ಇನ್ನೊಂದಿಷ್ಟು ಗಾದೆಗಳು

ಇನ್ನೊಂದಿಷ್ಟು ಗಾದೆಗಳು

ಬರಹ

ಪಥ್ಯ ಹಾಕುವವನ ಬೆರಳು ಕಚ್ಚಿದ ಹಾಗೆ.

ಪಡಿಗೆ ಬಂದವನಿಗೆ ಕಡಿ ಅಕ್ಕಿ ಆಗದೇ.

ಪರಡಿಯ ರುಚಿ ಕರಡಿಗೆ ತಿಳದೀತೇ.

ಪರರೊಡವೆಯ ಬಯಸಬಾರದು.

ಪಾಪ ಪ್ರಕಟ ಪುಣ್ಯ ಗೋಪ್ಯ.

ಪಾಪಿಗೆ ಪರಮಾಯು ಲೋಭಿಗೆ ಚಿರಾಯು .

ಪಾಪಿಯ ದೇವರೆಂದು ಪಾಪೊಸಿನಿಂದ ಬಡಿಯಬಾರದು.

ಪಾಪಿ ಹೋದಲ್ಲಿ ಪಾತಾಳ.

ಬಂದ ದಿವಸ ನೆಂಟ, ಮರು ದಿವಸ ಬಂಟ, ಮೂರನೇ ದಿವಸ ಕಂಟ.

ನಿತ್ಯ ಹೋದರೆ ನುಚ್ಚಿಗೆ ಸಮ.

ಬಂದದ್ದು ಬಿಡಬಾರದು ಬಾರದ್ದು ಬಯಸಬಾರದು.

ಬಂದ ಹಾಗೆಯೆ ಹೋಯಿತು.

ಬಕ ಧ್ಯಾನದಂತೆ.

ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು.

ಆನೆ ಸಾಧುವಾದರೆ ಅಗಸ ಮೋಳಿಗೆ ಹೇರಿದ.

ಬಟ್ಲು ಮುರಿದು ಕಂಚು ಮಾಡಿದ.

ಬಡವರ ಮಕ್ಕಳಿಗೆ ಬಂಗಡೆ ಮೀನು ಕಜ್ಜಾಯ.

ಬಡವನ ಸಿಟ್ಟು ದವಡೆಗೆ ಮೂಲ.

ಬಲ್ಲವರ ಮಾತು ಬೆಲ್ಲ ಸವಿದಂತೆ.

ಬಸವನ ಹಿಂದೆ ಬಾಲ.

ಬಾಡಿಗೆ ಎತ್ತು ಎಂದು ಬಡಿದು ಬಡಿದು ಹೂಡಬಾರದು.

ಬಾನ ಹರಿದು ಬೀಳುವಾಗ ಅಂಗೈ ಒಡ್ಡಿದರೆ ತಡದೀತೆ.

ಬಾಯಾರಿದಾಗ ಬಾವಿ ತೋಡಿದ ಹಾಗೆ.

ಬಾಯಿ ಇದ್ದರೆ ಮಗ ಬದುಕ್ಯಾನು.

ಬಾಯಿಯಲ್ಲಿ ಬೆಲ್ಲ ಕರುಳು ಕತ್ತರಿ.

ಬಾಯಿಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ.

ಬಾಳುವ ಮನೆಗೊಂದು ಬೊಗಳುವ ನಾಯಿ.

ಬಾಳೇ ಹಣ್ಣಿಗೆ ಗರಗಸ ವೇಕೆ.

ಬಿತ್ತುವಾಗ ಮಲಗಿದರೆ ಕೊಯ್ಯುವಾಗ ಹಗುರವಾಯಿತು.

ಬಿಮ್ಮಗೆ ಒಗೆಯಬೇಡ ಬಿಸಲಿಗೆ ಹಾಕ ಬೇಡ ಬೇಕಾದಷ್ಟು ದಿನ ಬಾಳೇನು.

ಬಿಸಿಲು ಬಂದ ಕಡೆಗೆ ಕೊಡೆ ಹಿಡಿ.

ಬೀಜಕ್ಕೆ ತಕ್ಕ ಫಲ.

ಬುದ್ಧಿ ಬಲಿಯದವನಿಗೆ ಮನೆ ಎಲ್ಲಾ ಸೌದೆ.

ಬೂರುಗದ ಮರವನ್ನು ಗಿಣಿ ಕಾದ ಹಾಗೆ.

ಬೆಂಕಿಯಿಂದ ಸುಟ್ಟ ಹುಣ್ಣು ಮಾಯುವುದು, ನಾಲಿಗೆಯಿಂದ ಸುಟ್ಟದ್ದು ಮಾಯದು.

ಬೆಂಕಿ ಇದ್ದಲ್ಲಿ ಬೆಳಕು ನೀರಿದ್ದಲ್ಲಿ ಕೆಸರು.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಹೊಕ್ಕವರಿಗೆ ಕಾಣದೆ.

ಕೆಟ್ಟ ಮೇಲೆ ಲೊಟ್ಟ.

ಕೆಟ್ಟ ಮೇಲೆ ಬುದ್ಧಿ ಬಂತು.

ಹಾದೀಲಿ ಹೋಗುವವನ ಕೆಣಕ ಅವನು ಬಂದು ನಿನ್ನ ತದಕ.

ಹಾಯ್ದೆ ಇದ್ದರೂ ಎತ್ತಿನ ಕೊಂಬು ಉದ್ದ.

ಹಾರದ ಕೋತಿಗೆ ಮುಪ್ಪಾಗ ಬೆಲ್ಲ ತಿನ್ನಿಸಿದರಂತೆ.

ಹಾರಾಡೋ ಅಪ್ಪುಂಗೆ ತೂರಾಡೋ ಮಗ ಹುಟ್ದಂಗೆ.

ಹಾರುವಯ್ಯನಿಗೆ ಹರಕೆ ಕಟ್ಟಿದಕ್ಕೆ ಹಳೇ ಪರಕೇಲಿ ಹೊಡ್ದ ಹಾಗೆ.

ಹಾರುವ ಆಳಲ್ಲ, ಬಾಳೆ ದಡಿಯಲ್ಲ.

ಹಾರುವರ ಮೋರೆಯಾದರೂ ನೀರಿನಲ್ಲಿ ತೊಳೆಯದಿದ್ದರೆ ನಾರದೆ ಇದ್ದೀತೆ.

ಹಾರೋ ಹಕ್ಕಿಯ ಪುಕ್ಕ ಎಣಿಸಿದಂತೆ.

ಹಾರ್‍ಸೋನೋ ತೀರ್‍ಸೋನೋ.

ಹಾಲಲ್ಲಾದ್ರೂ ಅದ್ದು, ನೀರಲ್ಲಾದ್ರೂ ಅದ್ದು.

ಹಾಲು ಬಿಟ್ಟವರ ಮನೆಗೆ ಸೀಬಿ ಅಂದಂಗೆ.

ಹಾಲು ಕಾಯ್‍ಸ್ಕೊಂಡು ನಾನಿದ್ದೆ ಹಲ್ಲು ಕಿರ್‍‍ಕೊಂಡು ನೀ ಬಂದೆ.

ಹಾಲುಕ್ಕಿದ ಮನೇಲಿ ಮೇಲ್‍ಗರೀಲಿ.

ಹೆಣ್ಣಿನ ಬಾಳು ಕಣ್ಣೀರಿನ ಗೋಳು.

ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು.

ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ.

ಹೆಂಡತಿಯಿಲ್ಲದ ಮನೆ ದೇವರಿಲ್ಲದ ಗುಡಿ.

ಹೂವ ತರುವ ಮನೆಗೆ ದೇವ ಹುಲ್ಲು ಹೊರುವ.

ಹುಣ್ಣು ಮಾದರೂ ಕಲೆ ಮಾದೀತೇ.

ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ.

ಹಾಲಿಗಿಂತ ಕೆನೆ ರುಚಿ.

ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ.

ಹಿಂದಲ ಮಾತು ಮರಿ ಮುಂದಲ ಬಾಳು ಅರಿ.

ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ.

ಹರಕಿನಲ್ಲಿ ಇಲಿ ಕಡಿಯಿತು.

ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ.

ಹಂಪ್ಯಾಗ ಇರೂದಕ್ಕಿಂತ ತನ್ನ ಕೊಂಪ್ಯಾಗ ಇರೂದ್ ಲೇಸು.

ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು.

ಸುಳ್ಳು ಹೇಳಿದರೂ ನಿಜದ ತಲೆಯ ಮೇಲೆ ಹೊಡೆದಂಗೆ ಹೇಳಬೇಕು.

ಮೊಂಡ ಮಾವನಿಗೊಬ್ಬ ಭಂಡ ಅಳಿಯ.

ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು.

ಸರಿದರೆ ಒತ್ತಣ್ಣ ಒತ್ತಿದರೆ ಸರಿಯಣ್ಣ.

ಬಂಗಾರಕ್ಕೆ ಕುಂದಣವಿಟ್ಟಂತೆ.

ವಜ್ರಕ್ಕೆ ಸಾಣಿ ಹಿಡಿದಂತೆ.

ಮೊಂಡ ಕೊಡಲಿ ರಟ್ಟೆಗೆ ಮೂಲ.

ಮುದುಕೀ ನಿನ್ನಾಟ ಮುಂದೈತಿ.

ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು.

ಮಾಳಿಗೆ ಮನೆ ಬೇಕು ಜೋಳಿಗೆ ಹಣ ಬೇಕು ಮಾದೇವನಂಥಾ ಮಗ ಬೇಕು ಗೌರಿಯಂಥಾ ಸೊಸೆ ಬೇಕು.

ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ.

ಮಳೇ ನೀರ ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದಂತೆ.

ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು.

ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು.

ಮಂಡಕ್ಕಿ ತಿಂದ ಮಗ ಮದ್ದಾನೆ ತರುಬಿದ ಮೃಷ್ಟಾನ್ನ ತಿಂದ ಮಗ ನೊಣ ಝಾಡಿಸಿದ.

ಮಂದಾಳಿಗೊಂದು ಮುಂದಾಳು.

ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ.

ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು.

ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ.

ಬೆಣ್ಣೆಯೊಳಗಿನ ಕೂದಲು ತೆಗೆದಂತೆ.

ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ.

ಬೆಂದ ಮನೇಲಿ ಹಿರಿದದ್ದೇ ಲಾಭ.

ಸುಡುವ ಮನೆಯ ಗಳ ಹಿರಿದಂತೆ.

ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ.

ಬೀಳು ಭೂಮಿಗೆ ಬೀಜ ದಂಡ.

ಬೀಜ ಸಣ್ಣದಾದರೆ ಮರ ಸಣ್ಣದೋ.