೆ ಓದಿದರೆ ಹೆಚ್ಚು ಪರಿಣಾಮಕಾರಿ ಅಂತ. ಇಷ್ಟು ಹೇಳಿದ ಮೇಲೆ ಇತಿಹಾಸ ಆಸಕ್ತರು ಓದದೆ ಇರುವುದಕ್ಕೆ ಸಾಧ್ಯವೆ?

 

ಕಾದಂಬರಿಯಲ್ಲಿ ತೋರಿಸಿರುವ ಹಲವು ಘಟನೆಗಳ ಮೇಲ್ಮೈ ನನಗೆ ಮುಂಚೆತವಾಗಿಯೇ ತಿಳಿದಿತ್ತು. ಆದರೆ ಇಷ್ಟು ಆಳವಾಗಿ ತಿಳಿದಿರಲಿಲ್ಲ. ಅದಕ್ಕಾಗಿಯೇ ಇರಬೇಕು, ಬೇರೆಯವರಿಗೆ ಆದಷ್ಟು ಅನುಭವ ನನಗೆ ಆಗಲಿಲ್ಲ. ಅವರು ಹೇಳಿದ ಹಾಗೆ ಭಾವನೆಗಳು ಉಕ್ಕಲಿಲ್ಲ, ಹೊಟ್ಟೆ ಅಷ್ಟೊಂದು ಉರಿಯಲಿಲ್ಲ. ಯಾಕಿರಬಹುದು ಅಂತ ಯೋಚಿಸತೊಡಗಿದೆ. ನಂತರ ತಿಳಿಯಿತು, ಅವರ ಅನುಭವ ನನಗೆ ಹೊಸದೇನಲ್ಲವೆಂದು. ಹಿಂದೆ ಓದಿದ ಕೆಲವು ಲೇಖನಗಳ ನೆನಪಾಯಿತು.

 

Francois Gautier ಹೇಳಿದಂತೆ ಭಾರತದಲ್ಲಿ ನಡೆದ ಹತ್ಯಾಕಾಂಡಕ್ಕೆ ಸಮಾನವಾದದ್ದು ಇತಿಹಾಸದಲ್ಲಿ ಬೇರೊಂದಿಲ್ಲ. ನ‍ಮ್ಮ ದೇಶದಲ್ಲಿ ನಡೆದ ಹತ್ಯಾಕಾಂಡಗಳು, ನಾಜಿಗಳು ಯಹೂದಿಗಳ ಮೇಲೆ ನಡೆಸಿದ ಅಥವಾ ಅಮೇರಿಕದ ಮೇಲೆ ಟರ್ಕ್ಸ್ ನಡೆಸಿದ ಅಥವಾ ದಕ್ಷಿಣ ಅಮೇರಿಕದ ಮೂಲ ನಿವಾಸಿಗಳ ಮೇಲೆ ಸ್ಪಾನಿಶ್ ಮತ್ತು ಪೋರ್ಚುಗೀಸರು ಆಕ್ರಮಣ ಮಾಡಿದಾಗ ಆದ ಹತ್ಯಾಕಾಂಡಗಳೆಲ್ಲಕ್ಕಿಂತಲೂ ಬಹುಪಾಲು ದೊಡ್ಡದು.

(Where is India’s holocaust museum? - http://www.rediff.com/news/2003/oct/21franc.htm)

 

Koenard Elstರವರ ಅಭಿಪ್ರಾಯದಂತೆ ಭಾರತದಲ್ಲಿ ೧೦ ಕೋಟಿಗೂ ಹೆಚ್ಚು ಹಿಂದುಗಳ ನರಮೇಧವಾಗಿದೆಯಂತೆ!

(The biggest holocaust in the world history - http://hinduwebsite.com/history/holocaust.asp)

 

ಇವನ್ನ ಮೊದಲಬಾರಿಗೆ ಓದಿದಾಗ, ಅವರು ಹೇಳಿದ ಹಾಗೆ ಕೋಪ ಕೆರಳಿತು, ರೋಷ ಉಕ್ಕಿತು, ವಿಚಿತ್ರಭಾವನೆಗಳು ಉದ್ವೇಗಗೊಂಡವು. ಇವೆಲ್ಲ, ಸತ್ಯ ಬಯಲಾಗುವಾಗ ನಮ್ಮ ಒಳ ಅರಿವಿನಲ್ಲಿ ಆಗುವ ಬದಲಾವಣೆಗಳ ಅನುಭವವಿರಬಹುದು. ಕ್ರಮೇಣ ಬೌದ್ಧಿಕ ದೃಷ್ಠಿಕೋಣದಲ್ಲಿ ಮಾರ್ಪಾಡಾಯಿತು. ದೇಶಭಕ್ತಿ ಅಂದರೆ ಇದೇ ಇರಬೇಕು. ನಮ್ಮೆಲ್ಲರ ದೇಶಭಕ್ತಿ ಬೂದಿ ಮುಚ್ಚಿದ ಕೆಂಡದ ಹಾಗೆ ಅಂಥ ಹೇಳುತ್ತಾರೆ. ಕೆಂಡ ಹೊರ ಹೊಮ್ಮುವಾಗ ಇಂತಹ ಪ್ರಕ್ರಿಯೆಗಳು ಆಗುತ್ತದೆ ಅನ್ನಿಸುತ್ತದೆ.

 

ಆದರೆ ಈ ತರಹ ಅನ್ಯಾಯದ ವಿರುದ್ಧ ರೊಚ್ಚಿಗೇಳಬೇಕು ಎಂಬಂತಹ ಸ್ಥಿತಿ ಎಷ್ಟು ದಿನ ಇರುತ್ತದೆ? ಒಂದೆರಡು ಸಲ ಬಾಂಬ್ ಸ್ಫೋಟಗೊಂಡರೆ ಸಿಡಿಮಿಡಿಗೊಳ್ಳುತ್ತೇವೆ, ಸಿಟ್ಟಿಗೇಳುತ್ತೇವೆ. ಆದರೆ ಪದೇ ಪದೇ ಮರುಕಳಿಸಿದರೆ, ಸ್ವಲ್ಪ ದುಃಖವಾಗಿ, ಇದು ಸಾಮಾನ್ಯವಾಗಿಬಿಟ್ಟಿದೆ ಅಂತ ಸುಮ್ಮನಾಗುತ್ತೇವೆ. ದಿನಾ ಬಾಂಬ್ ಇಡೋವ್ರ್ಗೆ ಹೋರಾಡೋವ್ರ್ಯಾರು. ಕಾದಂಬರಿಯಲ್ಲಿ ರಾಜಕುಮಾರನೇ ಹೇಳುವ ಹಾಗೆ, ಅಷ್ಟೂ ದಿನದ ಶಿಕ್ಷಣ, ಕ್ಷಣದಲ್ಲಿ ನೀರುಪಾಲಾಯಿತು. ಕಿತ್ತು ತಂದು ಅಂಗಾತ ಮಲಗಿಸಿ ವಿಷ್ಣುವಿನ ವಿಗ್ರಹದ ಮೇಲೆ ನಿಂತು, ಕುತ್ತಿಗೆಯ ಮೇಲೆ ಕತ್ತಿ ಇಟ್ಟ ತಕ್ಷಣ, ಕ್ಷಣಾರ್ಧದಲ್ಲಿ ತನಗೆ ತಿಳಿಯದಂತೆ ಶರಣಾದ ಮೇಲೆ, ಇಷ್ಟು ವರ್ಷದ ಯುದ್ಧಕಲೆ ತರಬೇತಿಗೆ ತಣ್ಣೀರೆರಚಿದಂತಾಯಿತು.

 

ಅದೇ ತರಹ, ಸತ್ಯ ತಿಳಿದರೂ ಇಂದಿಗೂ ಆ ರಾಜಕುಮಾರನ ಮನಃಸ್ಥಿತಿ ನಮ್ಮಲ್ಲಿ ಉಳಿದುಕೊಂಡಿದೆಯೇ? ಕೆಲವೊಮ್ಮೆ ಖ್ವಾಜಾಜಹಾನನು (ರಾಜಕುಮಾರ) ಬಾಕು ತಿವಿದು ಮನ್‍ಸ‍ಬ್‍ದಾರರಾದ ಎಜಾಜ್ ಅಹಮದ್, ಮೋಯಿನುದ್ದೀನ್ ತುರಾನಿ ಹಾಗು ಔರಂಜೇಬನನ್ನು ಕೊಲ್ಲಬೇಕು ಅನ್ನಿಸಿದರೂ, ಯಾರ ಉಸಾಬರಿಯೂ ಇಲ್ಲದೆ ಹೆಂಡತಿ ಮಕ್ಕಳೊಂದಿಗೆ ಪಾರಾಗಿ ಹಾಯಾಗಿ ಜೀವನ ನಡೆಸಬೇಕೆನ್ನುವಂತೆ; ಮುಂಬಯಿಯಲ್ಲಿ ರೈಲುಗಳು ಸ್ಪೋಟಗೊಂಡಾಗ, ನೀವು ಎಷ್ಟೇ ಬಾಂಬ್‍ಗಳಿಟ್ಟರು ನಾವು ತಲೆ ಕೆಡಸಿಕೊಳ್ಳದೆ ಆರಾಮಾಗಿ ನಮ್ಮ ಕೆಲಸದಲ್ಲಿ ನಾವು ಇ‍ರುತ್ತೀವಿ ಎಂಬಂತಹ ಭಾವನೆ ಮೂಡಿಸುವ ಈ-ಮೇಲ್‍ಗಳು ಬಂದವು. ಎಷ್ಟೋ ವರ್ಷಗಳಿಂದ ಹಾಳು ಹಂಪಿಯನ್ನು ಇನ್ನೂ ಹಾಳು ಮಾಡುತ್ತಿರುವವರ ಬಗ್ಗೆ, ಮುಂದೆ ಆಗಬಹುದಾದಂತಹ ಅನಾಹುತದ ಬಗ್ಗೆ ಎಚ್ಚರಿಸುತ್ತಿದ್ದರೂ ನಾವು ಕಣ್ಣು ಕಾಣುವ ಕುರುಡರಂತಿದ್ದೇವೆಯೆ? ಇದೇನಾ ‘ಧಿಮ್ಮಿತನ’ವೆಂದರೆ?

 

‘ಧಿಮ್ಮಿ’ಯೆಂದರೆ ಮುಸ್ಲಿಮರ ಆಡಳಿತದಲ್ಲಿ ಮುಸ್ಲಿಮೇತರರು ಸಾಮಾಜಿಕವಾಗಿ ರಾಜಕೀಯವಾಗಿ ಸಾಂಸ್ಕೃತಿಕವಾಗಿ ಧಾರ್ಮಿಕವಾದಿ ಆರ್ಥಿಕವಾಗಿ ಅನುಭವಿಸುವ ಎರಡನೆ ದರ್ಜೆಯ ಸ್ಥಾನಮಾನ. ಕ್ರಮೇಣ ಅವರಲ್ಲಿ ದಾಸ್ಯ ಮನೋಭಾವ ಬೆಳೆಯುತ್ತದೆ, ನೈತಿಕತೆ ಕುಸಿಯುತ್ತದೆ.

(http://www.dhimmitude.org or

http://www.reference.com/search?r=13&q=Dhimmi)

 

ನಮ್ಮ ಹಿಂದಿನ ಕೇಂದ್ರ ಕಾನೂನು ಸಚಿವರಾದ ಸುಬ್ರಮಣ್ಯಂ ಸ್ವಾಮಿಯವರು ಹೇಳುವಂತೆ, ರಾಮನಾಥಪುರಂ ಮತ್ತು ವೆಲ್ಲೂರ್ ಜಿಲ್ಲೆಗಳ ನಗರಪಾಲಿಕೆಯು ಮುಸ್ಲಿಮರ ಕೈಯಲ್ಲಿದೆಯಂತೆ. ಅಲ್ಲಿ ಸೂಚನೆಗಳು ಉರ್ದುವಿನಲ್ಲಿ ಪ್ರಕಟಿಸುತ್ತಾರಂತೆ. ಅಲ್ಲಿನ ಹಿಂದುಗಳಿಗೆ ನೀವು ಮತಾಂತರವಾಗದಿದ್ದರೆ ಸವಲತ್ತುಗಳು ಸಿಗುವುದಿಲ್ಲವೆಂದು ನಿಷ್ಠುರವಾಗಿ ಹೇಳುತ್ತಿದ್ದಾರಂತೆ.

(Islamic Fundamentals for Hindu Dummies - http://www.jahajeedesi.com/forums/index.php?showtopic=3865&st=0&p=8162&#entry8162 or

http://groups.google.co.cr/group/Hindu-Religion/msg/1f0b61e68c54d1e5 )

 

“Common Criminal Code”ನ್ನ ಒಪ್ಪಿರುವ ಮುಸ್ಲಿಮರು “Common Civil Code”ನ್ನ ಯಾಕೆ ಒಪ್ಪುತ್ತಿಲ್ಲ? ಒಬ್ಬ ಮುಸ್ಲಿಮನು ಕಳ್ಳತನ ಮಾಡಿದರೆ ಇಸ್ಲಾಂ ಪ್ರಕಾರ ಅವನ ಕೈ ಕತ್ತರಿಸಬೇಕಂತೆ. ಆದರೆ ಮುಸ್ಲಿಮರು ನಮ್ಮ ಅಪರಾಧಿ ಸಂಹಿತೆಯನ್ನು ಒಪ್ಪಿರುವುದರಿಂದ, ಬೇರೆಯವನಿಗೆ ಏನು ಶಿಕ್ಷೆಯೋ, ಇವನಿಗೂ ಅದೇ ಶಿಕ್ಷೆ. ಆದರೆ ಇನ್ನೊಂದು ಕಡೆ ಅಮೀರನಂತೆ ಎರಡನೆ ಮದುವೆ ಆಗುವುದಕ್ಕೆ ಇಸ್ಲಾಂಗೆ ಮತಾಂತರಗೊಂಡಿರುವ ಉದಾಹರಣೆಗಳು ಸಾಕಷ್ಠಿವೆ. ಇವರು ಇನ್ನೂ ಧಿಮ್ಮಿಯನ್ನು ಹೇರುತ್ತಿದ್ದಾರೆಯೆ?

 

‘ಜಾತೀಯತೆ’ ಸನಾತನ ಧರ್ಮಕ್ಕೆ ಅಂಟಿದ ಶಾಪವೆಂದು ಹೇಳುತ್ತಾರೆ. ನಿಜವಾಗಿಯೂ ಇದು ಶಾಪವೆ? “ಶಾಪ” ಅನ್ನುವ ಪದ ಉಪಯೋಗಿಸಿದರೆ, ನಾವು ಮಾಡಿದ ಪಾಪಕ್ಕೆ ಯಾರೋ ಶಾಪ ಕೊಟ್ಟರೆಂದು ಅರ್ಥೈಸಬಹುದು. ಹಾಗಾದರೆ ನಾವು ಮಾಡಿದ ಪಾಪವಾದರೂ ಏನು? ಆಕ್ರಮಣಕಾರರನ್ನು ಸ್ವಾಗತಿಸಿರುವುದು ಪಾಪವೇ? ಅಲ್ಲ. ಅದು ಆ ಕ್ಷಣದಲ್ಲಿ ನಮ್ಮಲ್ಲಿದ್ದ ದೌರ್ಬಲ್ಯ. ಹಾಗಾದರೆ ಜಾತೀಯತೆಯಂತಹ ಹೇಸಿಗೆಗಳು ನಮ್ಮ ಧರ್ಮಕ್ಕೆ ಆಕ್ರಮಣಕಾರರಿಂದ ಅಂಟಿದ ರೋಗವೆನ್ನಬಹುದಲ್ಲವೆ?. ‘ರೋಗ’ವೆಂದರೆ, ಅದು ಬಾಹ್ಯ ಶಕ್ತಿಗಳಿಂದ ಉಂಟಾದದ್ದು. ಅದರ ವಿರುದ್ಧ ಹೋರಾಡಲು ನಮ್ಮ ಮನೋಭಾವಕ್ಕೆ ಧೈರ್ಯ ತುಂಬಿಸಬಹುದು. ಆದರೆ ‘ಶಾಪ’ವೆಂದರೆ ನಮ್ಮ ಪೂರ್ವಿಕರ ಪಾಪದಿಂದ ಬಂದದ್ದೆಂದು ಅವರ ಮೇಲೆ ಅಸಹ್ಯ ಹುಟ್ಟಿಸಬಹುದು. ಈ ರೀತಿ ‘ಶಾಪ’ವೆಂದು ವ್ಯಾಖ್ಯಾನ ಮಾಡುವುದೂ ನಮ್ಮಲ್ಲಿ ಉಳಿದಿರುವ ‘ಧಿಮ್ಮಿ’ಯ ಒಂದಂಶವೇ?

 

ಆದರೂ ಧಿಮ್ಮಿಯ ಪ್ರಭಾವ ಕಮ್ಮಿಯಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಭಾರತಮಾತೆ ಉತ್ತುಂಗ ಶಿಖರಕ್ಕೆ ಮರಳುತ್ತಿರುವ ಹಾದಿಯಲ್ಲಿದ್ದಾಳೆ. ಪ್ರಪಂಚವೆಲ್ಲ ನಮ್ಮ ಕಡೆ ಕುತೂಹಲದಿಂದ ನೋಡತೊಡಗಿದೆ. ವೇದ ಉಪನಿಷತ್ತುಗಳಲ್ಲಿ ನಂಬಿಕೆ ಇಟ್ಟವರು ಲಕ್ಷಾಂತರ ವರ್ಷಗಳ ಕಾಲಚಕ್ರ ಹಾಗು ನಮ್ಮ ವೈಭವದ ‘graph’ ಎಳೆದರೆ, ಈ ೧೦೦೦ ವರ್ಷಗಳ ಕುಸಿತ ಗಣನೀಯವಲ್ಲದ್ದು. ನಮ್ಮ ಧರ್ಮ ಒಂದು ಬಾರಿ ಸೀನಿದಂತೆ ಈ ೧೦೦೦ ವರ್ಷಗಳು ಅಂಥ ಅಂದುಕೊಂಡು ಚೇತರಿಸಿಕೊಳ್ಳಬಹುದು.

 

 

 

- ಸುನಿಲ್ ಜಿ.ಆರ್.

(supersunil@gmail.com)