ಎರಡು ಗಝಲ್ ಗಳು…
ಕವನ
ಗಝಲ್ ೧
ಗತ್ತಲೇ ಹೋಗುವಾ ಕೊಂಬಿನಾ ರೀತಿಯೇ
ಬತ್ತದಾ ಮುತ್ತಲೇ ಬಾಳುವಾ ರೀತಿಯೇ
ಚೇತನಾ ಸತ್ತರೇ ಚಿಂತನೇ ಹುಟ್ಟಿತೇ
ಮಂಚವಾ ಏರಲೂ ಬಾರದಾ ರೀತಿಯೇ
ಸುಂದರಾ ಸಂತೆಯೂ ಕಂಡಿರಾ ಊರಲೀ
ಬಂಧುವೇ ಎಲ್ಲಿಹೇ ಮಲ್ಲೆಯಾ ರೀತಿಯೇ
ಡೊಂಕಿನಾ ಸಂಕವೂ ಜೀಕುತಾ ನಕ್ಕಿದೇ
ಅಂಕೆಯೂ ಇಲ್ಲದಾ ಮತ್ಸರಾ ರೀತಿಯೇ
ನೋಟವೇ ಎಲ್ಲಿಹೇ ಬಾರನೇ ಈಶನೇ
ಜೋಳಿಗೇ ಕಂಪಿಗೇ ಸಂಭ್ರಮಾ ರೀತಿಯೇ
***
ಗಝಲ್ ೨
ಚೆಲುವಿನ ಗಣಿಯವಳು, ನೋಡುವುದು ಹೇಗೆ
ಒಲವಿನ ಚಿಟ್ಟೆಯವಳು, ಕಾಣುವುದು ಹೇಗೆ
ತಂಪಿನ ಸಮಯದಲ್ಲಿ ,ಹತ್ತಿರ ನಿಂತಳು ಯಾಕೆ
ಇಂಪಿನ ಹಾಡಿಗವಳು, ಕುಣಿಯುವುದು ಹೇಗೆ
ಕಾಣಲಿ ಉನ್ಮಾದದ ಸಮಯ, ಕಣ್ಗಳ ನೋಟ
ಬಾನಲಿ ನಡೆಯುವಳು, ಸೇರುವುದು ಹೇಗೆ
ಅಂದದ ಬೆಳದಿಂಗಳ ರಾತ್ರಿ, ನಾನು ನೋಡಿದೆನು
ಚೆಂದದ ರೂಪದವಳು, ಹಿಡಿಯುವುದು ಹೇಗೆ
ಹತ್ತಿರ ಕೈಹಿಡಿದನೋ, ಸುಟ್ಟು ಹೋದಾನು ಈಶಾ
ಅತ್ತರೆ ಕಾಯುವಳು, ಮುದ್ದಿಸುವುದು ಹೇಗೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
