ಈಗ ಸೆಳೆವುದು ಜೋಗ…
ಕವನ
ಇಂದೀಗ ಕಣ್ತುಂಬಿಕೊಳ್ಳುವಾ
ವಿಶ್ವ ವಿಖ್ಯಾತ ಜೋಗಾ ಜಲಪಾತವಾ ||ಪ||
ಮಳೆಯೀಗ ಸೊಗಸಾಗಿ ಸುರಿದಿದೆ
ನಾಡ ಬರಗಾಲ ಸಂಕಟ ಕಳೆದಿದೆ
ಮೈಯೆಲ್ಲ ಹಸಿರುಟ್ಟು ಭೂರಮೆ
ಪದವು ಸಿಗದೀಗ ಮಾಡಲು ಬಣ್ಣನೆ
ಮೈತುಂಬಿ ಹರಿದ ಶರಾವತಿ
ಚೆಲುವ ಮಲೆನಾಡ ಸೆರಗಿನ ಐಸಿರೀ
ಜಲಪಾತ ಸೆಳೆವುದು ಮೈಮನ
ಇದನು ಕಣ್ತುಂಬಿಕೊಳ್ಳುವ ಈದಿನ
ಕವಲಾಗಿ ಹಾಲ್ನೊರೆ ಗೋಚರ
ಕೆಳಗೆ ಧುಮ್ಮಕ್ಕುತಿರುವುದು ಈತರ
ಮನದೊಳಗೆ ತುಂಬಿರಲು ಬೇಸರ
ಮರೆಸಿ ಉತ್ಸಾಹ ತುಂಬುವ ಪರಿಸರ
ಪರನಾಡಿನಿಂದಲು ಬರುವರು
ನೋಡಿ ಸಂತೋಷದಿಂದವರು ನಡೆವರು
ಕೈಬೀಸಿ ತನ್ನತ್ತ ಕರೆದಿದೆ
ಅದನು ನಾವೀಗ ನೋಡದೆ ಉಳಿವುದೆ?
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
