ಎತ್ತ ಸಾಗುತ್ತಿದೆ ಭಾರತ?
ಇತ್ತೀಚಿನ ಕೆಲವೊಂದು ಬೆಳವಣಿಗೆಗಳು ನನ್ನನ್ನು ತುಂಬಾ ಚಿಂತೆಗೀಡು ಮಾಡಿವೆ. ಕೆಳಗಿನ ಘಟನೆಗಳ ಬಗ್ಗೆ ಒಮ್ಮೆ ಯೋಚಿಸಿ :
೧. ಪಸ್ಚಿಮ ಬಂಗಾಳದ ದೇಗಂಗಾ ದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ, ದೇವಸ್ಥಾನಗಳನ್ನು ಧ್ವಂಸಗೊಳಿಸುವುದು ಇತ್ಯಾದಿ ಸರ್ವೇ ಸಾಮಾನ್ಯವಾಗಿದೆ. ಈ ಕೃತ್ಯಗಳನ್ನು ಖಂಡಿಸಿ ಈ ಬಾರಿ ಹಿಂದೂಗಳು ದುರ್ಗಾ ಪೂಜೆ ಆಚರಿಸದಿರಲು ನಿರ್ಧರಿಸಿದರು. ಅದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ? ಸರಕಾರ ಬಹುಸಂಖ್ಯಾತ ಮುಸ್ಲಿಮರ ಪರವಾಗಿರುವಾಗ? ಎಂದಿನಂತೆ ದೇಶದ ಯಾವುದೇ ಪ್ರಮುಖ ಪತ್ರಿಕೆ ಈ ನರಮೇಧವನ್ನು ವರದಿ ಮಾಡಿಲ್ಲ. ಹಿಂದೂಗಳ ನರರಲ್ಲ ಎಂಬ ಕಾರಣವೋ ಏನೋ, ಗೊತ್ತಿಲ್ಲ.
೨. ಕೇರಳದಲ್ಲಿ ಯಾತ್ರಾರ್ಥಿಗಳಿಗಾಗಿರುವ ಬಸ್ ಗಳಲ್ಲಿ ಹಿಂದೂ ದೇವ ದೇವತೆಗಳ ಚಿತ್ರಗಳಿಗೆ ನಿಷೇಧ. ಈ ಬಸ್ ಗಳು ಪ್ರಮುಖವಾಗಿ ಶಬರಿಮಲೆ ಯಾತ್ರಾರ್ಥಿಗಳಿಗಾಗಿ ನಿಯೋಜಿಸಿದಂಥವುಗಳು. ಈ ನಿಷೇಧಧ ಅರ್ಥ ಏನು? ಕೇರಳದಲ್ಲಿ ಷರಿಯತ್ ಕಾನೂನು ಈಗಾಗಲೇ ಜಾರಿಯಾಗಿದೆ, ಗಮನದಲ್ಲಿರಲಿ ಎಂಬ ಎಚ್ಚರಿಕೆಯೇ?
೩. ದೇಶದ ಅಖಂಡತೆಯನ್ನೇ ಪ್ರಶ್ನಿಸುವ ಗಿಲಾನಿ, ಅರುಂಧತಿ ಇನ್ನೂ ಸ್ವಚ್ಚಂದವಾಗಿ ತಿರುಗಾಡುತ್ತಿರುವುದು, ಹಾಗೂ ಅವರನ್ನು ಸಮರ್ಥಿಸಲು ಇದೇ ಭಾರತ ದೇಶ ಕೊಟ್ಟಿರುವ ವಾಕ್ ಸ್ವಾತಂತ್ರ್ಯವನ್ನು ನೆಪವಾಗಿರಿಸಿರುವ ಸರಕಾರ ಹಾಗೂ ಸರಕಾರೇತರ ಸಂಘಟನೆಗಳು
೪. ಈ ಮೇಲ್ಕಂಡ ಯಾವುದೇ ಅನಾಹುತಗಳನ್ನು ಪ್ರಶ್ನಿಸುವ ಎದೆಗಾರಿಕೆ, ಅಗತ್ಯತೆ, ಆಸಕ್ತಿ, ಅನಿವಾರ್ಯತೆ ಯಾರಿಗೂ ಇಲ್ಲದಿರುವುದು, ಪ್ರತಿಪಕ್ಷವಾದ ಬಿಜೆಪಿ, ಹಿಂದೂಪರ ಸಂಘಟನೆಗಳಿಗೂ ಕೂಡ
ಏನನಿಸುತ್ತಿದೆ ನಿಮಗೆ?
Comments
ಉ: ಎತ್ತ ಸಾಗುತ್ತಿದೆ ಭಾರತ?