ಎಕಾಂಗಿ
ಕವನ
ಎಕಾಂಗಿ ದಾರಿಯಲ್ಲಿ ಪಯಣಿಗ ನನಗಲೊಲ್ಲೆ,
ಆದರೂ ಇಂದು ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.
ಸವಿ ನೆನಪುಗಳ ಮೆಲುಕು ಹಾಕುತ್ತಾ,
ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.
ಭಾರವೆನಿಸಿದೆ ಮನವು ಇಂದು ನೋವುಗಳ ತುಂಬಿಕೊಂಡು .
ಪ್ರೀತಿಯ ಆಸರೆಯ ಬಯಸುತ್ತಾ, ಭಾರವಸೆಯ ಕಾಣದ ಕೈಯ ಹುಡುಕುತ್ತಾ,
ಹೊರಟಿಹೆನು ಕಾಣಾದುರಿಗೆ, ಮರಳಿ ಪ್ರೀತಿಯ ಮನಸುಗಳೆಡೆಗೆ,
ಪ್ರೀತಿ ಇಲ್ಲದೇ ಮನಸು ಬದುಕಲೊಲ್ಲದು,
ನೋವನ್ನು ಮರೆಮಾಚಲು ಮನಸು ಕಾದಿಹುದು, ಕಂಬನಿಯಲ್ಲಿ ಮಿಂದು,
ಒಂಟಿತನದ ಬಿಸಿಯಲ್ಲಿ ಬೆಂದು, ಒದ್ದಾಡಿದೆ ಮನವು.
ನಗಲು ಬಯಸಿದೆ ಮನವು ನೋವ ಮರೆಸಿ, ಕಾದು ಕುಳಿತಿದೆ ಪ್ರೀತಿ ಬಯಸಿ