ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !

ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !

ಬರಹ

ನಮ್ಮ 'ಸಂಪದ ಸೈಟ್' ನ ಎಲ್ಲಾ ಸದಸ್ಯರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು.

೧೯-೧೦-೨೦೦೬, ಗುರುವಾರ, ಅಭ್ಯಂಜನ

೨೦-೧೦-೨೦೦೬- ಶುಕ್ರವಾರ, ನರಕಚತುರ್ದಶಿ. ಶ್ರೀಕೃಷ್ಣ ಪರಮಾತ್ಮನು ನರಕಾಸುರನನ್ನು ವಧಿಸಿದ
ದಿನ.ಆ ದಿನ ಅಭ್ಯಂಜನ, ಯಮ ತರ್ಪಣಗಳು ರೂಢಿಯಲ್ಲಿವೆ.
೨೧-೧೦-೨೦೦೬- ಶನಿವಾರ, ಧನಲಕ್ಷ್ಮಿ ಪೂಜೆ. ಎಲ್ಲಾ ಧನಸಂಪತ್ತಿಗಾಗಿ ಆಶ್ವಯುಜ ಕೃಷ್ಣ ಅಮಾವಾಸ್ಯೆ
ಸಾಯಂಕಾಲ ಆಚರಿಸುವ ಲಕ್ಷ್ಮಿ ಪೂಜೆ.
೨೨-೧೦-೨೦೦೬- ಭಾನುವಾರ, ಬಲೀಂದ್ರ ಪೂಜೆ.ಕಾರ್ತಿಕ ಶುಕ್ಲ ಪಾಡ್ಯಮೀ ಸಾಯಾಹ್ನ ವ್ಯಾಪಿನಿಯಿರುವ
ದಿನ ಬಲೀಂದ್ರ ಪೂಜೆ ಆಚರಣೆ. ಬಲಿ ಚಕ್ರವರ್ತಿಯನ್ನು ವಾಮನ ಅವತಾರ ತಾಳಿ ವಿಷ್ಣು
ಪಾತಾಳಕ್ಕೆ ತುಳಿದು ಅವನ ಧರ್ಮ ನಿಷ್ಠೆ ಯನ್ನು ಮೆಚ್ಚಿ ಅವನಿಗೆ ಪಾತಾಳದ ಆಧಿಪತ್ಯ
ಕೊಟ್ಟು ಇಂದ್ರ ಪದವಿಯನ್ನು ಕರುಣಿಸಿದ ದಿನ.ಈ ದಿನ ಜನರು ಬಲೀಂದ್ರ ಪೂಜೆ ಮಾಡಿ
ದೀಪದ ಸೊಡರನ್ನು ಹಚ್ಚಿ , ಲಕ್ಷ್ಮಿಯು ಸ್ಥಿರವಾಗಿ ನೆಲೆಸಲಿ ಎಂದು ಪ್ರಾರ್ಥಿಸುವ ಮತ್ತು
ಗೋ ಪೂಜೆ ಮಾಡುವ ಪದ್ಧತಿ ಇದೆ.

- ಕಾರ್ತೀಕ ಮಾಸ :
೧. ಬಲಿಪಾಡ್ಯಮೀ- ದೀಪಾವಳಿ ಹಬ್ಬ :
ತಾ: ೨೩-೧೦-೨೦೦೬, ಸೋಮವಾರ

* ಈ ಬಾರಿ ತಪ್ಪಿತಸ್ಥನೆಂದು ತೀರ್ಮಾನಕ್ಕೆ ಒಳಗಾಗಿರುವ "ಬಾಂಬಾಸುರ"ನಿಗೆ ಶಿಕ್ಷೆಮಾಡುವುದು
ನರಕಾಸುರನಿಗೆ ಮಾಡಿದಷ್ಟೆ ಮುಖ್ಯ ಅಲ್ಲವೇ?
** ಒಂಟಿಕೊಪ್ಪಲ್ ಪಂಚಾಂಗ ರೀತ್ಯ.