ಏತಕೆ ಈ ನಟನೆ?
ಕವನ
ನಯನವ ತೆರೆಯದೆ ಮುರಳಿಯ ನುಡಿಸುವ
ಕೃಷ್ಣನು ಮೈಯನು ಮರೆತಿಹನೆ
ಅಧರದಲಿರಿಸುತ ಊದುವ ಕೊಳಲನು
ರಾಧೆಯ ಮನದಲಿ ನೆನೆದಿಹನೆ
ನಾದವು ಹರಿಯಲು ತನ್ಮಯಗೊಂಡನೆ
ರಾಗಕೆ ಶ್ರೀಹರಿ ಸೋತಿಹನೆ
ತಾನೇ ನುಡಿಸುತ ಪರವಶಗೊಂಡನೆ
ಮಾಧವ ಏನಿದು ಈ ನಟನೆ
ಈ ಜಗದೊಡೆಯನೆ ನಿನ್ನನು ಅರಿಯಲು
ನನಗದು ಸಾಧ್ಯವೆ ಕೇಶವನೆ?
ಸೂತ್ರವು ನಿನ್ನದು ಪಾತ್ರವು ನನ್ನದು
ಪಾಲಿಸು ಕರುಣದಿ ಮುರಹರನೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
