ಉತ್ತಮ ಬೇಡಿಕೆ ಪಡೆಯುತ್ತಿರುವ ಪೇರಳೆ ಹಣ್ಣು (ಭಾಗ ೨)

ಉತ್ತಮ ಬೇಡಿಕೆ ಪಡೆಯುತ್ತಿರುವ ಪೇರಳೆ ಹಣ್ಣು (ಭಾಗ ೨)

ಕಳೆ ನಿರ್ವಹಣೆ: ಪಾತಿಗಳಿಗೆ ಹೊದಿಕೆ ಮಾಡುವುದು ಹಾಗು ಎರೆಹುಳುಗಳನ್ನು ಬಿಡುವುದು, ಕೃಷಿ ತ್ಯಾಜ್ಯಗಳ ಹೊದಿಕೆ ಹಾಕುವುದು ಯೋಗ್ಯ ಅಥವಾ ರಾಸಾಯನಿಕ ಉಪಯೋಗಿಸಿ ಕಳೆ ನಿರ್ವಹಣೆ ಮಾಡಬಹದು.

ಸೂಚನೆ : ಪೇರಳೆ ಎಲೆಗಳು ತಾಮ್ರ ವರ್ಣಕ್ಕೆ ತಿರುಗಿದಾಗ ಗಿಡಗಳಿಗೆ ಶೇ. .೫ ರ ಡಿ.ಎ.ಪಿ. ಮತ್ತು ಸತುವಿನ ಸಲ್ಫೇಟ್‌ಗಳನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ೪-೬ ಸಲ ಪ್ರತಿ ವಾರಕ್ಕೊಮ್ಮೆ ಸಿಂಪರಣೆ ಮಾಡಬೇಕು. ಸತುವಿನ ಸಲ್ಫೇಟ್ ದ್ರಾವಣವನ್ನು ಸುಣ್ಣದೊಂದಿಗೆ ಬೆರೆಸಿ ತಟಸ್ಥಗೊಳಿಸಿ (ಪ್ರತಿ ಕಿ.ಗ್ರಾಂ. ಸತುವಿನ ಸಲ್ಪೇಟ್‌ಗೆ ೦.೫ ಕಿ.ಗ್ರಾಂ. ಸುಣ್ಣ ಸೇರಿಸಿ). ನಾಟಿ ಮಾಡಿದ ಎರಡು ವರ್ಷ ತನಕ ಮಧ್ಯಂತರದಲ್ಲಿ ತರಕಾರಿ ಬೆಳೆಸಬಹುದು. ಮೇವು ಬೆಳೆಸಬಹುದು.  ಗೆಲ್ಲುಗಳು ಬೆಳೆದ ನಂತರ ಬೇಡ.

ಸಸ್ಯ ಪ್ರೂನಿಂಗ್ ಮತ್ತು ಇಳುವರಿ: ಪೇರಳೆ ಸಸ್ಯವನ್ನು ಅದರಷ್ಟಕ್ಕೆ ಬೆಳೆಯಲು ಬಿಡುವ ಬದಲಿಗೆ ಒಂದೊಂದು ಹಂಗಾಮಿಗೆ ಒಂದೊಂದು ಬದಿಯ ತೋರು ಬೆರಳು ಗಾತ್ರದ ಗೆಲ್ಲುಗಳನ್ನು ಫಸಲು ಕಟಾವು ಮುಗಿದ ತಕ್ಷಣ ಕತ್ತರಿಸುವುದರಿಂದ ಹೊಸ ಚಿಗುರುಗಳು ದಷ್ಟ ಪುಷ್ಟವಾಗಿ ಬೆಳೆದು ಅದರಲ್ಲಿ ಬರುವ ಕಾಯಿಗಳು ಪುಷ್ಟಿಯಾಗಿರುತ್ತವೆ. ಯಾವುದೇ ಕಾರಣಕ್ಕೂ  ಹೂ ಬರುವ ಸಮಯದಲ್ಲಿ ಕಟಾವು ಮಾಡಬಾರದು. ತಿಳುವಳಿಕೆ ಇಲ್ಲದೆ ಪ್ರೂನಿಂಗ್ ಮಾಡಬಾರದು. ಪ್ರೂನಿಂಗ್ ಬಗ್ಗೆ ಸರಿಯಾಗಿ ತಿಳಿದುಕೊಂಡವರು ೧><ಮೀ ಅಂತದಲ್ಲಿ ಸಸಿ ಬೆಳೆಸಿ ಪ್ರತೀ ಗಿಡಕ್ಕೆ ೨೦ ಕ್ಕೂ ಹೆಚ್ಚು ಹಣ್ಣೂಗಳನ್ನು ಪಡೆಯಬಹುದು. ಪ್ರೂನಿಂಗ್ ಮಾಡುವಾಗ ಗೊಬ್ಬರಕೊಡುವಿಕೆಯಲ್ಲಿ ರಾಜಿ ಮಾಡಿಕೊಳ್ಳಬಾರದು

ಸಸ್ಯ ಸಂರಕ್ಷಣೆ - ಕೀಟಗಳು   

ಕಜ್ಜಿ ತಿಗಣೆ (ಟೀ ಸೊಳ್ಳೆ) : ಅಪ್ಸರೆ ಮತ್ತು ಪ್ರೌಢ ತಿಗಣೆಗಳು ಎಲೆಗಳಿಂದ ಎಳೆಯದಾದ ಹಣ್ಣುಗಳಿಂದ ಮತ್ತು ಹಣ್ಣುಗಳಿಂದ ರಸ ಹೀರುತ್ತದೆ. ಇಂತಹ ರಸ ಹೀರಿದ ಸ್ಥಳಗಳಲ್ಲಿ ಕಂದು ಬಣ್ಣದ ಕಜ್ಜಿಯಾಗುತ್ತದೆ. ಕಾಯಿಗಳು ಗಟ್ಟಿಯಾಗಿ ಕೆಳಗೆ ಬೀಳುತ್ತವೆ.

ನಿರ್ವಹಣೆ : ಹೂ ಬಿಡುವ ಸಮಯದಲ್ಲಿ ಗಿಡಗಳಿಗೆ ೪ ಗ್ರಾಂ. ಕಾರ್ಬಾರಿಲ್ ಡಿಡಬ್ಲ್ಯೂಪಿ ಅಥವಾ ೧.೭ ಮಿ.ಲೀ. ಡೈಮಿಥೋಯೆಟ್೩೦ ಇ.ಸಿ. ಅಥವಾ ೦.೫ ಮಿ.ಲೀ. ಸೈಪರ್ ಮಿಥ್ರಿನ್, ಅಥವಾ ಇಮಿಡಾಕ್ಲೋಫ್ರಿಡ್ .೫ ಮಿಲ್ ಸಿಂಪರಣೆ ಮಾಡಬೇಕು. ಬಾಧೆ ಮತ್ತೆ ಕಂಡುಬಂದಲ್ಲಿ ಸಿಂಪರಣೆಯನ್ನು ಪುನಃ ಮಾಡಬೇಕು.

ಹಿಟ್ಟು ತಿಗಣೆ : ಬಿಳಿ ಹಿಟ್ಟಿನಂತಹ ತಿಗಣೆಗಳು ಗುಂಪಿನಲ್ಲಿ ಎಲೆಯಿಂದ ಮತ್ತು ಕಾಯಿಯಿಂದ ರಸ ಹೀರುತ್ತವೆ. ಇಂತಹ ಭಾಗಗಳಲ್ಲಿ ಬೂಸ್ಟು ಬೆಳವಣಿಗೆ ಆಗುತ್ತದೆ.

ನಿರ್ವಹಣೆ :  ಹೂ ಬಿಡುವ ಸಮಯದಲ್ಲಿ ಗಿಡಗಳಿಗೆ ೪ ಗ್ರಾಂ. ಕಾರ್ಬಾರಿಲ್ ಡಿಡಬ್ಲುö್ಯಪಿ ಅಥವಾ ೧.೭ ಮಿ.ಲೀ. ಡೈಮಿಥೋಯೆಟ್ ೩೦ ಇ.ಸಿ. ಅಥವಾ ೧.೦ ಮಿ.ಲೀ. ಡೈಕ್ಲೋರೋವಾಸ್ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟ ನಾಶಕಗಳ ಜೊತೆ ಮೀನು ಎಣ್ಣೆ ಸಾಬೂನನ್ನು ಪ್ರತಿ ಲೀಟರ್‌ಗೆ ೫ ಗ್ರಾಂ.ನಂತೆ ಬೆರೆಸಬೇಕು.

ಶಲ್ಕ ಕೀಟ : ಹಸಿರು ಶಲ್ಕ ಕೀಟಗಳು ಎಲೆಯ ಕೆಳಭಾಗದಿಂದ ರಸ ಹೀರುತ್ತವೆ. ಇಂತಹ ಎಲೆಗಳು ಹಳದಿಯಾಗಿ ನಂತರ ಕೆಳಗೆ ಬೀಳುತ್ತವೆ.

ನಿರ್ವಹಣೆ : ಹೂ ಬಿಡುವ ಸಮಯದಲ್ಲಿ ಗಿಡಗಳಿಗೆ ೪ ಗ್ರಾಂ. ಕಾರ್ಬಾರಿಲ್ ಡಿಡಬ್ಲ್ಯೂಪಿ ಅಥವಾ ೧.೭ ಮಿ.ಲೀ. ಡೈಮಿಥೋಯೆಟ್೩೦ ಇ.ಸಿ. ಅಥವಾ ೧.೦ ಮಿ.ಲೀ. ಡೈಕ್ಲೋರೋವಾಸ್ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟ ನಾಶಕಗಳ ಜೊತೆ ಮೀನು ಎಣ್ಣೆ ಸಾಬೂನನ್ನು ಪ್ರತಿ ಲೀಟರ್‌ಗೆ ೫ ಗ್ರಾಂ.ನಂತೆ ಬೆರೆಸಬೇಕು.

ಎಲೆ ತಿನ್ನುವ ಹುಳು : ಮರಿ ಹುಳುಗಳು ಎಲೆಗಳನ್ನು ತಿಂದು ಹಾಳುಮಾಡುತ್ತವೆ. ನಿರ್ವಹಣೆ : ಪ್ರತಿ ಲೀ. ನೀರುಗೆ ೪ ಗ್ರಾಂ. ಕಾರ್ಬಾರಿಲ್ ೫೦ ಡಬ್ಲುö್ಯಪಿ ಸೇರಿಸಿ ಸಿಂಪರಣೆ ಮಾಡಬೇಕು.

ತೊಗಟೆ ತಿನ್ನುವ ಹುಳು : ಮರಿ ಹುಳುಗಳು ತೊಗಟೆ ಮೇಲೆ ಹಿಕ್ಕೆಗಳಿಂದ ಮತ್ತು ಮರದ ಪುಡಿಗಳಿಂದ ಗೂಡು ಮಾಡಿ ಕೆಳಗೆ ತೊಗಟೆಯನ್ನು ಕೆರೆದು ತಿನ್ನುತ್ತವೆ. ನಿರ್ವಹಣೆ : ಪ್ರತಿ ಲೀ. ನೀರುಗೆ ೪ ಗ್ರಾಂ. ಕಾಬಾರಿಲ್ ೫೦ ಡೆಡಬ್ಲ್ಯೂಪಿ ಸೇರಿಸಿ ಸಿಂಪರಣೆ ಮಾಡಬೇಕು.

ಹಣ್ಣಿನ ನೊಣ : ಹಣ್ಣಿನ ನೊಣ ಪೇರಳೆಗೆ ದೊಡ್ದ ತೊಂದರೆ. ಅದರ ಮರಿ ಹುಳುಗಳು ಹಣ್ಣಿನ ತಿರುಳನ್ನು ತಿಂದು ಹಾಳುಮಾಡುತ್ತವೆ. ಅಂತಹ ಹಣ್ಣಿನ ಮೇಲೆ ಸಣ್ಣ ತೂತು ಇರುತ್ತದೆ, ನಂತರ ಹಣ್ಣುಗಳು ಕೊಳೆಯುತ್ತವೆ. ನಿರ್ವಹಣೆ : ೧ ಮಿ.ಲೀ. ಮಿಥೈಲ್ ಯುಜಿನಾಲ್ ಮತ್ತು ಮೆಲಾಥಿಯಾನ್ ೫೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಪ್ರತಿ ಬಲೆಯಲ್ಲಿ ೧೦೦ ಮಿ.ಲೀ. ದ್ರಾವಣ ಹಾಕಿ  ಅವುಗಳನ್ನು ಗಿಡಕ್ಕೆ ಅಲ್ಲಲ್ಲಿ ತೂಗು ಹಾಕಬೇಕು. (ಪ್ರತಿ ಹೆಕ್ಟೇರಿಗೆ ೧೦ ಬಲೆಗಳು ಬೇಕಾಗುತ್ತವೆ). ಅಥವಾ ಹಣ್ಣು ಮಾಗುವ ಸಮಯದಲ್ಲಿ ೪ ಗ್ರಾಂ. ಕಾರ್ಬಾರಿಲ್ ೫೦ ಡಿಡಬ್ಲ್ಯೂಪಿ ಅಥವಾ ೧.೭ ಮಿ.ಲೀ. ಡೈ ಮಿಥೊಯೇಟ್ ೩೦ ಇ.ಸಿ.ಯನ್ನು ೧೦ ಗ್ರಾಂ. ಬೆಲ್ಲದೊಂದಿಗೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಮಿಲ್ಲೋಸಿರಸ ದುಂಬಿ (ಬೂದು ಬಣ್ಣದ ಮೂತಿ ಹುಳು) : ಪ್ರೌಢ ದುಂಬಿಗಳು ಎಲೆಗಳನ್ನು ಅಂಚಿನಿAದ ತಿಂದು ಹಾಳು ಮಾಡುತ್ತವೆ. ಮರಿ ದುಂಬಿಗಳು ಬೇರುಗಳನ್ನು ತಿನ್ನುತ್ತವೆ. ನಿರ್ವಹಣೆ : ೪ ಗ್ರಾಂ. ಕಾರ್ಬಾರಿಲ್ ೫೦ ಡಿಡಬ್ಲುö್ಯಪಿಯನ್ನು ಪ್ರತಿ ಲೀ. ನೀರಿಗೆ ಬೆರೆಸಿ ಕೀಟ ಬಾಧೆ ಕಂಡುಬಂದಾಗ ಸಿಂಪಡಿಸಬೇಕು.

ರೋಗಗಳು :

ಕಜ್ಜಿರೋಗ : ಹಣ್ಣುಗಳ ಮೇಲೆ ಕಂದು ಬಣ್ಣದ ಹುರುಕು ಹುರುಕಾದ ಚುಕ್ಕೆ ಕಂಡುಬಂದು, ದೊಡ್ಡದಾಗಿ ಹಣ್ಣುಗಳು ಕೊಳೆಯುವಂತೆ ಮಾಡುತ್ತವೆ.

ನಿರ್ವಹಣೆ : ತೀವ್ರ ಬಾಧೆಗೊಳಗಾದ ಹಣ್ಣುಗಳನ್ನು ನಾಶಪಡಿಸಿ ರೋಗದ ಹರಡುವಿಕೆಯನ್ನು ತಡೆಯಲು ೨ ಗ್ರಾಂ. ಜೈನೆಬ್ ೭೫ ಡಿಡಬ್ಲ್ಯೂಪಿ. ಅಥವಾ ೪ ಮಿ.ಲೀ. ಜೈರಾಯಿಡ್ ನಂತರ ೨ ಗ್ರಾಂ. ಮೆಂಕೊಜೆಬ್ ೭೫ ಡಿಡಬ್ಲ್ಯೂಪಿ ಅಥವಾ ೧ ಗ್ರಾಂ. ಕಾರ್ಬನ್ ಡೈಜಿಮನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

ಸಿಡಿ ರೋಗ : ಎಲೆಗಳು ಹಳದಿಯಾಗಿ ಅಕಾಲಿಕವಾಗಿ ಉದುರಿ, ಕಾಂಡಗಲು ಒಣಗಿದಂತಾಗಿ ಇಡೀ ಗಿಡವೇ ಸೊರಗಿ ಸಾಯುತ್ತದೆ. ನಿರ್ವಹಣೆ : ಬಾಧೆಗೊಳಗಾದ ಗಿಡಗಳನ್ನು ಗುರುತಿಸಿ ನಾಶಪಡಿಸಬೇಕು. ರೋಗ ತಾಳಿಕೊಳ್ಳುವ ತಳಿಗಳನ್ನು ಬೆಳೆಸಬೇಕು. ೧ ಗ್ರಾಂ. ಕಾರ್ಬನ್‌ಡೈಜಿಮ್ ಅಥವಾ ೧ ಗ್ರಾಂ. ಡಯೋಫಿನಾಯಟ್ ಮಿಥಾಯಿಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಸುತ್ತಲೂ ಮಳೆಗಾಲ ಪ್ರಾರಂಭಕ್ಕೆ ಮುಂಚೆ ಪ್ರತಿ ಗಿಡಕ್ಕೂ ೨-೩ ಲೀಟರ್ ದ್ರಾವಣವನ್ನು ಹಾಕಬೇಕು. 

ಹಣ್ಣು ಕೊಳೆ ರೋಗ : ಹಣ್ಣುಗಳ ಮೇಲೆ ಕಪ್ಪು ಅಥವಾ ಕಂದು ಚುಕ್ಕೆಗಳು ಕಂಡುಬಂದು ಹಣ್ಣಿನ ಭಾಗವು ಮೃದುವಾಗಿ ಕೊಳೆತು ಹೋಗುತ್ತದೆ. ಕಜ್ಜಿ ತಿಗಣೆ ಬಾಧೆ ಇದ್ದಲ್ಲಿ ರೋಗದ ತೀವ್ರತೆ ಹೆಚ್ಚಾಗಿರುತ್ತದೆ.

ಅಂಥ್ರಾಕ್ನೋಸ್ : ಎಲೆಗಳ ಮೇಲೆ ಹಾಗೂ ಹಣ್ಣುಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡುಬರುತ್ತದೆ.

ಕಜ್ಜಿ ತಿಗಣೆ ಮತ್ತು ಹಣ್ಣು ಕೊಳೆ ರೋಗಗಳ ನಿಯಂತ್ರಣಕ್ಕಾಗಿ ಹೂ ಬಿಡುವ ಸಮಯದಲ್ಲಿ ಗಿಡಗಳಿಗೆ ಕಾರ್ಬಾರಿಲ್  ೫೦ ಡಿಡಬ್ಲ್ಯೂಪಿ ಅಥವಾ ೧.೭ ಮಿ.ಲೀ. ಡೈ ಮಿಥೋಯೇಟ್ ೩೦ ಇ.ಸಿ. ಅಥವಾ ೧ ಮಿ.ಲೀ. ಅಕ್ಸಿಡಿಮೆಟಾನ್ ಮಿಥೈಲ್ ೨೫ ಇ.ಸಿ. ಜೊತೆಗೆ ೨ ಗ್ರಾಂ. ಕ್ಲೋರೋಥೈಲೋನಿಲ್ ೭೦ ಡಬ್ಲುö್ಯಪಿ. ಅಥವಾ ೩ ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ೫೦ ಡಬ್ಲೂö್ಯಪಿ. ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಬಾಧೆ ಮತ್ತೆ ಕಂಡುಬAದಲ್ಲಿ ಇದೇ ಸಿಂಪರಣೆಯನ್ನು ಪುನಃ ಮಾಡಬೇಕು. 

ಕೇವಲ ಹಣ್ಣು ಕೊಳೆ ರೋಗವನ್ನು ಹತೋಟಿ ಮಾಡಲು ಹಣ್ಣುಗಳಿಗೆ ೧೦೦ ಪಿ.ಪಿ.ಎಮ್. ಅರಿಯೋಫಜಿನ್ (೧೦೦ ಮಿ.ಗ್ರಾಂ. ೧ ಲೀ. ನೀರಿನಲ್ಲಿ) ಮತ್ತು ೨ ಗ್ರಾಂ. ಜೈನೆಬ್ ಅಥವಾ ಮ್ಯಾಂಕೋಜೆಬ್ ೭೫ ಡಬ್ಯು÷್ಲಪಿ. ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು. ಜುಲೈ ತಿಂಗಳಿನಿಂದ ೨ ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಪ್ರತಿ ವಾರಕ್ಕೊಮ್ಮೆ ಸಿಂಪಡಿಸಬೇಕು. ೧ ಗ್ರಾಂ. ಕಾರ್ಬನ್‌ಡೈಜಿಮ್ ಅಥವಾ ೧ ಗ್ರಾಂ. ಧಯೋಫಿನಾಯಡ್ ಮಿಥೈಲ್ ಸಿಮಪಡಿಸಬೇಕು.

ಮಾರುಕಟ್ಟೆ: ಪೇರಳೆ ಹಣ್ಣುಗಳನ್ನು ಮಾರಾಟ ಮಾಡುವಾಗ ಅದನ್ನು ಗ್ರೇಡಿಂಗ್ ಮಾಡಿ ವ್ಯವಸ್ಥಿತವಾಗಿ ಪ್ಯಾಕಿಂಗ್‌ಮಾಡಿ ಮಾರಾಟ ಮಾಡಬೇಕು. ಉತ್ತಮ ಗಾತ್ರದ, ಉತ್ತಮ ನೋಟದ ಕಾಯಿಗಳನ್ನು ಬೇರೆ ಸಣ್ಣ ಹಾಗೂ ಸ್ವಲ್ಪ ಎಳೆಯ ಹಣ್ಣುಗಳನ್ನು  ಬೇರೆ ಮಾಡಿ ಅದನ್ನು ಪ್ರತ್ಯೇಕವಾಗಿ ಮಾರಾಟ ಮಾಡಬೇಕು.ಆನ್ ಲೈನ್ ಮಾರಾಟ ಮಾಡುವುದು ಲಾಭದಾಯಕ. ಸಾಮಾಜಿಕ ತಾಣಗಳಲ್ಲಿ ಹಣ್ಣುಗಳ ಬ್ರಾಂಡ್ ಮಾಡುವ ಮೂಲಕ ಹೆಚ್ಚು ಪ್ರಚಾರ ಮಾಡಬೇಕು. ಹಣ್ಣಿನ ಬೆಳೆಯನ್ನು  ಬೆಳೆಸುವಾಗ ಬೇಡಿಕೆ ಇರುವ ಮಾರಾಟಗಾರರನ್ನು ಗೊತ್ತು ಮಾಡಿಕೊಳ್ಳಬೇಕು. ಈಗ  ಹಣ್ಣಿನ ಮಾರಾಟಗಾರರು ಹೆಚ್ಚಿನ ಪ್ರಮಾಣದಲ್ಲಿ  ಇರುವ ಕಾರಣ ಮಾರುಕಟ್ಟೆ ಸಮಸ್ಯೆ ಇರುವುದಿಲ್ಲ.  ಬರೇ ತಾಜಾ ಹಣ್ಣಿನ ಮಾರಾಟಗಾರರನ್ನು ಅವಲಂಭಿಸಬಾರದು. ತಮ್ಮ ಸುತ್ತಮುತ್ತ ಹಣ್ಣು ತರಕಾರಿಗಳನ್ನು ಒಣಗಿಸುವ ಸಂಸ್ಕರಣಾ ಘಟಕಗಳು  ಇದ್ದರೆ ಅವರಿಗೂ ಮಾರಾಟ ಮಾಡಬಹುದು.  

(ಮುಗಿಯಿತು)

ಮಾಹಿತಿ: ರಾಧಾಕೃಷ್ಣ ಹೊಳ್ಳ