ಇನಿಯನ ಮೌನ
ಕವನ
ನನ್ನ ಒಲವಿನ ಇನಿಯನೆ
ನಿನ್ನ ಸಭ್ಯತೆ, ಸದ್ಗುಣಗಳ
ಎಷ್ಟು ವರ್ಣಿಸಿದರೂ ಸಾಲದು
ನನ್ನ ಪದಗಳ ಅಕ್ಷರ ಮಾಲೆ. 😊
ರಾತ್ರಿಯಲ್ಲಿ ಸಾವಿರ ಚುಕ್ಕಿಗಳ ನಡುವೆ
ಚಂದ್ರನೇ ಅತೀಯಾಗಿ ಪ್ರಕಾಶಿಸಿದಂತೆ
ನೂರಾರು ಸ್ನೇಹಿತರ ನಡುವೆ
ನೀನೆ ಅತಿಯಾಗಿ ಆಕರ್ಷಿಸಿದೆ. 😍
ನಿನ್ನ ಹೃದಯದ ಸರೋವರದ ಜೊತೆ
ನನ್ನ ಭಾವನೆಗಳ ಚಿನುಮೆ ಹರಿಸಲು ಬಂದಾಗ
ಶಾಂತಸಾಗರದಷ್ಟೇ ನಿಮ್ಮ ಮನ ಮೌನವಾಗಿರುದೇಕೆ !? 😌