ಈಗ ಹೇಗೆ ಬರೆದರು?
ಕವನ
ಈಗ ಹೇಗೆ ಬರೆದರೂ ಸಾಹಿತ್ಯ;
ಒಗ್ಗರಣೆ ಹಾಕದಿದ್ದರೂ
ಸಾಂಬಾರು ಆಗುವ ಹಾಗೆ !
ಬರೆದದ್ದೇ ಕವನ, ಲೇಖನ !!
ಓದಿದ್ದೇ ವಾಚನ ಪ್ರವಚನ !!!
ಅವರ ಕಡೆ ಬೆರಳು ತೋರಿಸಿ
ಅವರೇ ಹಾಗೆಂದರು ಅದಕ್ಕೆ
ನಾನು ಹೀಗೆ ಬರೆದೆ ನಿಮ್ಮ ತಲೆ ಕೊರೆದೆ !
ಚರಂಡಿಯಲ್ಲಿ ನೀರು ಹೋಗುವ ಹಾಗೆ,
ಒಳ್ಳೆಯದೋ ಕೆಟ್ಟದ್ದೋ ಬರೆದು ,ಯಾರದೋ ಮುಖಕ್ಕೆ ಉಗಿದರೆ ? ಏನಾಗುವುದೆಂದರೆ ?
ಮೇಲೆ ಉಗುಳಿದರೆ ತನ್ನ ಮುಖಕ್ಕೇ ಬೀಳುವುದೆಂಬ ಜ್ಞಾನವಿಲ್ಲದೆ?
ಊರು ಸುತ್ತುವುದಿಲ್ಲ, ಕೇಳಿ ಕಲಿಯುವುದಿಲ್ಲ
ನೋಡಿ ತಿಳಿದುಕೊಳ್ಳುವುದು ಇಲ್ಲವೇ ಇಲ್ಲ!
ನಾನು ಬರೆದಿರುವುದೇ ವೇದವಾಕ್ಯ
ಉಳಿದುದೆಲ್ಲವೂ ಮೃದು
ವಾಕ್ಯವೆನ್ನುತ್ತಾ ವಾದವನು ಮಾಡಿ ನೋವ ಕೊಟ್ಟು ಸಾಗುವುದೆನ್ನುವವನಿಗೆ
ಎಲ್ಲಿಲ್ಲದ ಖುಷಿಯಾದರೆ ಅದೇ ಇನ್ನೊಬ್ಬರಿಗೆ ಕಸಿವಿಸಿಯಾಗದಿರಲಿ!
-ಹಾ ಮ ಸತೀಶ
ಚಿತ್ರ್