ಉದುರುತ್ತಿವೆ
ಹಣ್ಣುಗಳಿಂದ ತುಂಬಿ ತುಳುಕುತ್ತಿದ್ದ ಮರಕ್ಕೆ ಜಂಭವೋ ಜಂಭ. ಸುತ್ತ ಮುತ್ತ ಇದ್ದ ಎಲ್ಲವನ್ನೂ ಆಡಿಕೊಳುತ್ತಿತ್ತು. ತನಗೆ ಆಶ್ರಯ ನೀಡಿದ್ದ ಬೆಟ್ಟವನ್ನೂ ಬಿಡಲಿಲ್ಲ." ಎಷ್ಟು ವರ್ಷಗಳಿಂದ ಇರುವೆ ನೀನು ಮಣ್ಣಿನಲಿ,,? ಏನು ಮಾಡಿದರೂ ನನ್ನಂತೆ ಚಿಗುರಲಾರೆ,..!" ಎಂದಿತು.
ಬೆಟ್ಟದ ಬುಡದಲ್ಲೀಗ ಬಂಡೆ ಸಿಡಿಸುವವರು , ಜಲ್ಲಿ ಕುಟ್ಟುವವರು ಬಂದಿದ್ದಾರೆ. ಹಣ್ಣುಗಳು ತಪತಪನೆ ಉದುರುತ್ತಿವೆ.
........................................................
c v sheshadri holavanahalli