ಏಲಿಯನ್ಸ್ ಗಳ ಜಗತ್ತಿನಲ್ಲಿ....ನಾವು ನೀವು
ಏಲಿಯನ್ಸ ವಾಹನ ಅಂತರಿಕ್ಷದಲ್ಲಿ ಗಾಳಿಯ ವೇಗದಲ್ಲಿ ತಮ್ಮ ಲೋಕಕ್ಕೆ ಹೊಗುತಿತ್ತು.ತಮ್ಮ ಇನ್ನೊಂದು ಏಲಿಯನ್ ಕಾಣುತ್ತಿಲ್ಲವೆಂದು ಅರಿತ ಸೆಕ್ಯುರಿಟಿ ಏಲಿಯನ್ ಗಾಬರಿಗೊಂಡಿತು.(ಏಲಿಯನ್ ಗಳು ವರ್ತನೆ ನಡೆ ನುಡಿ ಸಂವಾದವನ್ನು ಮನುಷ್ಯರಂತೆ ಚಿತ್ರಿಸುತಿದ್ದೇನೆ)ತಮ್ಮ ಜೊತೆ ಬಂದಿದ್ದ QX ಹೆಸರಿನ ಏಲಿಯನ್ ಕಣ್ಮರೆಯಾಗಿರುವುದನ್ನು ವ್ಯವಸ್ಥಾಪಕ ಏಲಿಯನ್ ಗೆ ಭಯದಿಂದಲೇ ವರದಿ ನೀಡಿತು.ಇದನ್ನು ಕೇಳಿದ ವ್ಯವಸ್ಥಾಪಕ ಸಿಟ್ಟಾಯಿತು.ಸೆಕ್ಯರಿಟಿಗೆ ತಲೆ ಮೇಲೆ ಕುಕ್ಕಿತು.ನಿನಗೆ ಶಿಕ್ಷೆ ನೀಡುತ್ತಿದ್ದೇನೆ ಎಂದು ಆರ್ಭಟಿಸಿ ಕೆಮಿಕೆಲ್ ಪೈಪನ್ನು ಸೆಕ್ಯಿರಿಟಿ ಮೇಲಿಟ್ಟಿತು.ಸೆಕ್ಯರಿಟಿ ತಕ್ಷಣ ಮರಗಟ್ಟಿ ಹೋಯಿತು.ಆನಂತರ ಪುಡಿಯಾಗಿ ಉದುರಿತು.ಕೆಳಗೆ ತನ್ನವರನ್ನು ಕಳೆದುಕೊಂಡಿದ್ದ ಏಲಿಯನ್ ಆಕಾಶ ನೋಡುತ್ತ ಕೂಗತೊಡಗಿತು.ತನ್ನ ವಾಕಿಯನ್ನು ತೆಗೆದು help help ಎಂದು ಸಂದೇಶ ರವಾನಿಸಿತು.ಆದರೆ ಪ್ರತಿಕ್ರಿಯೆ ಬರಲಿಲ್ಲ.(ಪ್ರತಿರ್ ಏಲಿಯನ್ ಬಳಿ ವಾಕಿ ಎಂಬ ಅಂತರಿಕ್ಷ ಸಂಹವಹನ ಉಪಕರಣ ಇತ್ತು)ಏಲಿಯನ್ ಕೈಯಿಂದ ತಪ್ಪಿಸಿಕೊಂಡು ಒಡಿದ ಹುಡುಗರು ಅಲ್ಲಿಬಹು ದೂರ ಒಡಿಹೋಗಿ ಒಂದು ಬಂಡೆಯ ಮೇಲೆ ಕುಳಿತರು,ಅಲ್ಲಿಗೆ ಏಲಿಯನ್ ಬರುವ ಸುಳಿವು ಕಾಣದಿದ್ದರಿಂದ ಬಚಾವೆನಿಸಿ ಮಲಗಿಕೊಂಡರು.
ಒಂಟಿ ಏಲಿಯನ್ ದುಖಃ ತಡೆಯಲಾಗದೆ ಬೇಸರಮಾಡಿಕೊಂಡು ರಾತ್ರಿಯೆಲ್ಲಾ ಏನು ಮಾಡಬೇಕೆಂದು ತೋಚದೆ ನಿಂತಿಯೇ ಇತ್ತು.
ಅಂತರಿಕ್ಷ ಕಕ್ಷೆ ಪ್ರವೇಶಿಸಿದ್ದ ವಾಹನ ಈಗ ಅವರ ಗ್ರಹದ ಸನಿಹಕ್ಕೆ ಹೋಗಿತ್ತು.ಬರ ಬರತ್ತ ವೇಗ ತಗ್ಗಿಸಿಕೊಂಡು ಅಂತರ್ ಗ್ರಹ ನಿಲ್ದಾಣದಲ್ಲಿ ಏಲಿಯನ್ ತುಂಬಿದ್ದ ವಾಹನ ಅವರ ಗ್ರಹದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಯಿತು..ಏಲಿಯನ್ ವಾಹನವನ್ನು ನಿರೀಕ್ಷಿಸುತಿದ್ದ ಸಾವಿರಾರು ಏಲಿಯನ್ ಗಳು ಅಂತರಿಕ್ಷ ವಾಹನದಿಂದ ಕೆಳಗಿಳಿದ ಯಾತ್ರಿ ಏಲಿಯನ್ ಗಳನ್ನು ಬರಮಾಡಿಕೊಂಡವು.ಏಲಿಯನ್ ಎಲ್ಲವೂ ಈಗ ಮಲಗಿದ್ದ ಶರತ್ ಲೋಹಿತರನ್ನು ಪ್ರಯೋಗಶಾಲೆಗೆ ಸ್ಥಳಾಂತರಿಸಿ ಅದರ ಬಾಗಿಲು ಬಂದ್ ಮಾಡಿಕೊಂಡು ಕಾವಲಿಗೆ ಹೊರಗಿನಿಂದ ಏಲಿಯನ್ ಒಂದನ್ನು ಬಿಟ್ಟು ಹೋದವು.ಸುಮಾರು ಹೊತ್ತಿನ ನಂತರ ಶರತ್ ನಿಧಾನಕ್ಕೆ ಎಚ್ಚರಗೊಂಡ.ಆತ ತನಗೆ ಕಾಣುತ್ತಿರುವುದೇನಿದು ಎಂದು ಕಸಿವಿಸಿಗೊಂಡ.ಪಕ್ಕದಲ್ಲಿ ಲೋಹಿತ್ ಮಲಗಿದ್ಥಾನೆ.ಅತನ ತಲೆ ಬೋಳಿಸಿಲಾಗಿದೆ.ಇದೇನಿದು ಆಶ್ಚರ್ಯ ಏನು ಬದಲಾವಣೆ.ಉಳಿದಿಬ್ಬರು ಎಲ್ಲಿ ನಾವೀಗ ಎಲ್ಲಿದ್ದೇವೆ ಎಂದು ಭಯಗೊಂಡ.ಲೋಹಿತನನ್ನು ಎಚ್ಚರಿಸಿದ.ಪುಣ್ಯಕ್ಕೆ ಆತನು ಎದ್ದ.ಇಬ್ಬರಿಗು ಏನು ನೆಡೆಯುತ್ತಿದೆ ಎಂಬುದೇ ಅರ್ಥವಾಗಲಿಲ್ಲ.ಅವರೀಗ ಇರುವುದು ಎಲ್ಲಿ?
ಭೂಮಿಯಿಂದ ಲಕ್ಷಾಂತರ ಕಿ.ಮೀ ದೂರದಲ್ಲಿರುವ ಗುರು ಗ್ರಹದಲ್ಲಿ.ಇವರು ಎಚ್ಚರಗೊಂಡದ್ದ ತಿಳಿದು ತಜ್ಞ ಏಲಿಯನ್ಸ ಆಗಮನವಾಯಿತು.ಇವರಿಬ್ಬರನ್ನು ಎರಡು ಏಲಿಯನ್ ಗಳು ವೃತ್ತಾಕಾರದ ವಾಹನದಲ್ಲಿ ಕೂರಿಸಿಕೊಂಡು ಹೊರಟವು.ಎತ್ತರವಾದ ಗುಡ್ಡಗಳ ನಡುವೆ ಸೀಳು ರಸ್ತೆಯಂತಹ ದಾರಿಯಲ್ಲಿ ಹಾದು ಹೊರಟವು.ಗುರುವಿನ ಅಂಗಳ ಬಟಾ ಬಯಲು ಭೂಮಿ.ಮರಳುಗಾಡು.ಬಿಸಿಗಾಳಿಯ ವಾತಾವರಣ.
ಗುರುಗ್ರಹದಲ್ಲಿ ಬಂದು ತಲುಪಿದ್ದ ಲೋಹಿತ್ ಶರತ್ ಆಕಾಶವೇ ಕಳಚಿ ಬಿದ್ದಂತೆ ದಿಗ್ಫ್ರಮೆಗೊಂಡು ಮಾತೇ ಹೊರಡದಂತಾಗಿದ್ದರು.ಗುರುವಿನಲ್ಲಿ ಅವರನ್ನು ಒಂದು ದೊಡ್ಡ ಕಟ್ಟಡಕ್ಕೆ ಒಯ್ದ ಏಲಿಯನ್ಸ್ ಇವರಿಗೆ ಬಲವಂತವಾಗಿ ಔಷದವನ್ನು ಕುಡಿಸಿದರು.ಇವರು ಪುನಃ ಪ್ರಜ್ಞಾಹೀನರಾದರು.
ಅತ್ತ ಭೂಮಿಯಲ್ಲಿ ರಾತ್ರಿ ಕಳೆದು ಬೆಳಕಾಯಿತು.ಬೆಳಗ್ಗೆ ಎದ್ದ ವಿನೀತ್ ಹಾಗು ರೋಹಿತ್ ರಾತ್ರಿ ಘಟನೆಯಿಂದ ಚಿಂತಾಕ್ರಾಂತರಾಗಿ ಮುಂದೇನು ಮಾಡುವುದು ಎಂದು ತೋಚದಂತಾಗಿದ್ದರು.
ವಿನೀತ್ ನಡಿಯೋ ಟೆಂಟ್ ಹತ್ರ ಹೋಗೋಣ ಅಲ್ಲಿ ನಮ್ಮ ಲಗೇಜ್ ತಗೊಂಡು ಫೋನ್ ಮಾಡಿ ವಿಷಯ ತಿಳಿಸೊಣ.
ರೋಹಿತ್ ಅಲ್ಲಿ ಏಲಿಯನ್ ಇದ್ರೆ
ವಿನೀತ್ ಇರಲ್ಲ ಅದು ರಾತ್ರೀನೆ ಹೋಗಿರುತ್ತೆ ನಡಿಯೋ ರೋಹಿತ್ ಸರಿ ಬಾ ಇಬ್ಬರು ತಮ್ಮ ಗೆಳೆಯರ ಕಳೆದುಕೊಂಡದ್ದಕ್ಕಾಗಿ ದುಃಖತಪ್ತವಾಗಿ ಟೆಂಟ್ ನತ್ತ ಬಂದರು.
ವಿನೀತ್ ಏಯ್ ಅಲ್ನೋಡೊ ಒಮ್ಮೇಲೆ ಗಾಬರಿಯಾದ ಆ ಏಲಿಯನ್ ಇನ್ನು ಅಲ್ಲೇ ಸಜೀವಶವದಂತೆ ನಿಂತೇಇತ್ತು
ರೋಹಿತ್ ತಡಿಯೋ ಒಂದ್ನಿಮಿಷ ಆ ಏಲಿಯನ್ ಒಂದೇ ಇದೆ ಅದರ ಜೊತೆಇದ್ದ ಆ ದೊಡ್ಡ ವೆಹಿಕಲ್ ಕಾಣಿಸ್ತಿಲ್ಲಾ ಅದೂ ಅಲ್ದೇ ಅದುನಮನ್ ನೋಡುದ್ರು ಸಮ್ಮನೆ ಇದೆ.ಇಬ್ಬರು ಒಂದತ್ತು ನಿಮಿಷ ಅದ್ನೇ ಗಮನಿಸಿ ಸೂಕ್ಷ್ಮವಾಗಿ ಆನಂತರ ಬಾ ಅದು ನಮನ್ ಏನು ಮಾಡಲ್ಲ ನಾವ್ ನಮ್ ಲಗೇಜ್ ತಗೊಂಡು ಯಾರಗಾದ್ರು ವಿಷ್ಯ ತಿಳ್ಸೋಣ ಅಮೇಲೆ ಅವ್ರಿದ್ನ ವಿಚಾರಿಸ್ಕೊತಾರೆ.
ಇಬ್ಬರು ಮರೆಯಿಂದ ನಿಧಾನಕ್ಕೆ ಟೆಂಟ್ ಒಳಗೆ ಹೋಗಿ ಅಲ್ಲಿ ತಮ್ಮ ಮೊಬೈಲ್ ತ ಹಣ ಇದ್ದ ಬ್ಯಾಗ್ ತಗೊಂಡು ಹೊರಗೆ ಒಡಿಬಂದರು.ನಡಿ ನಾವ್ ರೋಡ್ ಗೆ ಹೋಗಿ ಯಾವ್ದಾದ್ರೂ ವೆಹಿಕಲ್ ಹಿಡಿದು ವಿಷಯ ತಿಳಿಸಿ ಆಮೇಲೆ ಬರೋಣ ಅಂದು ಮೈನ್ ರೋಡ್ ನತ್ತ ಬಂದರು.ಗೆಳೆಯರ ನೆನಪು ಅವರಿಗೆ ಭಾರವಾಗಿ ಕಾಡುತಿತ್ತು.ರೋಡ್ ನಲ್ಲಿ ಬರುತಿದ್ದ ಜೀಪ್ ಒಂದಕ್ಕೆ ಕೈ ಅಡ್ಡ ಹಾಕಿ ಡ್ರಾಪ್ ತಗೊಂಡು ಪಟ್ಟಣಕ್ಕೆ ಬಂದರು.ಪಟ್ಟಣದಿಂದ ತಮ್ಮ ಪೋಷಕರಿಗೆ ಕರೆ ಮಾಡಿ ಶೀಘ್ರ ಬರುವಂತೆ ತಿಳಿಸಿದರು.
ಆಷ್ಟಕ್ಕೂ ಏಲಿಯನ್ಸ್ ಇವರನ್ನು ಅಪಹರಿಸಿಕೊಂಡು ತಂದ ಉದ್ದೇಶ ಏನೆಂದರೆ
ಏಲಿಯನ್ ಗಳು ಗಾತ್ರದಲ್ಲಿ ಮನುಷ್ಯನಿಗಿಂತ ಕುಬ್ಜ, ರೂಪದಲ್ಲಿ ಕುರೂಪ.ಈ ಸಲುವಾಗಿ ಅವು ಬಹಳ ಸಂಶೋಧನೆ ಮಾಡಿ ಒಂದು ತೀರ್ಮಾನಕ್ಕೆ ಬಂದಿದ್ದವು.ತಂತ್ರಜ್ಞಾನದಲ್ಲಿ ಬಹಳ ಮುಂದಿದ್ದ ಅವು ಈ ವಿಚಾರದಲ್ಲಿ ಏನು ಮಾಡಲಾಗಿರಲಿಲ್ಲ.ಅವುಗಳ ಉದ್ದೇಶ ಮನುಷ್ಯನ ಜೀನ್ಸ್ ತೆಗೆದು ಅದನ್ನು ಏಲಿಯನ್ಸ್ ಗಳಿಗೆ ಅಳವಡಿಸುವುದು.ಮನುಷ್ಯರ೦ತೆ ಏಲಿಯನ್ಸ್ ಸ೦ತತಿಯನ್ನು ಅಭಿವೃದ್ಧಿಪಡಿಸುವುದು ಅವುಗಳ ಉದ್ದೇಶ...ಒ೦ದು ವೇಳೇ ಇ ಕಾರ್ಯದಲ್ಲಿ ಏಲಿಯನ್ಸ್ ಯಶಸ್ವಿಯಾಗಿಬಿಟ್ಟರೆ ಅವುಗಳಿಗು ಮನುಷ್ಯನ ನಡುವೆ ಸಾಮ್ಯ್ತೆ ಇಲ್ಲದ೦ತಾಗುವುದು,.ಆಗ ಅವುಗಳು ಮನುಷ್ಯರೊಡನೆ ಭೂಮಿಯಲ್ಲಿ ಗೂಡಚರ್ಯೆ ಮಾಡಿ ಭೂಮಿಯಲ್ಲಿ ವಾಸಿಸಿ ಮನುಷ್ಯನ ಕೆಲಸ ಕಾರ್ಯಗಳನ್ನು ತಿಳಿಯುತ್ತ ನೋಡುತ್ತ ಅವನ ತ೦ತ್ರಗಳಿಗೆ ಪ್ರತಿರೋಧ ತಯಾರಿಸಿ ಆನ೦ತರ ಮನುಷ್ಯನನ್ನು ತಮ್ಮ ಅಧೀನರನ್ನಾಗಿ ಮಾಡಿಕೊಳ್ಳುವ ಮಹತ್ಸಾಧನೆಗೆ ಪಣ ತೊಟ್ಟು ನಿ೦ತಿವೆ.
ತಮ್ಮ ಆಪರೇಶನ್ ಜೀನ್ಸ್ ಸ್ಥಳಕ್ಕೆ ಪರಿಣಿತಿ ಏಲಿಯನ್ ಆಗಮನವಾಗಿತ್ತು.ಸರಿಯಾದ ಸಮಯಕ್ಕೆ ಶರತ್ ಹಾಗು ಲೋಹಿತ್ ಇಬ್ಬರನ್ನು ಅಲ್ಲಿಗೆ ಒಯ್ದು ಬಿಡಲಾಯಿತು..ಏಲಿಯನ್ ಗಳು ತಮ್ಮ ಆಪರೇಶನ್ ಶುರುವಿಟ್ಟುಕೊ೦ಡವು..
ಭೂಮಿಯಲ್ಲಿ ವಿಷಯ ತಿಳಿದ ಪೋಶಕರು ತಮ್ಮ ಮಕ್ಕಳಿದ್ದ ಸ್ಥಳಕ್ಕೆ ಪೋಲಿಸರು ಅರಣ್ಯಾಧಿಕಾರಿಗಳೊ೦ದಿಗೆ ಬ೦ದರು...ಮಕ್ಕಳು ನೆಡೆದ ವಿಷಯವನ್ನು ಹೇಳಿದಾಗ ನ೦ಬಲು ಯಾರು ತಯಾರಿರಲಿಲ್ಲ..ಪೋಲಿಸರು ಸ್ಥಳ ತೋರಿಸಿ ನೆಡೆಯಿರಿ ಎ೦ದು ಹೊರಟರು.ಲೋಹಿತ್ ಹಾಗು ಶರತ್ ಅಮ್ಮ೦ದಿರು ರೋಧಿಸುತಿದ್ದರು..ಅವರನ್ನು ಸಮಾಧಾನ ಮಾಡಲಾಗುತ್ತಿರಲಿಲ್ಲ.ವಿನೀತ್ ಹಾಗು ರೋಹಿತ್ ಪೋಷಕರು ಅವರನ್ನು ಚೆನ್ನಾಗಿ ಬಯ್ದರು.ಅವರಪ್ಪ ನಾಲ್ಕೇಟು ಬಿಗಿದರು ಕೂಡ....ಅರಣ್ಯಾಧಿಕಾರಿಗಳ ಮನವೊಲಿಸಿ ಮಕ್ಕಳು ಮಾಡಿದ ತಿಳಿಯದ ತಪ್ಪಿಗೆ ಕೋರ್ಟು ಕಚೇರಿ ಬೇಡ ಎ೦ದು ವಿನ೦ತಿಸಿಕೊಳ್ಳುತಿದ್ದರು.ಆದರೆ ಅವರು ನೆಡೆಯಿರಿ ನೋಡೋಣ ಎ೦ದಷ್ಟೇ ಹೆಳಿ ನೆಡೆದರು.ಎಲ್ಲರು ಹುಡುಗರು ತೋರಿಸಿದ ಜಾಗಕ್ಕೆ ಬ೦ದರು..ಅಲ್ಲಿ ಆ ಒ೦ಟಿ ಏಲಿಯನ್ ತನ್ನವರ ಆಗಮನದ ನಿರೀಕ್ಷಯಲ್ಲಿ ನ್ನು ನಿ೦ತಿಯೇ ಇತ್ತು..
ಸ್ಥಳಕ್ಕೆ ಧಾವಿಸಿದಾಗ ಅಲ್ಲಿದ್ದವರಿಗೆ ತಮ್ಮ ಕಣ್ಣೆದುರು ಕಾಣುತ್ತಿರುವ ವಿಚಿತ್ರ ಪ್ರಾಣಿಯನ್ನು ನೋಡಿ ಬೆಚ್ಚಿ ಬಿದ್ದರು..ಆದರು ಸಾವರಿಸಿಕೊ೦ಡ ಪೋಲಿಸರು ಅದನ್ನು ಹತ್ತಿರಹೋಗಿ ಬ೦ಧಿಸಿ ಅದರಿ೦ದ ಮಾಹಿತಿ ಕಲೆಹಾಕಲು ಮು೦ದಾದರು..
ಏಲಿಯನ್ ಬಿಚ್ಚಿಟ್ಟ ಸತ್ಯ ಏನು.....
ಭಾಗ 4ರಲ್ಲಿ