ಇನ್ನೊಂದಿಷ್ಟು ಗಾದೆಗಳು - 1

ಇನ್ನೊಂದಿಷ್ಟು ಗಾದೆಗಳು - 1

ಬರಹ

ಹಪ್ಪಳ ಮುರಿಯೋಕೆ ಡೊಗ್ಗಾಲು ಹಾಕಬೇಕೇ?

ಎಂಥೆಂತದ್ದೊ ಅಂತರಿಸಿದ ಮೇಲೆ ಸಂಕ್ರಾಂತಿ ಬಂತಂತೆ .. ಮೂಸೋಕೆ

ಉರಿದು ಉಪ್ಪಾಗಿ ತಿಂದು ಮಣ್ಣಾದಳು

ತುಪ್ಪದಂಥಾ ಮಾತಿಗೆ ಒಪ್ಪಿಕೊಂಡು ತಿಪ್ಪೇ ಪಾಲಾದ

ನರಿ ಕೊಂಬಿದ್ದರೂ ನರರಿಗೆ ಹೆದರಬೇಕು

ನರಿ ಮದುವೇಲಿ ಕತ್ತೇ ಪಾರುಪತ್ಯ (ಆಡಳಿತ, ಪೌರೋಹಿತ್ಯ)

ನಾಯಿ ಮುಟ್ಟಿದ ಮಡಕೆ ನಾಯಿ ಕೊಳ್ಳಿಗೆ (ಕೊರಳಿಗೆ) ಕಟ್ಟು

ಬಟ್ಟೆ ಮಾಸಿದರೆ ಅಗಸನಿಗೆ, ನಾಲಿಗೆ ಮಾಸಿದರೆ ಕೆರಕ್ಕೆ

ಪಿತ್ತ ನೆತ್ತಿಗೇರಿದವಗೆ ಶಂಖ ಕರ್ರಗೆ ಕಂಡರೆ ಅದರ ಬಣ್ಣ ಕೆಟ್ಟೀತೇ?

ಅತ್ತಿತ್ತಲ ಮಾರಿ ಬಂದು ಅತ್ತೆಯ ಬಡಕೊಂಡು (ಬಡಿದು ಕೊಂದು) ಹೋಗಲಿ

ಬಾಯಿಲ್ಲದೋನು ಬರದೇಲಿ ಸತ್ತನಂತೆ

ಕಲ್ಲಲ್ಲಿ ಇಟ್ಟವನ ಬೆಲ್ಲದಲ್ಲಿ ಇಡಬೇಕು

ಮಂಕುದಿಣ್ಣೆ ಮದಿವೆಗೆ ಹೋದರೆ ವಾಲಗದವರೆಲ್ಲಾ ಅಟ್ಟಾಡಿಕೊಂಡು ಹೊಡೆದರಂತೆ

ನಮ್ಮ ಮನೆ ರಾಗಿ ಕಲ್ಲಾಡಿದರೆ ನಾಡೆಲ್ಲಾ ನೆಂಟರು

ಹಚ್ಚಗಿದ್ದ ಕಡೆ ಮೇಯುವುದು ಬೆಚ್ಚಗಿದ್ದ ಕಡೆ ಮಲಗುವುದು

ಹಲ್ಲು ಹತ್ತಿದವ (ರುಚಿ ಹತ್ತಿದವ) ಒಳ್ಳು (ಒರಳು) ನೆಕ್ಕಿದ

ಹೀನ ಸುಳಿ (ದುಷ್ಟ ಬುದ್ದಿ) ಬೋಳಿಸಿದರೂ ಹೋಗದು

ಹೊತ್ತು (ಸೂರ್ಯ, ಬಿಸಿಲು) ಬಂದತ್ತ ಕೊಡೆ (ಛತ್ರಿ) ಹಿಡಿ

ಅಜ್ಜಿ ಸಾಕಿದ ಮಗ ಕಜ್ಜಕ್ಕೂ ಬಾರದು

ಅಲಲಾ ಅನ್ನೊ ಅಳ್ಳಿ-ಮರ ನಂಬಬಹುದು, ಮೆತ್ತಗಿರೊ ಕಳ್ಳಿ-ಗಿಡ ನಂಬಲಾಗದು

ಆಳು ನೋಡುದ್ರೆ ಅಬ್ಬಬ್ಬಾ! ಬಾಳು ನೋಡುದ್ರೆ ಬಾಯ್ ಬಡ್ಕೊಬೇಕು

ಆಳಿನ ಮೇಲೆ ಆಳು ಬಿದ್ದು ದೋಣು ಬರಿದಾಯ್ತು

ಇದ್ದಲಿನವನ ಸ್ನೇಹಕ್ಕಿಂತ ಗಂಧದವನ ಗುದ್ದಾಟ ಲೇಸು

ಇರಲಾರದೆ ಇರುವೆ ಬಿಟ್ಟುಕೊಂಡು ಕಿರಂಗೂರಿಗೆ ಹೋಗಿ ಕಣಿ ಕೇಳಿದ

ಉಪ್ಪು ಬರುವ ಹೊತ್ತಿಗೆ (ನೆಮ್ಮದಿ ಬರುವ ಕಾಲಕ್ಕೆ) ಸೊಪ್ಪಿನಾಟ ಪೂರೈಸಿತು

ಎತ್ತೋರ್ ಇಲ್ಲದ ಮಕ್ಕಳ ಹೆತ್ತೇನು ಫಲ

ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರ ಸಮಾನ

ಗುಟ್ಟು ನಿಲ್ಲದ ಬಾಯಿಗೆ ಮುತ್ತು ಕೊಟ್ಟ ಹಾಗೆ

ಕಡಲೆ ಕಾಯೋಕೆ ಕಾಗೆ ಕಾವಲು ಹಾಕಿದಂತೆ

ದಾನ ದಾನಕ್ಕಿಂತ ನಿದಾನ ದೊಡ್ಡದು

ದಿಕ್ಕು ದಿಕ್ಕಿಗೆ ಹೋದರೂ ದುಕ್ಕ ತಪ್ಪದು

ಉರಿದ ಹೊಟ್ಟೆಗೆ ಉಪ್ಪು ತುಂಬಿಸಿದಂಗೆ

ಇರುಳು ಚಿಂತೆ ನಿದ್ದೆಗೇಡು, ಹಗಲು ಚಿಂತೆ ಕೆಲಸಗೇಡು

ಆಡುವವ ಆಡಿದ್ರೆ ನೋಡುವವಗೆ ಸಿಗ್ಗು

ಅಂಜಿದವನ ಮೇಲೆ ಕಪ್ಪೆ ಹಾರಿದಂಗೆ

ಹೆಸರಿಗೆ ಹೆಂಡ್ರ ಕಾಣೆ ಮಗನ ಹೆಸರು ನಂಜುಂಡ

ಅಲ್ಲದ ಕನಸು ಕಂಡರೆ ಎದ್ದು ಕುಂಡ್ರು.

ನಮ್ಮ ಕಣ್ಣು ನಮಗೆ ಕೆಡಿಸಿತು