ಎಲ್ಲಿಗೆ ಹೋಗುತ್ತಾರೆ?
ಕವನ
ಸತ್ತವರು ಎಲ್ಲಿಗೆ ಹೋಗುತ್ತಾರೆ?
ಮಸಣಕೆ ಹೆಣವಾಗುತ್ತಾರೆ
ಮಣ್ಣಲಿ ಮಣ್ಣಾಗುತ್ತಾರೆ
ಬಾನಂಗಳದಲಿ ಚುಕ್ಕಿಯಾಗುತ್ತಾರೆ
ಆಪ್ತರೆದೆಯಲಿ ಬಿಕ್ಕಾಗುತ್ತಾರೆ
ತಿಥಿಯೂಟಕೆ ನೆಪವಾಗುತ್ತಾರೆ
ಕಾಸಿರದವರ ಮನೆಯಲೂ ಕಜ್ಜಾಯವಾಗುತ್ತಾರೆ;
ಸತ್ತವರು ಎಲ್ಲಿಗೆ ಹೋಗುತ್ತಾರೆ?
ಹಿಂದಿನವರು ಎಲ್ಲಿಗೆ ಹೋದರೊ ಅಲ್ಲಿಗೆ ಹೋಗುತ್ತಾರೆ
ಬಾನ ಬಯಲಲಿ ನಿಂದು
ಬರಲಿರುವವರ ಹಾದಿ ಕಾಯುತ್ತಾರೆ!
------------------------------------------