ಏಕತೆಯ ಸಂದೇಶ ಮೊಳಗಿತು

ಏಕತೆಯ ಸಂದೇಶ ಮೊಳಗಿತು

ಕವನ

ಉದಯವಾಯಿತು ಹುರುಪು ಬಂದಿತು

ನಮ್ಮ ದೇಶದ ಸೊಗಡಿಗೆ/

ಕನಸು ಹರಿಯಿತು ನನಸು ಬಂದಿತು

ಹರುಷ ತಂದಿತು ಜನರಿಗೆ//

 

ಬಾನ ಅಗಲಕೆ ಧ್ವಜವು ಹಾರಿತು

ಮೌನ ಸರಿಯಿತು ಸುತ್ತಲೂ/

ಗಾಳಿ ಬೀಸಿತು ಜೀವ ಉಲಿಯಿತು

ಸ್ವತಂತ್ರ ಬದುಕದು ಕಂಡಿತು//

 

ಗಣರಾಜ್ಯವು ಉದಯಿಸುತ್ತಲೆ

ಮನುಜ ಮುಖವದು ಅರಳಿತು/

ನಾಡು ನಾಡಲಿ ಹಬ್ಬ ಕಂಡಿತು

ನಾಡ ಕುಸುಮವು ಹಾರಿತು//

 

ಅವರವರ ಭಾಷೆಗನುಗುಣ

ನಾಡ ನೆಲೆಯ ನೋಡಲು/

ರಾಷ್ಟ್ರವೊಂದೆ ರಾಜ್ಯ ಹಲವು

ರಾಷ್ಟ್ರದೊಂದಿಗೆ ನಡೆವರು//

 

ಧರ್ಮ ಜಾತಿ ಮತ ಲಿಂಗ

ಭೇದ ಭಾವ ತೊಲಗಿತು/

ಸಂವಿಧಾನದ ಛತ್ರಿಯಡಿಯಲಿ

ಏಕತೆಯ ಸಂದೇಶ ಮೊಳಗಿತು//

 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್