ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿ

ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿ

 

ಕದನವಿರದೆ ಒಂದೆ ಹೇಳಿ ಮುಂದೆ ಮುಂದೆ ಹೋದೆ

ಚಿತ್ರ ಪಟದಿ ನೀನೆ ಇರಲು ನಿಂತೆಯಿಂದು ಗೆಳತಿ

 

ಜೀವದುಸಿರ ನೆಲದ ಮೇಲೆ ಕುಳಿತು ಮುಕ್ತ ಮಾತು

ಕನಸಿನಾಟ ಮನೆಯ ಒಳಗೆ ಸೇಲೆಯಿಂದು ಗೆಳತಿ

 

ಮಾತು ಕಳೆದು ಹೋದ ಗಳಿಗೆ ಎಲ್ಲಿ ಇದ್ದೆ ಮಧುವೆ

ಮೌನದಿಂದ ಒಲುಮೆಯನ್ನು ಸುರಿದೆಯಿಂದು ಗೆಳತಿ

 

ಹೊಸತು ಭಾವ ಹೊಸೆದ ಬಗೆಗೆ ನನಸು ಬಂತು ಈಶಾ

ಸ್ನೇಹ ಚಿಮ್ಮಿ ಹೊಮ್ಮಿದಾಗ ಸವಿದೆಯಿಂದು ಗೆಳತಿ

***

ಗಝಲ್ ೨

ಮಧುವನದ ತುಂಬೆಲ್ಲವು ಅಲೆಮಾರಿಯಂತೆ ಅಲೆದಾಡಿದೆ ಗೆಳತಿ

ಪ್ರೀತಿಯ ಆವೇಗಕ್ಕೆ ಹುಚ್ಚನಾಗಿ ಬೀದಿಯಲ್ಲಿ ಹುಡುಕಾಡಿದೆ ಗೆಳತಿ

 

ಮತ್ತಿಗೆ ಹತ್ತಿರವಾದೆ ಎನ್ನುವಾಗಲೇ ಪ್ರೇಮವಿಂದು ದೂರವಾಯಿತೆ

ಎಲುಬಿಲ್ಲದ ನಾಲಿಗೆಯ ನಡುವೆಯೇ ಇಂದು ಮಾತನಾಡಿದೆ ಗೆಳತಿ 

 

ಯೌವನದಲ್ಲಿಯ ಸೆಳೆತವದು ಜೀವನದ ಪಾಠ ಅಂದದ್ದೇ ತಪ್ಪೇನು

ಬಾಹು ಬಂಧನದ ಒಳಗಿನ ಬೆಂಕಿಯ ಜೊತೆಗೇ ಹೊಡೆದಾಡಿದೆ ಗೆಳತಿ

 

ಮೌನದ ಹತ್ತಿರ ಯಾವತ್ತೂ ಮುತ್ತುಗಳ ಬಗ್ಗೆಯೇ ಮಾತನಾಡದಿರು 

ಹೃದಯ ಭಾವನೆಗಳ ಕೊಂದಾಗಲೂ ಹುಲಿಯಂತೆ ಸೆಣೆಸಾಡಿದೆ ಗೆಳತಿ 

 

ಹುಣ್ಣಿಮೆಯ ದಿನದಲಿ ಮೆತ್ತನೆಯ ಹಾಸಿಗೆಯಲ್ಲಿ ಕುಳಿತಿಹನು ಈಶಾ 

ಹಸಿವಿಲ್ಲದಿಹ ನೋಟದ ಉಸಿರಿನ ದೇಹದಾಳದಿ ಹೊರಳಾಡಿದೆ ಗೆಳತಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ; ಇಂಟರ್ನೆಟ್ ತಾಣ

ಚಿತ್ರ್