ಉದಯರವಿ

ಉದಯರವಿ

ಕವನ

ಉದಯರವಿ ಉದಯರವಿ
ಭಾವ-ಬೆಸುಗೆಯ, ಸ್ನೇಹ ಸುಧೆಯ
ಈ ಉದಯರವಿ, ನೀ ಉದಯರವಿ

ದ್ವೇಷ ಭಾವದ ದಾಷ್ಠತೆ ಮರೆಸಲು
ಸ್ವಾರ್ಥ ಭಾವದ ಕಾಷ್ಠತೆ ಅಳಿಸಲು
ಧರೆಯದಿ ಈ ಧರೆಯದಿ
ಉದಯರವಿ.....

ಧೈರ್ಯಧಾರೆಯ ಉಕ್ಕಿ ಹರಿಸಲು
ಪ್ರೀತಿ ಸಿಹಿಯನು ಬೆರೆಸಿ ಹಂಚಲು
ಮನದೀ , ಹರಸು ಬಾ ರವಿಯೇ ಹರಸು ಬಾ
ಉದಯರವಿ.....

‘ನಾನು’ ಎಂಬುವ ’ಗರ್ವ’ ತೊಳೆಯಲು
‘ನಾವು’ ಎಂಬುವ ಹಣತೆ ಬೆಳಗಲು
ಸಾಧನೆಗೆ ಸ್ಪೂರ್ಥಿಯಾಗಿ
ನೆಲಸು ಬಾ ಆತ್ಮದಿ ನೆಲಸು ಬಾ
ಉದಯರವಿ.....

ಕಾಲಚಕ್ರದ ಕ್ರೌರ್ಯವ ಮರೆಸಿ
ಹೀನಭಾವದ ನಿಳೆಯ ತೊಲಗಿಸಿ
ವಿಶ್ವಶಾಂತಿಯ ಜೋಗುಳವನು
ನೀ ಹಾಡು ಬಾ ರವಿಯೇ ಹಾಡು ಬಾ
ಉದಯರವಿ.....

ಸತ್ಯಧರ್ಮದ ಪಾಠ ಕಲಿಸಲು
ತಾ, ಮಿಗಿಲೆಂಬ ಮೊಢತೆ ಅಳಿಸಲು
ವಿಶ್ವಮಾನವತೆಯ
ಬೆಳಗು ಬಾ ರವಿಯೇ ಬೆಳಗು ಬಾ
ಉದಯರವಿ.....