ಎರಡು ಗಝಲ್ ಗಳು....
ಕವನ
ಗಝಲ್ ೧
ಜೀತಕ್ಕೆ ಇರುವವರಲ್ಲ ಎಂಬುದನು ತಿಳಿಯಿರಿ ಈಗ
ಸ್ವಾತಂತ್ರ್ಯದ ದಿಕ್ಕಿನೆಡೆಗೆ ಯಾವತ್ತೂ ನಡೆಯಿರಿ ಈಗ
ಪ್ರಾಮಾಣಿಕವಾದ ನಂಬಿಕೆಗಳೆಲ್ಲ ಹೋದವು ಎತ್ತ
ಸಂವಿಧಾನದ ಆಶಯಗಳ ಬಗ್ಗೆಯೇ ಕಲಿಯಿರಿ ಈಗ
ಛತ್ರಿ ಚಾಮರವನು ಹಿಡಿದು ಹೋಗುವಿರಿ ಯಾಕೆ
ನಮ್ಮೊಳಗಿನ ಬಲ ,ಅದೇನೆಂದು ಅರಿಯಿರಿ ಈಗ
ಸಾಮಾನ್ಯರಿಗೆ ದಾರಿ ತೋರಿಸುವರ ಕಡೆ ನೋಡಿರಿ
ಹುಮ್ಮನಸ್ಸಿನಲಿ ಒಳ್ಳೆಯವರ ಜೊತೆ ಬೆರೆಯಿರಿ ಈಗ
ಬಡವರಲ್ಲಿಯ ನೋವನರಿಯುತ ಸ್ಪಂದಿಸು ಈಶಾ
ಸಹೃದಯಕೆ ಸ್ವಂತಿಕೆಯು ಬಂದಾಗ ಬರೆಯಿರಿ ಈಗ
***
ಗಝಲ್ ೨
ಮೋಡವು ತಂಪಿರುವ ಹಾಗೆ ಯೌವನ
ಮದವೇರಿದ ಸಲಗದ ಬೇಗೆ ಯೌವನ
ಉಪದೇಶವನು ಕೊಡಲಿಂದು ಜನರಿಹರೇ
ಮೊಗ್ಗೊಂದು ಬಿರಿದರಳಿತು ಹೀಗೆ ಯೌವನ
ಮದನಳಿಗೆ ಕಾದ ಮದನನಂತೆ ನನ್ನೊಲವು
ಉಕ್ಕಿರುವ ಜಲಧಾರೆಯಂತೆ ಸಾಗೆ ಯೌವನ
ಸೊಕ್ಕು ಯಾಕೆ ಜಲಪಾತದಂತೆ ದುಮುಕಿದೆ
ಮುತ್ತು ಮತ್ತೇರಿ ಹೊರಳಿ ಹೋಗೆ ಯೌವನ
ಉನ್ಮಾದ ತೀರಕ್ಕೆ ಒಲವು ಅಪ್ಪಳಿಸಿತೇ ಈಶಾ
ಬಾಳೆಗೊನೆ ಗಿಡವು ನಾಚುತ ಬಾಗೆ ಯೌವನ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
