ಇಲ್ಲಿ ನೀನು ದೇವಮಾನವ ಆಗಿದ್ದೆ
ಈಗ ನೀನು
ಕೇವಲ ನಮ್ಮ ನೆನಪು ಮಾತ್ರ,
ಮಣ್ಣಲ್ಲಿ ಲೀನವಾದ ನೀನು
ಪರಲೋಕದಲ್ಲಿ ಏನು ಮಾಡುತ್ತಿರುವೆ?
ಇಲ್ಲಿ ನಿನ್ನ ಬಿರುದು ಬಾವಲಿ ,
ಧನ ಕನಕ ಇಲ್ಲೇ ಉಳಿದು
ಇಹದ ಲೆಕ್ಕ ಕಲಹಕ್ಕೆ ಕಾರಣವಾಗಿ,
ಅದರ ಪಾಲಿನ ತಕರಾರು ಮುಗಿಲುಮುಟ್ಟಿದೆ.
ವಿಭು ಯಾರು ಅಂತಿದ್ದರೆ,
ನೀನೇ ಅನ್ನುತಿದ್ದವರು, ಚಮತ್ಕಾರ ತೋರದ ನಿನಗೆ
ಮಣ್ಣಲ್ಲೆ ಮಣ್ಣುಮಾಡಿಬಿಟ್ಟರು.
ನಿನ್ನ ಅಂತ್ಯಕಾಲದಲ್ಲಿ ಮೌನಿಯಾಗಿಸಿ,
ಅಸಹಾಯಕತೆಯ ಮೇರೆಯಲ್ಲಿ ನರಳಲು ಬಿಟ್ಟು
ಸುದ್ದಿ ಮಳೆಸುರಿಸಿ,
ಅನುಮಾನದ ಕೋಟೆಯೊಳಗೆಯೇ
ಅಸ್ತಂಗತನಾಗಿಸಿ ದೇವಮಾನವನೆಂದು
ನಮಗೆ ನಂಬಿಸಿದರು ಇವರು.
ಹೇಳು
ಈಗ ನೀನೆಲ್ಲಿರುವೆ ಎಂದು
ಅಲ್ಲಿ ನಿನಗೆ ಸಿಕ್ಕ ನೆಲೆಯಾವುದೆಂದು?
ಆ ಹುಟ್ಟಿಲ್ಲದ ಮೃತ್ಯುಂಜಯನು ನಿರಾಕಾರನು,
ಯಾರ ಆಸರೆ ಬಯಸದವನು,
ಈಲೋಕದ ಒಡೆಯನು ನಿನಗೆ
ಏನೆಂದು ಹೇಳಿದನು?
ಮರಳಿ ಧರೆಗೆ ಹೋಗು ಅಂದನೆ? ಅಥವ
ನಿನ್ನವಿಧಿ ಇಷ್ಟ್ಟೇ ಅಂದನೇ?
ಇಲ್ಲಿ ಮಾತ್ರ
ನೀಕೂಡಿಟ್ಟ ಎಲ್ಲಾ ಧನ ಕನಕ
ತಬ್ಬಲಿ ಯಾಗಿ ಬಿದ್ದಿದೆ,
ದೋಚುವವರ ಜೀವನದ ಗುರಿಯಾಗಿ.
ಪೈಪೋಟಿಯಲ್ಲಿ ಪ್ರಭಲನ ಪಾಲಿನ ಪಾಡಾಗಲು,
ಸ್ವಲ್ಪ ನೀನಾದರು ಕೋಂಡುಹೋಗುತ್ತಿದ್ದರೇ,
ನೈಲ್ ನದಿಯಲ್ಲಿ ಅಸ್ತಂಗತನಾದ
ಆ ಫರೋವನಂತೆ ಬರಿದಾಗಿ ಹೋದೆ.
ನೀನು ಇಲ್ಲಿ ಹೇಳಿದಂತೆಯೇ ಆಗಿದ್ದರೆ,
ನಾನೂ ನಿನ್ನ ಹಿಂದೆ ಓಡಿ ಓಡಿ ಬರುವೆ
ಇಹದ ಪರಿಯ ತೊರೆದು.
Comments
ಉ: ಇಲ್ಲಿ ನೀನು ದೇವಮಾನವ ಆಗಿದ್ದೆ