ಇಲ್ಲಿ ಮಳೆ ಬಂದಿಲ್ಲ

ಇಲ್ಲಿ ಮಳೆ ಬಂದಿಲ್ಲ

ಕವನ

 ಇಲ್ಲಿ  ಮಳೆ  ಬಂದಿಲ್ಲ

ಮೋಡ  ಕವಿದಿದೆ   ಬಿಸಿಲು  ಮೂಡುತ್ತಿದೆ

ನೆಲ  ಬಿರಿದಿದೆ,   ಜಲ  ತಳಸೇರಿದೆ

ಕಾಲ  ಕಳೆಯುತ್ತಿದೆ,  ಭ್ರಮನಿರಸನ  ನೆಲೆಗೊಂಡಿದೆ

ಬೆಲೆ  ಏರುತ್ತಲೇ  ಇದೆ

ಹಸಿವು   ದಾಹ ದ  ಶಕೆ  ಆರಂಭವಾಗಿದೆ.

ಖುರ್ಚಿಯ  ಕನಸ್ಸು,  ಹಣದ  ದಾಹ

ಭ್ರಷ್ಟರ   ಕುಣಿಕೆ

 ಪ್ರಜಾಪ್ರಭುತ್ವಕ್ಕೆ  ಕುತ್ತು  ತಂದಿದೆ,

 ದೇವಮಾನವನ ಅಂಗಳದಲ್ಲಿ

ಕಾಮ ಕಾಂಡ  ಗುಟುರು  ಹಾಕುತ್ತಲೇ  ಇದೆ,

ಶೋಶಿತರ   ನೂವಿನಮೇಲೆ

ಕಾವಿಯ  ಗುಟುರು  ಗುಟುರುತ್ತಿದೆ.

ದೆವಮಾನವನ  ದರ್ಪ,ಕಪ್ಪದ

ಹಗಲುಕನಸ್ಸು  ಕಾಣುವವರಲ್ಲಿ

ಕಾವಿ ಶ್ರದ್ಧೆಯು

ಮೂಢತೆಗೆ  ನಮನಿಸುತ್ತಿದೆ.

ಮಳೆ  ಬಾರದ  ಬವಣೆಗೆ  ದುರಾಹಂಕಾರ  ಮದ್ದಾಗಿದೆ.

 

Comments