ಉದ್ದಿನ ಹಿಟ್ಟಿನ ಗೊಜ್ಜು
ಉದ್ದಿನ ಬೇಳೆ – ½ ಕಪ್, ಹುಳಿ ಮೊಸರು – ½ ಕಪ್, ಹಸಿಮೆಣಸಿನ ಕಾಯಿ 2 – 3, ಉಪ್ಪು – ರುಚಿಗೆ ತಕ್ಕಂತೆ, ಕೊತ್ತಂಬರಿ ಸೊಪ್ಪು – 2 ಎಸಳು
ಒಗ್ಗರಣೆಗೆ : ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಕರಿಬೇವಿನ ಸೊಪ್ಪು – 3 – 4 ಎಸಳು, ಇಂಗು – 1 ಚಿಟಿಕೆ, ಬೆಳ್ಳುಳ್ಳಿ 4 – 5 ಎಸಳು, ಶುಂಠಿ – ½ ಇಂಚು
ಉದ್ದಿನ ಬೇಳೆಯನ್ನು ತೊಳೆದು ಒಂದು ಘಂಟೆ ನೆನೆಸಿ. ಶುಂಠಿಯನ್ನು ಸಣ್ಣಗೆ ತುಂಡು ಮಾಡಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನೆನೆದ ಬೇಳೆಯನ್ನು ನೀರು ಬಸಿದು ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟಿಗೆ ಹುಳಿ ಮೊಸರು, ಹೆಚ್ಚಿದ ಶುಂಠಿ ಮತ್ತು ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಕಲೆಸಿ. ನಂತರ ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿ ಬಿಸಿ ಅನ್ನದೊಂದಿಗೆ ಈ ಗೊಜ್ಜನ್ನು ಕಲೆಸಿಕೊಂಡು ತಿನ್ನಲು ರುಚಿಯಾಗಿರುತ್ತದೆ.
ಸೂಚನೆ: ಒಗ್ಗರಣೆಗೆ ಬೆಳ್ಳುಳ್ಳಿ ಹಾಕಿದರೆ ಇಂಗನ್ನು ಹಾಕುವ ಅಗತ್ಯವಿಲ್ಲ. ಬೆಳ್ಳುಳ್ಳಿ ಉಪಯೋಗಿಸದವರು ಇಂಗಿನ ಒಗ್ಗರಣೆ ಮಾಡಬಹುದು.