ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ
ಸಂಪದಿಗರೇ ಏರ್ಟೆಲ್ ನಂತಹ ಪ್ರತಿಷ್ಟಿತ ಕಂಪೆನಿಗಳು ಹಣ ಗಳಿಸಲು, ತನ್ನ ಗ್ರಾಹಕರನ್ನು ವಂಚಿಸುವ ಸಲುವಾಗಿ ಕೆಲವು ತಂತ್ರಗಳನ್ನು ಬಳಸಿದೆ. ಇದರಿಂದ ಗ್ರಾಹಕರು ಪೆದ್ದು ಪೆದ್ದಾಗಿ ತಮ್ಮ ಕರೆನ್ಸಿಯನ್ನು ಕಳೆದುಕೊಂಡು ಹಲ್ಲುಗಿಂಜುವ ಪರಿಸ್ಥಿತಿ ಬಂದಿದೆ .
ನಿಮ್ಮ ಮೊಬೈಲ್ ಗೆ ಯಾರದೋ ಕರೆ ಬರುತ್ತದೆ. ಅದರಲ್ಲಿ 543216ರಿಂದ ಆರಂಭವಾಗುವ 13 ಅಂಕೆಗಳ ನಂಬರ್ ಕಾಣಿಸುತ್ತದೆ. ನೀವು ರಿಸೀವ್ ಮಾಡುವಾಗ ಕಟ್ ಆಗುತ್ತದೆ. ನೀವು ಪರೀಕ್ಷಿಸಲು ಅದೇ ನಂಬರಿಗೆ ಕರೆಮಾಡಿದಾಗ "ನೀವು ಕರೆಮಾಡಿದ ಫ್ರೆಂಡ್ ಬ್ಯುಸಿಯಾಗಿದ್ದಾರೆ. ಮತ್ತೊಬ್ಬ ಸ್ನೇಹಿತರನ್ನು ಒದಗಿಸುತ್ತೇವೆ " ಎಂಬ ಮಾತು ಕೇಳಿ ಬರುತ್ತದೆ. ನೀವು ಕಾಯುತ್ತಲೇ ಇದ್ದರೆ ಕೆಲವು ನಿಮಿಷಗಳಲ್ಲಿ ಸಾಕಷ್ಟು ಬಿಡುವಿರುವ ರಸಿಕ ಸ್ನೇಹಿತರು ನಿಮ್ಮೊಂದಿಗೆ ಮಾತಿಗೆ ಸಿಗುತ್ತಾರೆ. ಹೆಣ್ಣಿಗೆ ಗಂಡು ಸ್ನೇಹಿತರನ್ನು, ಗಂಡಿಗೆ ಹೆಣ್ಣು ಸ್ನೇಹಿತರನ್ನು ದಿನದ ಯಾವುದೇ ಹೊತ್ತಿನಲ್ಲಿ ಮಾತಿಗೆ ಅವಕಾಶ ಒದಗಿಸುವ ಈ ಯೋಜನೆಯಲ್ಲಿ ಪ್ರತಿ ನಿಮಿಷಕ್ಕೆ ಎರಡು ರುಪಾಯಿಯಂತೆ ಕರೆನ್ಸಿಗೆ ಕತ್ತರಿ ಬೀಳುತ್ತಿರುತ್ತದೆ. ಹಾಗೇ ನೀವು ಮಾತಾಡುತ್ತಿರುವಾಗ ನಿಮ್ಮ ಫ್ರೆಂಡ್ಸ್ ಚಾಟ್ ಅಕೌಂಟ್ ಓಪನ್ ಆಗುತ್ತದೆ. ಇದಕ್ಕೆ ತಿಂಗಳಿಗೆ ಒಂದಷ್ಟು ದುಡ್ಡು ಖತಂ ಆಗುತ್ತದೆ. ಆಮೇಲೆ ನೀವು ಮೇಲಿನ ನಂಬರಿಗೆ ಫೋನ್ ಮಾಡಿದಾಗ ಬಗೆ ಬಗೆಯ ಮೇಲ್, ಫೀಮೇಲ್ ವಾಯ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಅವರಿಗೆ ಫೋನಾಯಿಸಿದರೆ ಅವರಿಲ್ಲ ಮತ್ತೊಬ್ಬರು, ಅವರಲ್ಲದಿದ್ದರೆ ಇನ್ನೊಬ್ಬರು ಹೀಗೆ ತಡೆ ರಹಿತ ಸೇವೆಯನ್ನು ಫೋನಿನಲ್ಲಿ ಇಡೀ ದಿನದ ದುಡಿಮೆಯನ್ನು ಕಳೆದುಕೊಳ್ಳಲು ಸಂಸ್ಥೆ ವ್ಯವಸ್ಥೆ ಮಾಡಿದೆ. ಸ್ವಲ್ಪ ಎಡವಟ್ಟಾಗಿದ್ದರಂತು ಕೇಳಬೇಕೆ ?
ಜೊತೆಗೆ ಸಭ್ಯ ಮನೆತನದವರಿಗೂ ಈ ಜಾಲ ತುಂಬಾ ಕಿರಿಕಿರಿ ಮಾಡುತ್ತಿದೆ. ನಡುರಾತ್ರಿಯಲ್ಲೂ ಬರುವ ಯಾರದೋ ಕರೆಗಳು, ಅವರಾಡುವ ಅಶ್ಲೀಲ, ಸಂಭಾಷಣೆಗಳನ್ನು ಅನಿವಾರ್ಯದಂತೆ ಕೇಳಬೇಕಾಗಿ ಬಂದಿದೆ. ಮನೆಯಲ್ಲಿ ಕೂತು ವಿರಹ ವೇದನೆಯಲ್ಲಿ ಚಡಪಡಿಸುವವರು, ಅಸಹಾಯಕ ಅತೃಪ್ತರು, ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಮಂದಿಯನ್ನು ಬಳಸಿಕೊಂಡು ಕಂಪೆನಿ ಹಣ ಬಾಚಿಕೊಳ್ಳುತ್ತಿದೆ .
ಇದೇ ಕಂಪೆನಿಯು ಗ್ರಾಹಕರ ಕರೆನ್ಸಿಯನ್ನು ಇದ್ದಕಿದ್ದಂತೆ ಮನಬಂದಂತೆ ಕತ್ತರಿಸಿ ಬಿಡುವುದು, ಮತ್ತು ಕಸ್ಟಮರ್ ಕೇರ್ ಗೆ ಫೋನ್ ಮಾಡಿ ವಿಚಾರಿಸಿ, ವಾದಿಸಿ, ರಗಳೆ ಮಾಡಿದಾಗ ಮತ್ತೆ ಕರೆನ್ಸಿ ಹಾಕಿದ್ದು ನನ್ನ ವಿಷಯದಲ್ಲೇ ಅನುಭವ ಆಗಿದೆ.
ಇಂತಹ ವಂಚನೆಯ, ಅಸಭ್ಯತೆಯ, ಅಕ್ರಮಗಳನ್ನು ನಾವು ಅನಿವಾರ್ಯವಾಗಿ ಸಹಿಸಬೇಕೇಕೆ ?
ಇಂತಹ ವಂಚನೆಯ, ಅಸಭ್ಯತೆಯ, ಅಕ್ರಮಗಳಲ್ಲಿ ಇನ್ನು ಏನೇನೋ ಇವೆ ? ಅದೇನು ?
ಇಂತಹ ವಂಚನೆಯ, ಅಸಭ್ಯತೆಯ, ಅಕ್ರಮಗಳಿಗೆ ಕೊನೆ ಇಲ್ಲವೇ ?
ಜಾಗೃತಿಯಲ್ಲದೆ ಇನ್ನೇನು ಪರಿಹಾರವಿದೆ ?
- ಸದಾನಂದ
Comments
ಉ: ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ
In reply to ಉ: ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ by kavinagaraj
ಉ: ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ
ಉ: ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ
In reply to ಉ: ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ by makara
ಉ: ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ