ಎಲೆಕ್ಶನ್ ಜ್ವರ - 2 ವರ್ಷಗಳ ಹಿ೦ದೆ ನಡೆದ ಎಲೆಕ್ಶನ್ ಟೈಮಲ್ಲಿ ಬರೆದ ಒ೦ದು ಕವನ :)

ಎಲೆಕ್ಶನ್ ಜ್ವರ - 2 ವರ್ಷಗಳ ಹಿ೦ದೆ ನಡೆದ ಎಲೆಕ್ಶನ್ ಟೈಮಲ್ಲಿ ಬರೆದ ಒ೦ದು ಕವನ :)

ಕವನ

ಬ೦ದಿತು ನೋಡಿ ಮತ್ತೊ೦ದು ಎಲೆಕ್ಶನ್
ನಾವು ಮಾಡ್ಬೇಕು ನಮ್ಮ ಪ್ರತಿನಿಧಿಗಳ ಸೆಲೆಕ್ಶನ್

ಎಲ್ಲೋ ಕೇಳಿದ್ದೆ ರಾ.ಜ.ಕೀ.ಯ ಅ೦ದ್ರೆ ರಾವಣ,ಜರಾಸ೦ಧ,ಕೀಚಕ,ಯಮ....
ಅದಕ್ಕೆ ಇರ್ಬೇಕು ರಾಜಕಾರಣಿಗಳು ಮಾಡೋದು ಲಕ್ಷ ಲಕ್ಷಗಳ ಹೋಮ...

ನಾವು ಕೊಡ್ಬೇಕಾದ್ರೆ ನಮ್ಮ ವೋಟು...
ಕೊಡ್ತಾರ೦ತೆ ಕ೦ತೆ ಕ೦ತೆ ನೋಟು..
ಜೊತೆಗೆ ಕೊಡ್ತಾರ೦ತೆ ಬಿಟ್ಟಿ ಹೆ೦ಡ, ಟಿ.ವಿ, ಕಡಿಮೆ ರೇಟಿನ ಅಕ್ಕಿ,
ಆದ್ರು ನೋಡಿ ನಾವ್ ವೋಟ್ ಮಾಡ್ಬೇಕು ಸರಿಯಾದವರನ್ನ ಹೆಕ್ಕಿ ಹೆಕ್ಕಿ..

ನಾವೆಲ್ಲರೂ ಮಾಡೋಣ ಸರಿಯಾದ ನಿರ್ಧಾರ
ಇಲ್ದಿದ್ರೆ ಈ ತೊ೦ದರೆಗಳು ನಮಗೆ ನಿರ೦ತರ..