ಏರ್ಟೆಲ್ ತಪ್ಪೋ, ಪೋಲೀಸರ ದಬ್ಬಾಳಿಕೆಯೋ?
ತನ್ನದಲ್ಲದ ತಪ್ಪಿಗೆ ನಿರ್ದೋಶಿಯೊಬ್ಬನನ್ನು ಜೈಲಿಗೆ ಎಳೆದುಕೊಂಡು ಹೋಗೋದೆಲ್ಲ ಫಿಲ್ಮುಗಳಲ್ಲಿ ನೋಡಿರುತ್ತೀರಿ. ನಿಜಸ್ಥಿತಿ ಎಷ್ಟು ಕೆಟ್ಟದಿರಬಹುದು ಎಂಬುದರ ಅರಿವು ಪರದೆಯ ಮೇಲಿನ ಕಥೆ ನೋಡಿಯೂ ಆಗುವುದು ಕಡಿಮೆ.
ಟೈಮ್ಸ್ ಆಫ್ [:http://timesofindia.indiatimes.com/Wrong_man_jailed_for_50_days/articleshow/2513737.cms|ಇಂಡಿಯಾದ ಈ ವರದಿ ಓದಿ.]
ತನ್ನದಲ್ಲದ ತಪ್ಪಿಗೆ ಬೆಂಗಳೂರಿನ ಇಂಜಿನೀಯರನ್ನು ಇದೇ ಆಗಸ್ಟಿನಲ್ಲಿ ಪೋಲೀಸರು ಪುಣೆಗೆ ಎಳೆದುಕೊಂಡು ಹೋಗಿ ಅಲ್ಲಿ ೫೦ ದಿನ ಜೈಲಿಗೆ ಹಾಕಿದ್ದಾರಂತೆ. ಆರ್ಕುಟ್ ನಲ್ಲಿ ಛತ್ರಪತಿ ಶಿವಾಜಿ ಫೋಟೋ ಕೆಡಿಸಿ ಅವಮಾನ ಮಾಡಿದರೆಂಬುದು ಅವನ ತಲೆಯ ಮೇಲೆ ಹೇರಿದ್ದ ತಪ್ಪು. ಇಷ್ಟು ದಿನ ಜೈಲು ವಾಸದ ನಂತರ ಅವನ ತಪ್ಪೇ ಇರಲಿಲ್ಲ, ಏರ್ಟೆಲ್ ನೀಡಿದ ಐ ಪಿ ವಿಳಾಸ ತಪ್ಪಾಗಿತ್ತು ಎಂಬ ವಿಷಯ ಹೊರಬಂದಿದೆಯಂತೆ.
ಮಾಹಿತಿ ನೀಡಿ ತಿಂಗಳುಗಳೇ ಆದ ಮೇಲೆ ಏರ್ಟೆಲ್ "ಅರೆ, ತಪ್ಪು ಐ ಪಿ ವಿಳಾಸ ಕೊಟ್ಟುಬಿಟ್ಟೆವು" ಎಂದು ಹೇಳುವುದಕ್ಕೆ ಇದೇನು ಮಕ್ಕಳಾಟವೆ? ಲಕ್ಷ್ಮಣ ಕೈಲಾಶ್ ಜಾಗದಲ್ಲಿ ಏರ್ಟೆಲ್ ಬಳಸುವ ಅಮಾಯಕರು ಯಾರೊಬ್ಬರೂ ಆಗಬಹುದಿತ್ತು! ಹೇಳದೆ ಕೇಳದೆ ಪೋಲೀಸರು ಹೀಗೆ ಹೊತ್ತುಕೊಂಡು ಹೋದರೆ ಪಾಪ ಅಮಾಯಕರ,ದುಡ್ಡಿಲ್ಲದವರ ಗತಿಯೇನು?
ಒಂದು ವಿಷಯವನ್ನು ಒಪ್ಪಿಕೊಳ್ಳೋಣ - ನಮ್ಮ ಭಾರತದ ಸರ್ಕಾರವಾಗಲಿ, ಅಂತರ್ಜಾಲದ ಸೌಕರ್ಯ ನೀಡುತ್ತಿರುವ ISPಗಳಾಗಲಿ (Internet Service Providers), ತಂತ್ರಜ್ಞಾನದ ಮಟ್ಟಿಗೆ ಬಹಳ ಹಿಂದೆ ಬಿದ್ದಿವೆ. ನಮ್ಮ ಭಾರತ, ನಮ್ಮ ಕರ್ನಾಟಕ - ನಾವೇ ಮೇಲು,ನಾವೇ ಐಟಿ ಗುರುಗಳು ಅನ್ನೋ ಕುರುಡು ಮಾತು, ಹೆಮ್ಮೆ, ಒಣಜಂಭಗಳಿಗೆ ಒಳಗಾಗಿ ಈಗಿರುವುದನ್ನೇ "ಗ್ಲೋಬಲ್ ಸ್ಟ್ಯಾಂಡರ್ಡ್" ಎಂದು ನಾವೇ ಕರೆದುಕೊಂಡು ಆಗಬೇಕಾದ ಪ್ರಗತಿಗೆ ಮುಳುವಾಗುತ್ತಿದ್ದೇವೆ.
ನಿಜಸ್ಥಿತಿ ಏನೆಂದರೆ, ಐ ಟಿ ಮಟ್ಟಿಗೆ, ಐ ಟಿ ಕಾಯ್ದೆಗಳ ಮಟ್ಟಿಗೆ ಭಾರತದಲ್ಲಿ ಪಹಾಡದೆತ್ತರ ಕೆಲಸ ಆಗೋದಿದೆ. ಬಹಳಷ್ಟು ದೂರ ಹೋಗೋದಿದೆ. ಇನ್ನೂ ಕೆಲವೇ ಹೆಜ್ಜೆಗಳನ್ನು ಇಟ್ಟಿರುವುದು ಎಂದು ಕೂಡ ಹೇಳಬಹುದು.
ಕಾಯ್ದೆಗಳ ಮಟ್ಟಿಗಾದರೂ ಕೆಲಸ ಆಗದಿದ್ದರೆ ಇಂತಹ ಘಟನೆಗಳು ಇನ್ನಷ್ಟು ನಡೆಯುತ್ತಿರುತ್ತವೆ. ಸೈಬರ್ ಕಾಯ್ದೆ ಅಮಾಯಕರನ್ನು ಶೋಷಣೆಯಿಂದ ಪಾರು ಮಾಡಬೇಕೆ ಹೊರತು ಅಮಾಯಕರನ್ನು ಇಂತಹ ಸನ್ನಿವೇಶಗಳಿಗೆ ತಂದಿಡುವಂತದ್ದಾಗಬಾರದು.
(ಈ ಬಗ್ಗೆ ಮತ್ತೊಮ್ಮೆ ಸವಿವರವಾಗಿ ಬರೆಯುವೆ)
ಮತ್ತಷ್ಟು ಓದು:
- ನನ್ನ ಇಂಗ್ಲೀಷ್ ಬ್ಲಾಗಿನಲ್ಲಿ ಇದರ ಬಗ್ಗೆ ಬರೆದದ್ದು.
- Times of India Coverage - "We made a mistake, so what?" says Police.
- A blunder unpardonable
- Wrong man jailed for 50 days.
ಫೋಟೋ: ಟೈಮ್ಸ್ ಆಫ್ ಇಂಡಿಯ.