ಇನ್ಫಿ ಮೂರ್ತಿ ಬಗ್ಗೆ `ಒನ್' ಜೋಕ್!
ಬರಹ
`ರಾಷ್ಟ್ರಗೀತೆ' ಕುರಿತ ವಿವಾದಾತ್ಮಕ ಹೇಳಿಕೆಯ ನಂತರ ಇನ್ಫೋಸಿಸ್ ನಾರಾಯಣ ಮೂರ್ತಿ ಬಗ್ಗೆ `ರೇಡಿಯೋ ಒನ್' ಎಫ್ಎಂ ಚಾನೆಲ್ನಲ್ಲಿ ಒಂದು ಜೋಕ್ ಬಿತ್ತರವಾಗುತ್ತಿದೆ. ಯಾರಾದರೂ ಕೇಳಿದ್ದೀರಾ? ಅದು ಹೀಗಿದೆ:
ಇಬ್ಬರ ನಡುವೆ ಲೋಕಾಭಿರಾಮದ ಮಾತುಕತೆಗಳ ನಂತರ ಒಬ್ಬ ಹೇಳುವುದು-
`ನನಗೆ ಕೆಲ್ಸ ಸಿಕ್ಕಿದೆ'
`ಎಲ್ಲಿ?'
`ಇನ್ಫೋಸಿಸ್ನಲ್ಲಿ'
`ಇನ್ಫೋಸಿಸ್ನಲ್ಲಾ? ಅದೂ ನಿನಗೆ? ಹೇಗೋ?'
`ಇಂಟರ್ವ್ಯೂ ಅಟೆಂಡ್ ಮಾಡಿದ್ದೆ. ಒಂದು ಕ್ವಶ್ಚನ್ ಕೇಳಿದ್ರು.'
`ಏನ್ ಕ್ವಶ್ಚನ್ನು?'
`ನಮ್ಮ ದೇಶದ ರಾಷ್ಟ್ರಗೀತೆ ಯಾವ್ದು ಅಂತ ಕೇಳಿದ್ರು. ನಾನು ಗೊತ್ತಿಲ್ಲ ಅಂದೆ. ತಕ್ಷಣ ಕೆಲ್ಸ ಸಿಕ್ತು!'