ಇಳೆ ಮತ್ತು ಮಳೆ

ಇಳೆ ಮತ್ತು ಮಳೆ

ಕವನ

ನಾನು ಕೇಳಿದ ಸಮಯ ಕಾಣದು

ನೀನು ಹೇಳಿದ ಮಾತು ಹೋಗದೆ

ಬಾನು ಮಳೆಯನು ಸುರಿಸೆ ಮೋಹವು ಸುಳಿಯ ಬಹುದೇನು

ಕಾನ ಸೇರಲು ಮನಸು ಬಾರದು

ತಾನ ತಾನನ ಕಳೆದ ಜೀವನ

ತೇನ ಸವಿಯೊಳು ಬಾಳು ಸಾಗಿರೆ ಒಲವು ಬರದೇನು

 

ನನ್ನ ಜೊತೆಯಲೆ ಹೆಜ್ಜೆ ಹಾಕುತ

ಭಿನ್ನ ಯೋಚನೆ ಮಾಡಿ ಪೋದರೆ

ಯೆನ್ನ ಮನಸಿಗೆ ನೋವ ತಂದರೆ ನಿನಗೆ ಸವಿಯೇನು

ಮುನ್ನವೊಲವದು ತೋರಿ ಸಾಗಿದೆ

ಬನ್ನ ಪಡದೆಲೆ ಸನಿಹ ನಿಂದೆನು

ನಿನ್ನ ಪುಟದಲಿಯೆನ್ನ ಮರೆಸುತ ಹೋದೆಯೆಲ್ಲಿಗೆಯೊ

 

ಕದಿಯ ಬೇಡವು ತನದ ಭಾವನೆ

ಕುದಿವ ಸೆಡವನು ಬಿಡುತ ಬಾಳಿರೆ

ನದಿಯ ನೀರಿನ ತೆರದಿ ಸಾಗುವೆ ಹೇಳೆ ನನ್ನೊಲವೆ

ಬದಿಯ ಮನೆಯೊಳು ಯಾವ ನರಕವೊ

ಹೊದೆದುಕೊಂಡರೆ ಸುಖವ ಸಿಗುವುದೆ

ಕದವ ತೆರೆಯುತ ಕೈಯ ಹಿಡಿಯುತ ಬಾಳು ಎನ್ನೊಲವೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್