ಈ ಜೀವ ನಿನಾಗಾಗಿ
ನಾನು ಕನ್ನಡದ ಹುಡುಗ, ಕನ್ನಡ ನನ್ನ ಉಸಿರು, ಕರುನಾಡಿನಲ್ಲೆ ನನ್ನ ಜೀವನ ಮತ್ತು ಮರಣ, ನಾನು ತುಂಬಾ ಸಿಂಪಲ್ ಹಾಗೇನೇ ಸೆನ್ಸಿಟಿವ್ ಕೂಡ, ನನ್ನಗೆ ನನ್ನದೇ ಅದ ಆದರ್ಶಗಳಿವೆ, ನನಗೆ ನನ್ನದೇ ಅದ ಸ್ಟೈಲ್ ಇದೆ, ನನಗೆ ಬೇರೆಯವರ ತರ ನಾನು ಇರಬೇಕು ಅಂತ ಅಸೆ ಪಡಲ್ಲ, ಬೇರೆಯವರು ಬೇಕಾದರೆ ನನ್ನ ತರ ಇರಬವುದು, ನಾನು ಯಾವಾಗಲು ನಂದೆ ಅದ ಸ್ಟೈಲ್ ಇರಬೇಕು ಅಂತ ಬಯಸುತಿನಿ. ನನಗೆ ಫ್ರೆಂಡ್ಸ್ ಅಂದ್ರೆ ತುಂಬಾ ಇಷ್ಟ, ಸ್ನೇಹ ಅಂದ್ರೆ ಏನು?ಸ್ನೇಹಿತ ಅಂದ್ರೆ ಯಾರು?ಸ್ನೇಹದಲ್ಲಿ ಸ್ವಾರ್ಥ ತುಂಬಿರುತ್ತ? ಹುಟ್ಟುತ ಬರೋದು ರಕ್ತ ಸಂಬಂಧ,ಅದು ಅದ ಮೇಲೆ ಬರೋದು ಸ್ನೇಹ ಅಗಿರಬವುದು ಅಥವಾ ಪ್ರೀತಿ ಅಗಿರಬವುದು!ಸ್ನೇಹದಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ, ಆತ್ಮೀಯತೆ ಇರುತ್ತೆ. ಒಂದು ಸಲ ಸ್ನೇಹದಲ್ಲಿ ನಂಬಿಕೆ ಕಳೆದುಕೊಂಡರೆ ಆ ನಂಬಿಕೆ ಮತ್ತೆ ಸಿಗಲ್ಲ. ಸ್ನೇಹಕ್ಕೆ ಒಬ್ಬೊಬ್ಬರು ಒಂದೊಂದು ಅರ್ಥವನ್ನು ಕೊಡುತ್ತಾರೆ. ನನ್ನ ಪ್ರಕಾರ ಸ್ನೇಹ, ಸ್ನೇಹಿತ ಅಂದ್ರೆ ಸ್ವಾರ್ಥವಿಲ್ಲದ, ನಿಷ್ಕಲ್ಮಶವಾದ ಮನಸ್ಸು. ಸ್ನೇಹಕ್ಕೆ ಜಾತಿ, ಮತ, ಕುಲ ಇದು ಯಾವುದರ ಅಡೆ-ತಡೆ ಇರುವಿದಿಲ್ಲ. ಅಸ್ತಿ, ಅಂತಸ್ತು ಇದು ಯಾವುದು ಸ್ನೇಹಕ್ಕೆ ಅಡ್ಡಿಯಾಗುವದಿಲ್ಲ.ಸ್ನೇಹ ಅಂದ್ರೆ ಬಸ್ಸಲ್ಲಿ ಬರೋವಾಗ, ರೋಡಲ್ಲಿ ಹೋಗವಾಗ, ಯಾವುದೊ ಮದುವೆ ಸಮಾರಂಭದಲ್ಲಿ ಪರಿಚಯವಾದವರನ್ನು ಸ್ನೇಹಿತರು ಅಂತ ಕರೆಯುವುದಕ್ಕೆ ಆಗುವದಿಲ್ಲ, ಅಥವಾ ಸ್ನೇಹಿತ ಹುಟ್ಟಿದಗಿನಿಂದಲೂ ಜೊತೇಲೆ ಬರಲ್ಲ. ಎಲ್ಲೋ ಆಕಸ್ಮಿಕವಾಗಿ ಪರಿಚಯವಾಗಿ ಅವನು ಅಥವಾ ಅವಳು ನಮ್ಮ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಾರೆ, ಅತ್ಮಿಯವಾಗುತ್ತಾರೆ. ನಮ್ಮ ಕಷ್ಟ-ಸುಖ ಎರಡರಲು ಭಾಗಿಯಾಗುತ್ತಾರೆ. ಸುಖದಲ್ಲಿ ಭಾಗಿಯಾಗಿ ಕಷ್ಟ ಬಂದಾಗ ನಮ್ಮಿಂದ ದೂರ ಹೋಗುವವರನ್ನು ಸ್ನೇಹಿತರು ಅಂತ ಕರೆಯುವುದಿಲ್ಲ. ಹಣ ಇದ್ದಾಗ ನಮ್ಮ ಜೊತೆ ಇರುವವರು, ಹಣ ಇಲ್ಲದಿದ್ದಾಗ ನಮ್ಮನ್ನು ಬಿಟ್ಟು ಹೋಗುವರು ನಿಜವಾದ ಸ್ನೇಹಿತರಲ್ಲ. ಎಷ್ಟೇ ಕಷ್ಟ ಬಂದರೂ ನಮ್ಮನ್ನು ಕೈ ಬಿಡದೆ ಕಷ್ಟದಲ್ಲಿದ್ದಾಗ ಧೈರ್ಯ ತುಂಬಿ ಸಾಂತ್ವನವನ್ನು ಹೇಳಿ, ಕೆಳಗೆ ಬಿದ್ದಾಗ ಕೈ ಕೊಟ್ಟು ಮೇಲೆತ್ತುವರು ನಿಜವಾದ ಸ್ನೇಹಿತರು.ಸಂತೋಷವನ್ನು ಹೇಗೆ ಹಂಚಿಕೊಳ್ಳುತ್ತಾರೋ ಹಾಗೆಯೇ ಕಷ್ಟವನ್ನು ಹಂಚಿಕೊಳ್ಳಬೇಕು. ನಾವು ಕೆಲವು ವಿಷಯಗಳನ್ನು ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಇವರ ಜೊತೆ ಹೇಳಿಕೊಳ್ಳುವುದಿಲ್ಲ ಆದರೆ, ಸ್ನೇಹಿತರೊಡನೆ ಎಲ್ಲಾ ವಿಷಯವನ್ನು ಹೇಳಿಕೊಳ್ಳುತ್ತೇವೆ. ಅಲ್ಲಿಯೇ ತಿಳಿದುಕೊಳ್ಳಬೇಕು ನಾವು ಸ್ನೇಹಕ್ಕೆ ಎಷ್ಟು ಮಹತ್ವವನ್ನು ಕೊಡುತ್ತೇವೆ ಎಂದು.ಸ್ನೇಹ ಖಂಡಿತವಾಗಿಯೂ ಸ್ವಾರ್ಥ ಅಲ್ಲ. ಸ್ನೇಹ ನಿಸ್ವಾರ್ಥತೆಯಿಂದ ತುಂಬಿರುತ್ತದೆ. ನಾನು ಸ್ನೇಹಕ್ಕೆ ತುಂಬಾ ಪ್ರಾಮುಖ್ಯತೆ ಕೊಡುತ್ತೇನೆ, ನನಗೆ ಸ್ನೇಹದಲ್ಲಿ ನಂಬಿಕೆ, ವಿಶ್ವಾಸ, ಮುಖ್ಯ. ಒಂದು ವೇಳೆ ನನಗೆ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದರೆ ಅಂಥವರನ್ನು ನಾನು ಕ್ಷಮಿಸುವಿದಿಲ್ಲ. ನನ್ನ ಜೀವನದಿಂದ ಅವರನ್ನು ಆಚೆ ಹಾಕುತ್ತೇನೆ, ಮತ್ತೆ ಎಂದಿಗೂ ನನ್ನ ಸ್ನೇಹದ ಬಾಗಿಲು ಅವರಿಗೆ ತೆಗೆಯುವುದಿಲ್ಲ. ಒಂದು ಸಲ ನಂಬಿಕೆ ಕಳೆದುಕೊದರೆ ಮತ್ತೆ ಸಂಪಾದನೆ ಮಾಡುವುದಕ್ಕೆ ಆಗುವುದೆಲ್ಲ. ಒಂದು ವೇಳೆ ಸ್ನೇಹ ಪ್ರೀತಿಗೆ ತಿರುಗಿದರೆ?ಇದು ಎಷ್ಟೋ ಸ್ನೇಹಿತರನ್ನು ಕಾಡುವ ಸಮಸ್ಯೆ, ಹಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ, ನಾವು ಸ್ನೇಹಿತರು ಕೊನೆಯವರೆಗೂ ಹೀಗೆ ಇರೋಣ ಅನ್ನುತ್ತಾರೆ. ನನ್ನ ಪ್ರಕಾರ ಒಂದು ವೇಳೆ ಸ್ನೇಹ ಪ್ರೀತಿಗೆ ತಿರುಗಿದರೆ ಖಂಡಿತವಾಗಿಯೂ ಒಪ್ಪಿಕೊಳ್ಳಬವುದು. ಒಪ್ಪಿಕೊಡರೆ ಅದು ಖಂಡಿತವಾಗಿಯೂ ತಪ್ಪಾಗುವುದಿಲ್ಲ. ಯಾಕೆಂದರೆ ಸ್ನೇಹದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ, ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಹೆಗಲು ಕೊಟ್ಟಿರುತ್ತಾರೆ. ಅವರ ಬೇಕು ಬೇಡಗಳನ್ನು ಅರಿತಿರುತ್ತಾರೆ, ಆಗ ಅವರ ಪ್ರೀತಿ ಪರಿಶುದ್ದವಾಗಿರುತ್ತದೆ. ಇದು ನನ್ನ ಅಭಿಪ್ರಾಯ, ನಿಮ್ಮಗೆ ತಪ್ಪು ಅನಿಸಬವುದು, ಆದರೆ ನನಗೆ ಇದು ಸರಿ.ನನಗೆ ಕನ್ನಡದೋರು ಅಂದ್ರೆ ತುಂಬಾ ಪ್ರೀತಿ (ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು, ಬದುಕಿದು ಜಟಕಾ ಬಂಡಿ, ಇದು ವಿಧಿ ಓಡಿಸುವ ಬಂಡಿ), ನನಗೆ ಅಮ್ಮ ಅಂದ್ರೆ ತುಂಬಾ ಪ್ರೀತಿ, ನನ್ನ ಫಸ್ಟ್ ಸ್ನೇಹಿತೆ/ಸ್ನೇಹಿತರು ನನ್ನ ಅಮ್ಮ ಅಪ್ಪನೇ (ದೇವರು ಬರೆದ ಕತೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಲ್ಲಿ) ಆಮೇಲೆ ನನ್ನ ಪಪ್ಪಾ, ನಾವು ಯಾವಾಗಲು ಸ್ನೇಹಿತರ ತರಾನೆ ಇರ್ತಿವಿ. ನಾನು ಎಲ್ಲರ ಹತ್ತಿರನು ತುಂಬಾ ಸೋಶಿಯಲ್ ಆಗಿ ಇರ್ತೀನಿ, ನನಗೆ ನಟರಲ್ಲಿ ದರ್ಶನ್ ಅಂದ್ರೆ ತುಂಬಾ ಇಷ್ಟ, ನಟಿಯರಲ್ಲಿ ಕನ್ನಡದಲ್ಲಿ ಮಾಲಾಶ್ರಿ, ರಮ್ಯ ಅಮುಲ್ಯ ಮಡಿಕೇರಿ ಇಷ್ಟ, ನನ್ನ ಹವ್ಯಾಸ ಅಂದ್ರೆ, ಪೇಪರ್ ಓದ್ತೀನಿ, ಫಿಲಂ ನೋಡ್ತಿನಿ, ನನಗೆ ಜೀನ್ಸ್ , ಟಿ-ಶರ್ಟ್ ಇಷ್ಟ, ನನಗೆ ಇಷ್ಟವಾದ ಸ್ಥಳ ಅಂದ್ರೆ ಮಲೆನಾಡು, ಮಡಿಕೇರಿ ಆಗೊ೦ಬೆ, ನಮ್ಮ ಕರ್ನಾಟಕ ರಾಜ್ಯದಲ್ಲಿ, ನನಗೆ ಹಳ್ಳಿ ಅಂದ್ರೆ ಇಷ್ಟ, ಅಲ್ಲಿ ಮಾಡೋ ಊಟ ಇಷ್ಟ ರೀ, ಮುದ್ದೆ ನನಗೆ ಇಷ್ಟ,ನನಗೆ ಇಷ್ಟವಾದ ಸಿನಿಮ ಅಂದ್ರೆ, ನನಗೆ ದರ್ಶನ್ ಅವರ ಎಲ್ಲ ಸಿನಿಮಾ ಮತ್ತು ಹಾಡುಗಳು ತುಂಬಾ ತುಂಬಾ ಇಷ್ಟ.ಇಷ್ಟೆಲ್ಲಾ ಓದಿದ ಮೇಲೆ ನನ್ನ ಬಗ್ಗೆ ನಿಮಗೆ ಏನು ಅನಿಸಿತ್ತು ಅಂತ ಸಂದೇಶ ಕಳುಹಿಸುತ್ತಿರ.ಬಾಳಿನ ಹಳ್ಳ-ಕೊಳ್ಳ ಬೆಟ್ಟ-ಗುಡ್ಡ ಎಲ್ಲವನ್ನು ಮಿರಿ ನಿಂತು ಹಾರಿ ನಲಿದಾಡುವ ಹಕ್ಕಿಯಾಗಿ ನೋವೆಲ್ಲ ಮರೆಯುತ್ತಿದೆ ನಾನಂದು, ಎಲ್ಲಿಂದಲೋ ನೀ ಬಂದೆ. ಸುತ್ತಿ ಬಳಸಿ ಏನೇನೊ ಮಾತಾಡಿದರು ಮನದಾಳದ ಮಾತು ಹೊರ ಮುನ್ನ ನೀ ಮರೆಯಾಗಿ ಬಿಟ್ಟೆ, ನನ್ನ ದನಿಗೆ ನೀ ಶ್ರುತಿ ಬೆರೆಸಲಿಲ್ಲ, ನೀ ಬಳಿ ಸಾರಿ ಬರಲಿಲ್ಲ, ಪ್ರೀತಿ ತೋರಿ ನಸುನಗಲಿಲ್ಲ, ಪ್ರೀತಿ ನಾ ಬಯಸಿ ಬಂದಾಗಲು ನೀ ತಿರುಗಿ ನೊಡಲಿಲ್ಲ...
ಸುಮ್ಮನೆ ಯಾಕೆ ಬಂದೆ, ಮಿಂಚಂತೆ ನನ್ನ ಮುಂದೆ, ನಿನ್ನನು ನೋಡಿದಂದೆ, ನಾ ಬಿದ್ದೆ ನಿನ್ನ ಹಿಂದೆ, ಬರದೀಗ ನಂಗೆ ನಿದ್ದೆ, ನಿನ್ನನು ನೋಡದೆ...