ಎಲ್ಲರು ಒಂದಾಗೋಣ...
ಕವನ
ಶಾಲೆಗೆ ಹೋಗೋಣ ತಂಗವ್ವಾ
ಶಾಲೆಗೆ ಹೋಗೋಣ/
ಶಾಲೆಗೆ ಹೋಗಿ ಪಾಠವ ಕಲಿತು
ಜಾಣರಾಗೋಣ ತಂಗವ್ವಾ
ಜಾಣರಾಗೋಣ//
ಹೊಲಕೆ ಹೋಗೋಣ ಅಣ್ಣಯ್ಯಾ
ಹೊಲಕೆ ಹೋಗೋಣ/
ಹೊಲಕೆ ಹೋಗಿ ಉತ್ತು ಬಿತ್ತಿ
ಕಳೆಯನು ಕೀಳೋಣ ಅಣ್ಣಯ್ಯಾ
ಕಳೆಯನು ಕೀಳೋಣ//
ಹಟ್ಟಿಗೆ ಹೋಗೋಣ ಅಕ್ಕಯ್ಯಾ
ಹಟ್ಟಿಗೆ ಹೋಗೋಣ/
ಹಟ್ಟಿಗೆ ಹೋಗಿ ಹಾಲನು ಹಿಂಡಿ
ಸೆಗಣಿ ಬಾಚೋಣ ಅಕ್ಕಯ್ಯಾ
ಸೆಗಣಿ ಬಾಚೋಣ//
ಊಟಕೆ ಹೋಗೋಣ ಅಪ್ಪಯ್ಯಾ
ಊಟಕೆ ಹೋಗೋಣ/
ದೇವರ ನೆನೆಯುತ ಊಟವ ಮಾಡುತ
ಸಂತಸ ಪಡೆಯೋಣ ಅಪ್ಪಯ್ಯಾ
ಸಂತಸ ಪಡೆಯೋಣ//
ಭೂಮಿ ತಾಯಿಯ ಮಕ್ಕಳು ನಾವು
ತಾಯಿಯ ಋಣವನು ತೀರಿಸಲಾರೆವು/
ಎಷ್ಟೋ ಜನುಮದ ಪುಣ್ಯವು ನಮ್ಮದು
ಬಾಳಲ್ಲಿ ಎಲ್ಲರು ಒಂದಾಗೋಣ//
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್
ಚಿತ್ರ್