ಈ ವಜ್ರದ ಬೆಲೆ ಏನು?

ಈ ವಜ್ರದ ಬೆಲೆ ಏನು?

ಬರಹ

ಕಥೆ-೧

ಈ ವಜ್ರದ ಬೆಲೆ ಏನು?

ರ್‍ಆಮಪುರ ವೆಂಬ ಒಂದು ಗ್ರಾಮ. ಆ ಗ್ರಾಮದಲ್ಲಿ ಒಬ್ಬ ಚಂದ್ರಸೇನ ಎಂಬ ಶ್ರೀಮಂತ ವ್ಯಾಪಾರಿ ಇದ್ದ. ಆತನಿಗೆ ಒಂದು ದಿನ ವ್ಯಾಪಾರ ಮುಗಿಸಿಕೊಂಡು ಮನೆಗೆ ಹಿಂತುರುಗುತಿದ್ದಾಗ, ಕೆರೆಯ ದಡದಲ್ಲಿ ಒಂದು ವಜ್ರ ಸಿಕ್ಕಿತು. ಆ ವಜ್ರದ ನಿಕರ ಬೆಲೆ ತಿಳಿಯುವ ಮನಸಾಯಿತು ಆತನಿಗೆ. ಆದರೆ ಆತನಿಗೆ ವಜ್ರವು ಬಹಳ ಬೆಲೆ ಬಾಳುವ ವಜ್ರವೆನ್ದು ತಿಳಿದಿತ್ತು. ಆದರೂ ಆತ ಮನೆಗೆ ಬಂದು ಅದರ ನಿಕರವಾದ ಬೆಲೆ ತಿಳಿಯಬೇಕೆಂದು ಅಂದುಕೊಂಡು ಅವನ ಸೇವಕನಿಗೆ ಆ ವಜ್ರವನ್ನು ಕೊಟ್ಟು ಹೇಳಿದ, "ನೀನು ಈ ವಜ್ರವನ್ನು ಪೇಟೆಗೆ ತೆಗೆದುಕೊಂಡು ಹೋಗಿ ಇದಕ್ಕೆ ಯಾರು ಯಾರು ಎಸ್ಟೆಸ್ಟು ಬೆಲೆ ಕಟ್ಟುತಾರೆ ಎಂಬುದನ್ನು ತಿಳಿದುಕೊಂದು ಬಾ. ಮೊದಲು ಆ ವಜ್ರವನ್ನು ಬದನೆ ಮಾರುವವನ ಹತ್ತಿರ ತೆಗೆದುಕೊಂಡು ಹೋಗು" ಅಂತ.
ಆ ಸೇವಕ ಮೊದಲು ಆ ವಜ್ರವನ್ನು ಬದನೆ ಮಾರುವವನ ಹತ್ತಿರಕ್ಕೆ ತೆಗೆದುಕೊಂಡು ಹೋದ. ಆತ ಆ ವಜ್ರವನ್ನು ತಿರುಗಿಸಿ ತಿರುಗಿಸಿ ಮಾದಿ ಹೆಳಿದ, "ನೋಡು, ನಾನು ಇದಕ್ಕೆ ಒಂಬತ್ತು ಸೇರು ಬದನೇಕಾಯಿ ಯನ್ನು ಕೊಡಬಲ್ಲೆ"ಅಂದ. ಆಗ ಸೇವಕ ನಗುತ್ತಾ ಕೇಳಿದ, "ಅದಕ್ಕಿಂತ ಸ್ವಲ್ಪ ಜಾಸ್ತಿಯಾಗಿ,ಹೋಗಲಿ ಹತ್ತು ಸೇರು" ಅಂತ. ಅದಕ್ಕೆ ಅಂಗಡಿಯವ ಹೇಳಿದ, "ಇಲ್ಲ,ನಾನು ಈಗಾಗಲೇ ಪೇಟೆಧಾರಣೆಗಿಂತ ಸ್ವಲ್ಪ ಅಧಿಕವಾಗಿಯೇ ಹೇಳಿಬಿಟ್ಟೆ. ನಿನಗೆ ಸಮ್ಮತವಾದರೆ ಕೊಟ್ಟುಹೋಗು,ಇಲ್ಲದಿದ್ದರೆ ಹಾಗೆಯೆ ಹೋಗು" ಅಂದ. ಆಗ ಆ ಸೇವಕ ವಜ್ರವನ್ನು ವಾಪಾಸ್ ತೆಗೆದುಕೊಂಡು ಬಂದು ಯಜಮಾನನಿಗೆ ತಿಳಿಸಿದ. "ಸ್ವಾಮಿ, ಬದನೆ ಕಾಯಿ ಮಾರುವವನು ಒಂಭತ್ತು ಸೇರು ಬದನೆ ಕಾಯಿಗಿಂತ ಹೆಚ್ಚು ಏನನ್ನು ಕೊಡಲಾಗುವುದಿಲ್ಲವಂತೆ ಹಾಗು ಆತ ಪೇಟೆ ಧಾರಣೆಗಿಂತ ಅಧಿಕವಾಗಿಯೇ ಹೇಳಿ ಬಿಟ್ಟಿದ್ದಾನಂತೆ" ಎಂದು ಹೇಳಿದ. ಆಗ ಯಜಮಾನ ನಕ್ಕು ಹೇಳಿದ,"ಹೋಗಲಿ, ಈಗ ಜವಳಿ ವ್ಯಾಪಾರಿಯ ಹತ್ತಿರ ಹೋಗಿ ಕೇಳಿಕೊಂಡು ಬಾ, ಈಗ ನೀನು ಕೇಳಿಕೊಂಡು ಬಂದ ವ್ಯಾಪಾರಿ ಬರಿ ಬದನೆ ಕಾಯಿ ವ್ಯಾಪಾರಿ,ಆತನಿಗೆ ವಜ್ರದ ಬೆಲೆ ಏನು ಗೊತ್ತು? ಜವಳಿ ವ್ಯಾಪಾರಿಯ ಬಂಡವಾಳ ಈತನದಕ್ಕಿಂತ ಸ್ವಲ್ಪ ಹೆಚ್ಚಿನದು. ನೋಡೋಣ, ಆತ ಇದಕ್ಕೆ ಏನು ಬೆಲೆ ಕಟ್ಟುತ್ತಾನೆಂದು" ಹೇಳಿದ. ಸೇವಕ ಜವಳಿ ವ್ಯಾಪಾರಿಯ ಹತ್ತಿರ ಹೋಗಿ ಕೇಳಿದ, "ಏನು, ನಿನಗೆ ಇದು ಬೇಕೇನು? ಇದಕ್ಕೆ ಏನು ಕೊಡಬಲ್ಲೆ? ಅಂದ. ಆತ ಹೇಳಿದ, "ಹೌದು ಇದು ಸ್ವಲ್ಪ ಬೆಲೆ ಬಾಳೋದೆ. ಇದರಿಂದ ಒಳ್ಳೆಯ ಒಡವೆ ಮಾಡಿಸಬಹುದು. ನಾನು ಇದಕ್ಕೆ ೯೦೦ ರೂಪಾಯಿ ಕೊಡಬಲ್ಲೆ". ಆಗ ಸೇವಕ, "ನೀನು ಇನ್ನು ಸ್ವಲ್ಪ ಜಾಸ್ತಿಯಾಗಿ ಏನಾನದರು ಕೊಡುವುದಾದರೆ ನಿನಗೇ ಮರುತ್ತೇನೆ,ಹೋಗಲಿ ಒಂದು ಸಾವಿರ ರೂ.ಕೊಡಬಲ್ಲೆಯಾ?" ಎಂದು ಕೇಳಿದ. ಜವಲಿ ವ್ಯಾಪಾರಿ ಉತ್ತರ ಕೊಟ್ಟ,"ಇನ್ನು ಹೆಚ್ಚಿಗೆ ಆಸೆ ಪಡಬೇಡ,ನಾನು ಆಗಲೆ ಪೇಟೆಧಾರಣೆಗಿಂತ ಸ್ವಲ್ಪ ಅಧಿಕವಾಗಿಯೇ ಬೆಲೆ ಕಟ್ಟಿದ್ದೇನೆ. ಇದರ ಮೇಲೆ ಒಂದು ರೂಪಾಯಿ ಕೂಡ ಜಾಸ್ತಿ ಕೊಡಲಾರೆ. ಇಚ್ಛೆ ಇದ್ದರೆ ಕೊಟ್ಟು ಹೋಗು" ಎಂದ. ಆಗ ಸೇವಕ ಈ ವಜ್ರವನ್ನು ಹಿಂದಕ್ಕೆ ಪಡೆದುಕೊಂಡು ನಗುತ್ತ ಯಜಮಾನನ ಹತ್ತಿರ ಬಂದು ಹೇಳಿದ, "ಸ್ವಾಮಿ,ಈತ ೯೦೦ ಕ್ಕಿಂತ ಜಾಸ್ತಿ ಒಂದು ರೂ.ಕೊಡಲಾರನಂತೆ" ಎಂದ. ಆಗ ಯಜಮಾನ ನಗುತ್ತಾ ಹೇಳಿದ,"ಈಗ ಇದನ್ನು ಒಬ್ಬ ರತ್ನ ವ್ಯಾಪಾರಿಯ ಹತ್ತಿರ ತೆಗೆದುಕೊಂಡು ಹೊಗು,ಆತ ಏನು ಬೆಲೆ ಕಟ್ಟುತ್ತಾನೆ ನೋಡೋಣ" ಎಂದ. ಸೇವಕ ರತ್ನ ವ್ಯಾಪಾರಿಯ ಹತ್ತಿರಕ್ಕೆ ಬಂದು ಅದನ್ನು ತೋರಿಸಿದ. ಆತ ಅದರ ಕಡೆಗೆ ಕಣ್ಣು ಹಾಯಿಸಿದೊಡನೆಯೇ ಹೇಳಿದ, "ಇದಕ್ಕೆ ನಾನು ಒಂದು ಲಕ್ಷ ರೂಪಾಯಿ ಕೊಡುತ್ತೇನೆ" ಎಂದ. ಹೀಗೆ ಸೇವಕನಿಗೆ ಆ ವಜ್ರದ ಬೆಲೆ ಎಸ್ಟೆಂದು ತಿಳಿಸಲು ಹಾಗು ಯಾರು ಯಾರು ಏನು ಬೆಲೆ ಕಟ್ಟುತ್ತಾರೆ ಎಂದು ಟೆಸ್ಟ್ ಮಾಡಿದ. ಇದರಿಂದ ಆ ಶ್ರೀಮಂತನಿಗೆ ಆ ವಜ್ರದ ನಿಖರವಾದ ಬೆಲೆ ತಿಳಿಯಿತು. ಹಾಗು ಎಲ್ಲ ವ್ಯಾಪಾರದವರು ಅವರ ಬಂಡವಾಳಕ್ಕೆ ಅನುಗುಣವಾಗಿ ಬೆಲೆ ಕಟ್ಟುವುದು ತಿಳಿಯಿತು.

-------------------------------------------------------------- -ವಿ.ಹೆಚ್.