ಎನ್ನ ಬರಹಗಳಿಗೆ ಪುರಸ್ಕಾರ!
ನಾ ಬರೆವ ಬರಹಗಳಿಂದ
ಒಬ್ಬ ಬಡವನ ಹೊಟ್ಟೆಯೂ
ತುಂಬುವುದಿಲ್ಲ
ಎಂದು ನಾ ಬಲ್ಲೆ ತಂದೆ!
ಆದರೆ ಹುಲು ಮಾನವ ನಾನು
ಬಯಸಬಾರದೇ ಕೊಂಚ ಪುರಸ್ಕಾರ?
ನನ್ನೀ ಬರಹಗಳು
ಭೇದವಿಲ್ಲದೇ ಬಡವ ಬಲ್ಲಿದನೆಂದು
ಅಂತರವಿಲ್ಲದೇ ಹಿರಿಯ ಕಿರಿಯನೆಂದು
ಮುಖದ ಮೇಲೆ ನಗೆ ಚೆಲ್ಲಿದರೆ
ಚಿಂತನೆಗೆ ತಲೆಯನ್ನು ಒಡ್ಡಿದರೆ
ಮಾಸಿದ ನೆನಪುಗಳನ್ನು ಬಡಿದೆಬ್ಬಿಸಿದರೆ
ಹೃದಯವನ್ನು ಸಣ್ಣಗೊಮ್ಮೆ ಮಿಡಿದರೆ
ಪರಪರ ಅಂತ ತಲೆ ಕೆರೆದುಕೊಳ್ಳುವಂತಾದರೆ
ನಾಲ್ಕು ಮಂದಿಯೊಂದಿಗೆ ಹಂಚಿಕೊಳ್ಳುವಂತಾದರೆ
ಮಾತುಗಳ ಮಧ್ಯೆ ನುಸುಳುವಂತಾದರೆ
ಅದೇ ಎನ್ನ ಬರಹಗಳಿಗೆ ಪುರಸ್ಕಾರ !
ಅದೇ ಎನ್ನ ಬರಹಗಳಿಗೆ ಪುರಸ್ಕಾರ !
Comments
ಉ: ಎನ್ನ ಬರಹಗಳಿಗೆ ಪುರಸ್ಕಾರ!
ಭಲ್ಲೇ ಜಿ, ತಮ್ಮ ಬರಹಗಳಿಗೆ ನಮ್ಮೆಲ್ಲ ಸಂಪದಿಗರ ತುಂಬು ಹೃದಯದ ಪುರಸ್ಕಾರವಿದ್ದೇ ಇದೆ. ತುಂಬ ಚನ್ನಾಗಿ ಬರೆಯುತ್ತಿದ್ದೀರಿ. ಕವನವೂ ಇಷ್ಟವಾಯಿತು. ಧನ್ಯವಾದಗಳು.
In reply to ಉ: ಎನ್ನ ಬರಹಗಳಿಗೆ ಪುರಸ್ಕಾರ! by lpitnal
ಉ: ಎನ್ನ ಬರಹಗಳಿಗೆ ಪುರಸ್ಕಾರ!
ನಿಮ್ಮ ತುಂಬು ಹೃದಯದ ಹಾರೈಕೆ ಓದಿ ಬಹಳ ಸಂತೋಷವಾಯಿತು ಇಟ್ನಾಳರೇ . ಧನ್ಯವಾದಗಳು.
ಉ: ಎನ್ನ ಬರಹಗಳಿಗೆ ಪುರಸ್ಕಾರ!
ಶ್ರೀಯುತ ಇಟ್ನಾಳರ ಅಭಿಪ್ರಾಯವೆ ನನ್ನದೂ ಸಹ . ತಮ್ಮ ಬರಹಗಳು ಸದಾ ನಮ್ಮ ಮನ ಹರ್ಷಚಿತ್ತ ವಾಗಿರಿಸಲಿ .
ವಂದನೆಗಳು ಭಲ್ಲೆ ಅವರೆ.
In reply to ಉ: ಎನ್ನ ಬರಹಗಳಿಗೆ ಪುರಸ್ಕಾರ! by swara kamath
ಉ: ಎನ್ನ ಬರಹಗಳಿಗೆ ಪುರಸ್ಕಾರ!
ಸ್ವರ ಕಾಮತ್ ಅವರಿಗೆ ವಂದನೆಗಳು ... ಜವಾಬ್ದಾರಿಯುತ ಬರಹಗಳನ್ನೇ ಬರೆಯುವಂತೆ ವರ ದಯಪಾಲಿಸುವಂತೆ ಭಗವಂತನಲ್ಲಿ ಪ್ರಾರ್ಥನೆ !
ಉ: ಎನ್ನ ಬರಹಗಳಿಗೆ ಪುರಸ್ಕಾರ!
ಭಲ್ಲೇಜಿ,
>>ಮುಖದ ಮೇಲೆ ನಗೆ ಚೆಲ್ಲಿದರೆ
ಚಿಂತನೆಗೆ ತಲೆಯನ್ನು ಒಡ್ಡಿದರೆ
ಮಾಸಿದ ನೆನಪುಗಳನ್ನು ಬಡಿದೆಬ್ಬಿಸಿದರೆ
ಹೃದಯವನ್ನು ಸಣ್ಣಗೊಮ್ಮೆ ಮಿಡಿದರೆ
ಪರಪರ ಅಂತ ತಲೆ ಕೆರೆದುಕೊಳ್ಳುವಂತಾದರೆ
ನಾಲ್ಕು ಮಂದಿಯೊಂದಿಗೆ ಹಂಚಿಕೊಳ್ಳುವಂತಾದರೆ
ಮಾತುಗಳ ಮಧ್ಯೆ ನುಸುಳುವಂತಾದರೆ...
-ಮುಗುಳ್ನಗೆಯಿಂದ..ಮಾತುಗಳ ಮಧ್ಯೆ ನುಸುಳುವವರೆಗೆ ಎಲ್ಲವೂ ಆಗುವುದು..ಒಂದು ಬಿಟ್ಟರೆ..
ಈ "ಪರಪರ ಅಂತ ತಲೆ ಕೆರೆದುಕೊಳ್ಳುವಂತಾದರೆ"
ಯಾಕೆ ಸೇರಿಸಿದಿರಿ ಅಂತ ತಲೆಕೆರೆದುಕೊಳ್ಳುತ್ತಿದ್ದೇನೆ.. ಪರಪರ :)
In reply to ಉ: ಎನ್ನ ಬರಹಗಳಿಗೆ ಪುರಸ್ಕಾರ! by ಗಣೇಶ
ಉ: ಎನ್ನ ಬರಹಗಳಿಗೆ ಪುರಸ್ಕಾರ!
"ನಿಮ್ಮ ಕವನದ ಕೆಲವು ಮಾತುಗಳು ತಲೆ ಕೆರೆದುಕೊಳ್ಳುವಂತಾಯ್ತು. ನಾಲ್ಕು ಸಾರಿ ಓದಿದ ಮೇಲ್ ಅರ್ಥವಾಯ್ತು" ಅಂದಾಗಲೂ ಸಂತೋಷವಾಗುತ್ತೆ. ನಾಲ್ಕ್ ಬಾರು ಓದಿದರಲ್ಲ ಅಂತ. ಅದೇ ಪುರಸ್ಕಾರ .. ಅವರಿಗೆ ನನ್ನ ನಮಸ್ಕಾರ