ಇವಳೆ ನಮ್ಮ ಮಹಿಳೆ...

ಇವಳೆ ನಮ್ಮ ಮಹಿಳೆ...

ಕವನ

ಮಹಿಳೆ ಎಂದರೆ ಮಹಾ ಮಹಿಮಳೇ

ಆಕೆ ಈ ಜಗದ ಮಹಾ ಮಾತೆಯೇ

ಆಕೆ ನಮ್ಮ ಹೆತ್ತು ಪೊರೆದವಳು

ನಮ್ಮನೆಲ್ಲ ಉಣಿಸಿ ಬೆಳೆಸಿದವಳು

ಲಾಲಿ ಹಾಡಿ ಮಲಗಿಸಿದ ದೇವತೆ

ನಮ್ಮನೆಲ್ಲ ನಿಸ್ವಾರ್ಥದಲಿ ಪೊರೆದವಳು

 

ಇವಳೆ ಕಣಾ ನಮ್ಮ ಸಾಕಿದವಳು

ಸದಾ ನಮ್ಮ ನೋಡಿ ನಲಿಯುವವಳು

ನಮ್ಮ ಎಲ್ಲಾ ಬೇಕು ಬೇಡಗಳ ಗಮನಿಸಿದವಳು

ನಮ್ಮೆಲ್ಲ ಅವಶ್ಯಕತೆಗಳನು ಪೂರೈಸಿದವಳು

ಇವಳೆ ನಮ್ಮ ತಾಯಿ ನಮ್ಮ ಜೀವನಾಡಿ

 

ಸೋದರಿಯಾಗಿ ಅಂತಃಕರಣ ನೀಡಿದವಳು

ಜೀವನದ ಮೌಲ್ಯಗಳ ದಾರಿ ತೋರಿದವಳು

ಪ್ರೇಯಸಿಯಾಗಿ ಪ್ರೇಮ ಕಾಮತಣಿಸಿದವಳು

ದೇವತೆಯಾಗಿ ಕೇಶವನಂತೆ ಸಲಹುವವಳು

ಅಶ್ವಿನಿಯಾಗಿ ನಮ್ಮಾರೋಗ್ಯವ ಗಮನಿಸಿದವಳು

 

ನಮ್ಮೆಲ್ಲ ರಾಗಭಾವವ ತಣ್ಣನೆ ತಣಿಸಿದವಳು

ಅಜ್ಜಿಯಾಗಿ ಪ್ರೀತಿಯ ಹೊಳೆಯ ಹರಿಸುವವಳು

ಇವಳೆ ಕಣಾ ಇವಳೆ ಕಣಾ ನಮ್ಮ ಮಹಿಳೆ

ಎಲ್ಲರ ಮೇಲೂ ಹರಿಸಿದಳಲ್ಲ ಪ್ರೀತಿಯ ಮಳೆ

ಬನ್ನಿರೆಲ್ಲ ಸೇರಿ ಮಾಡುವ ಮಹಿಳಾ ಹಬ್ಬ

ಅದು ಮಾರ್ಚ್ ಎಂಟರ ಮಹಾ ಸಂಭ್ರಮ ದಿಬ್ಬ!

(ಮಹಿಳಾ ದಿನದ ಸಂದರ್ಭದಲ್ಲಿ...)

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್