ಐಕ್ಲೌಡ್:ಆರಂಭದಲ್ಲಿ ಉಚಿತ
ಐಕ್ಲೌಡ್:ಆರಂಭದಲ್ಲಿ ಉಚಿತ
ಆಪಲ್ ಕೂಡಾ ಕ್ಲೌಡ್ ಕಂಪ್ಯೂಟಿಂಗ್ ವ್ಯವಹಾರಕ್ಕಿಳಿಯಲಿದೆ.ಐಕ್ಲೌಡ್ ಎನ್ನುವ ಹೆಸರಿನಲ್ಲಿ ಸೇವೆ ಲಭ್ಯವಾಗಲಿದೆ.ಮೊದಲಿಗಿದು ಉಚಿತವಾಗಿ ಲಭ್ಯವಾದರೂ,ಜನಪ್ರಿಯವಾದ ನಂತರ ಪಾವತಿ ಸೇವೆಯಾಗಲಿದೆ.ಐಫೋನ್ ಬಳಕೆದಾರರು ತಮ್ಮ ಸಂಗೀತ ಕಡತಗಳನ್ನು ಆನ್‌ಲೈನ್ ಬಳಕೆಗೆ ಐಕ್ಲೌಡ್ ಸ್ಮರಣಕೋಶದಲ್ಲಿ ಸಂಗ್ರಹಿಸಿಡಬಹುದು.ಹೀಗೆ ಮಾಡಿದರೆ,ಸ್ಮಾರ್ಟ್‌ಫೋನಿನ ಸ್ಮರಣಸಾಮರ್ಥ್ಯದ ಬಳಕೆ ಕಡಿಮೆಯಾಗುತ್ತದೆ.ಜತೆಗೇ ಆಪಲ್ ಸೋನಿ ಮ್ಯುಸಿಕ್ ಕಂಪೆನಿ,ವಾರ್ನರ್ ಗ್ರೂಪ್,ಇ ಎಂ ಐ ಮ್ಯೂಸಿಕ್ ಗ್ರೂಪ್ ಮತ್ತು ಯುನಿವರ್ಸಲ್ ಮ್ಯೂಸಿಕ್ ಗ್ರೂಪ್‌ಗಳ ಜತೆ ಒಪ್ಪಂದಕ್ಕೆ ಬಂದು,ಅವುಗಳ ಸಂಗೀತ ಆಲ್ಬಮುಗಳನ್ನು ಬಳಕೆದಾರರಿಗೆ ಒದಗಿಸಿದಾಗ ಸಂಗೀತ ಆಲ್ಬಮುಗಳ ಬಳಕೆಗೆ ವಿಧಿಸಿದ ಚಂದಾಹಣದಲ್ಲಿ ಯಾರ ಪಾಲು ಎಷ್ಟೆಷ್ಟು ಎಂಬ ತೀರ್ಮಾನ ತೆಗೆದುಕೊಂಡಿದೆ.ಅಲ್ಲದೆ ಮುಂದೆ ವಾರ್ಷಿಕ ಇಪ್ಪತ್ತೈದು ಡಾಲರುಗಳ ಕ್ಲೌಡ್ ಸೇವೆ ದರವನ್ನೂ ವಿಧಿಸುವ ಮುನ್ಸೂಚನೆಯನ್ನು ನೀಡಿದೆ.ನಿಧಾನವಾಗಿ ವಿಡಿಯೋ,ಧಾರಾವಾಹಿ,ಚಲನಚಿತ್ರಗಳನ್ನೂ ಆನ್ಲೈನಿನಲ್ಲಿ ಬಳಕೆಗೆ ಒದಗಿಸುವ ವ್ಯವಹಾರ ಮಾದರಿಯನ್ನು ತನ್ನದಾಗಿಸಿಕೊಳ್ಳುವುದು ಆಪಲ್ ಯೋಜನೆ.ಇದೇ ವೇಳೆ ಐಬಿಎಮ್ ಕಂಪೆನಿಯೂ ಕ್ಲೌಡ್ ಸೇವೆಗಳನ್ನು ಕೊಡಲಾರಂಭಿಸಿದೆ.ಸ್ಮಾರ್ಟ್‌ಕ್ಲೌಡ್ ಎಂಬ ಹೆಸರಿನ ಕ್ಲೌಡ್‌ಸೇವೆಗಳಲ್ಲಿ,ಬಳಕೆಗನುಸಾರವಾಗಿ ದರವನ್ನು ನೀಡಬೇಕಾಗುತ್ತದೆ.ಮೂಲಸೌಕರ್ಯಗಳು ಸೇವೆಯ ಆಧಾರದಲ್ಲಿ ಸ್ಮಾರ್ಟ್‌ಕ್ಲೌಡಿನಲ್ಲಿ ಸಿಗಲಿದೆ.
--------------------------------------------
ನೋಕಿಯಾ:ಜೋಡಿ ಸಿಮ್ ಹ್ಯಾಂಡ್‌ಸೆಟ್‌ಗಳು
ಕಳೆದವರ್ಷ ಮಾರಾಟವಾದ ಹ್ಯಾಂಡ್‌ಸೆಟ್‌ಗಳಲ್ಲಿ ಮೂರನೇ ಒಂದು ಭಾಗ ಜೋಡಿ ಸಿಮ್ ಬಳಕೆಗೆ ಅನುವಾಗುವ ಹ್ಯಾಂಡ್‌ಸೆಟ್‌ಗಳಾಗಿದ್ದುವು.ಎಸ್ಸೆಮ್ಮೆಸ್,ಧ್ವನಿ ಕರೆಗಳಿಗಾಗಿ ಒಂದು ಸಿಮ್,ದತ್ತಾಂಶ ಸೇವೆಗಳಿಗೆ ಇನ್ನೊಂದು ಸಿಮ್-ಹೀಗೆ ಜನರು ಬೇರೆ ಸಿಮ್‌ಗಳನ್ನು ಅವಲಂಬಿಸುವ ಈ ದಿನಗಳಲ್ಲಿ ಇಂತಹ ಜೋಡಿ ಸಿಮ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡು ಹ್ಯಾಂಡ್‌ಸೆಟ್ ತಯಾರಕರು ಇಂತಹ ಸೆಟ್‌ಗಳ ತಯಾರಿಕೆಗೆ ಗಮನ ಕೊಡಲಾರಂಭಿಸಿದ್ದಾರೆ.ಇಗ ನೋಕಿಯಾ ಕೂಡಾ ಇಂತಹ ಸೆಟ್‌ಗಳನ್ನು ಭಾರತದಲ್ಲೂ ಮಾರಲಾರಂಭಿಸಿದೆ.ಎರಡು ಸಾವಿರ ಮತ್ತು ಮೂರು ಸಾವಿರ ಬೆಲೆಯ ಸೆಟ್‌ಗಳನ್ನು ಮಾರಾಟಕ್ಕೆ ಒದಗಿಸಲಾಗುತ್ತಿದೆ.ಅತ್ತ ಟಾಟಾ ಡೊಕೊಮೋ,ಮೂರು ವಿಧದ ಜಾಲಗಳಲ್ಲಿ ಅಂತರ್ಜಾಲ ಸೇವೆಗಳನ್ನು ಬಳಸಲು ಸಾಧ್ಯವಾಗಿಸುವ ಸಾಧನವನ್ನು ಒದಗಿಸುತ್ತಿದೆ.ಆರು ಸಾವಿರ ರೂಪಾಯಿ ಬೆಲೆಯ ಈ ಸಾಧನವನ್ನು ಟಾಟಾ ಡೊಕೊಮೋದ ತ್ರೀಜಿ ಜಾಲಗಳಲ್ಲಿ,ಅದಿಲ್ಲವಾದೆಡೆ ಸಿಡಿಎಂಎ ಅಥವಾ ವೈಫೈ ಜಾಲಗಳಿಂದ ಅಂತರ್ಜಾಲ ಸೇವೆಗಳನ್ನು ಪದೆಯಲು ಅನುಕೂಲಕರವಾಗಿದೆ.ತ್ರೀಜಿ ಜಾಲದಲ್ಲಿ ಏಳು ಎಂಬಿಪಿಎಸ್ ವೇಗದ ದತ್ತಾಂಶ ಬಳಕೆಯೂ ಸಾಧ್ಯ.ತ್ರೀಜಿ ಇಲ್ಲವಾದರೆ ದತ್ತಾಂಶ ಬಳಕೆಯ ವೇಗ ತಗ್ಗುತ್ತದೆ.ತಿಂಗಳಿಗೆ ಏಳುನೂರೈವತ್ತು ರೂಪಾಯಿಗೆ ಎರಡು ಜೀಬಿ,ಸಾವಿರ ರೂಪಾಯಿಗೆ ಐದು ಜೀಬಿ ಬಳಕೆ ಮಾಡಬಹುದು.
----------------------------------------------
ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನು ಬೇಕೇ?
ಹ್ಯಾಂಡ್‌ಸೆಟ್ ಅಗ್ಗದಲ್ಲಿ ಬೇಕಾದರೆ,ಮೊಬೈಲ್ ಸೇವೆಗೆ ಕಂಪೆನಿಯೊಂದರ ಜತೆ ಒಪ್ಪಂದ ಮಾಡಿಕೊಂಡರಾಯಿತು.ಹೀಗೆ ಮಾಡಿದರೆ,ಹ್ಯಾಂಡ್‌ಸೆಟ್‌ಗೆ ಬೇಕಾಗಿ,ಕಂಪೆನಿಯ ಮೊಬೈಲ್ ಸೇವೆಗೆ ನಿಗದಿತ ಅವಧಿಯವರೆಗೆ ಮುಂದುವರಿಸಬೇಕಾಗುತ್ತದೆ.ಮೊಬೈಲ್ ಸಂಖ್ಯೆ ವರ್ಗಾವಣೆಯ ಮೂಲಕ ಸೇವಾದಾತೃವನ್ನು ಬದಲಿಸುವಂತಿಲ್ಲ.ಅಮೆರಿಕಾದ ಟಿ-ಮೊಬೈಲ್ ಇದೀಗ ಎಂಭತ್ತು ಡಾಲರುಗಳಷ್ಟು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನನ್ನು ಒದಗಿಸಿ,ಚಂದಾದಾರರನ್ನು ಆಕರ್ಷಿಸಲು ಯತ್ನಿಸುತ್ತಿದೆ.ಸ್ಯಾಮ್‌ಸಂಗ್ ಕಂಪೆನಿಯ ಎಕ್ಸಿಬಿಟ್ ಎಂಬ ಸ್ಮಾರ್ಟ್‌ಪೋನುಗಳು ಟಿ-ಮೊಬೈಲ್ ಮೊಬೈಲ್ ಸೇವೆಯೊಂದಿಗೆ ಬಳಕೆದಾರರಿಗೆ ಸಿಗಲಿದೆ.ಎರಡು ವರ್ಷದ ಮೊಬೈಲ್ ಸೇವೆ ಕಂಪೆನಿಯಿಂದಲೇ ಪಡೆಯಬೇಕು.ಸ್ಮಾರ್ಟ್‌ಪೋನಿಗೆ ಮೊಬೈಲ್ ಸೇವಾದಾತೃ ಸಬ್ಸಿಡಿ ನೀಡುತ್ತದೆ,ಹಾಗಾಗಿ ಹ್ಯಾಂಡ್‌ಸೆಟ್ ತಯಾರಿಸಿದ ಕಂಪೆನಿಗೆ ನಷ್ಟವಾಗದು.ಜತೆಗೆ ಮಾರಾಟಕ್ಕೆ ಹೆಚ್ಚು ತಲೆಬಿಸಿಯೂ ಮಾಡಿಕೊಳ್ಳಬೇಕಿಲ್ಲ.
-----------------------------------------------
ವಿಂಡೋಸ್8
ಮೈಕ್ರೋಸಾಫ್ಟ್ ತನ್ನ ಹೊಸ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ಹೇಗಿದೆ ಎನ್ನುವುದರ ಗುಟ್ಟು ಬಿಟ್ಟುಕೊಟ್ಟಿದೆ.http://www.youtube.com/watch?v=p92QfWOw88I ವಿಳಾಸದ ಯುಟ್ಯೂಬ್ ತುಣುಕನ್ನು ನೋಡಿದರೆ ಇದರ ಮುನ್ನೋಟ ನಿಮಗೂ ಸಿಗುತ್ತದೆ.ಮುಂದಿನ ಆಪರೇಟಿಂಗ್ ವ್ಯವಸ್ಥೆಯು ಸ್ಪರ್ಶ ಸಂವೇದಿ ಕಂಪ್ಯೂಟರ್ ತೆರೆಗಳಿಗೆ ಸೂಕ್ತವಾದದ್ದು.ಈಗಿರುವ ಕಂಪ್ಯೂಟರ್ ಬಳಕೆಯ ಇಂಟರ್‌ಪೇಸ್ ಸಂಪೂರ್ಣ ಹೊಸತನದಿಂದ ಕೂಡಿದೆ.ಈಗದು ಸ್ಮಾರ್ಟ್‌ಫೋನ್ ಅಥವಾ ಸೂಪರ್‌ಪೋನ್‌ನ ನೋಟವನ್ನು ಕೊಡುತ್ತದೆ.ಸ್ಪರ್ಶದ ಮೂಲಕ ಬೇಕಾದ ಐಕಾನ್ ಸ್ಪರ್ಶಿಸಿ,ಬಳಕೆಗೆ ಅನುವು ನೀಡಲಾಗಿದೆ.ಸೂಪರ್‌ಫೋನ್,ಟ್ಯಾಬ್ಲೆಟ್,ಲ್ಯಾಪ್‌ಟಾಪ್ ಹೀಗೆ ಎಲ್ಲದಕ್ಕೂ ಸರಿಹೊಂದುವ ರೀತಿಯಲ್ಲಿ ವಿಂಡೋಸ್ ಎಂಟನ್ನು ರೂಪಿಸಿರುವುದು ಸ್ಪಷ್ಟ.
-----------------------
ಶೋಧ ಮತ್ತು ತಪ್ಪು ಸ್ಪೆಲಿಂಗ್:
ಅಂತರ್ಜಾಲದಲ್ಲಿ ಯಾವುದಾದರೂ ಪದಗುಚ್ಛದ ಮೇಲೆ ಶೋಧ ನಡೆಸುವಾಗ,ತಪ್ಪು ಸ್ಪೆಲಿಂಗ್ ಟೈಪಿಸುವುದನ್ನು ನಾವೆಲ್ಲಾ ಮಾಡುತ್ತೇವೆ.ಮೊದಲಾದರೆ,ಅಂತಹ ಪದವಿಲ್ಲ ಎಂಬ ಫಲಿತಾಂಶ ಮಾತ್ರಾ ಬರುತ್ತಿತ್ತು.ಈಗ ಹೆಚ್ಚಿನ ಶೋಧ ತಾಣಗಳು,ತಾವು ಹುಡುಕುತ್ತಿರುವ ಪದ ಇದುವೇ ಎಂದು ಸೂಚಿಸುವ ಸೇವೆ ಒದಗಿಸುತ್ತಿವೆ.ಜನಪ್ರಿಯ ಶೋಧ ಪದಗಳ ಪಟ್ಟಿಯನ್ನು ಉಳಿಸುವ ಮೂಲಕವೂ ಇಂತಹ ಸಹಾಯ ನೀಡಲು ಸಾಧ್ಯವಾಗುತ್ತದೆ.ಜತೆಗೆ ಆರ್ಟಿಫೀಶಿಯಲ್ ಇಂಟಲಿಜನ್ಸ್ ಹೊಂದಿರುವ ತಂತ್ರಾಂಶದ ಮೂಲಕವೂ ಸಹಾಯ ಒದಗಿಸಬಹುದು.ಯಾಹೂ ತನ್ನ ತಾಣದಲ್ಲಿ ಹೆಚ್ಚು ಜನರು ಸ್ಪೆಲಿಂಗ್ ತಪ್ಪು ಮಾಡುವ ಪದಗಳನ್ನು ಪ್ರಕಟಿಸಿದೆ!
---------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS34 ನಮೂದಿಸಿ.)
*ಕನ್ನಡದ ಮಕ್ಕಳ ಅಂತರ್ಜಾಲತಾಣದ ಬಗ್ಗೆ ಬರೆದು,ತಾಣದ ವಿಳಾಸ ನೀಡಿ.
ಕಳೆದ ವಾರದ ಬಹುಮಾನಿತ ಉತ್ತರ:
*ಭ್ರಷ್ಟಾಚಾರ ನಿಯಂತ್ರಣ ಅಥವಾ ಹೋರಾಟಕ್ಕೆ ಮೊಬೈಲ್ ಸಹಾಯ ಪಡೆಯಲು ಅದರಲ್ಲಿ ಒಂದು ತಂತ್ರಾಂಶ ಅನುಸ್ಥಾಪಿಸಬಹುದು.ನಿಗದಿತ ಕೀಲಿ ಒತ್ತಿದರೆ,ತಂತ್ರಾಂಶ ಚಾಲೂ ಆಗಿ ನಿಗದಿತ ದೂರವಾಣಿ ಸಂಖ್ಯೆಗೆ ಕರೆಹೋಗುತ್ತದೆ.ಅಲ್ಲಿ ಕರೆಯನ್ನು ದಾಖಲಿಸುವ ವ್ಯವಸ್ಥೆ ಏರ್ಪಡಿಸಬೇಕು.ಲಂಚಕ್ಕೆ ಬೇಡಿಕೆಯಿಡುವ ಅಧಿಕಾರಿಯಲ್ಲಿ ಮಾತನಾಡುವಾಗ,ಕೀಲಿ ಒತ್ತಿದರೆ,ಮಾತುಗಳು ದಾಖಲಿತವಾಗುತ್ತಿರುತ್ತದೆ.ತಂತ್ರಾಂಶ ಸ್ವಯಂಚಿತ್ರಗಳನ್ನು ಸೆರೆಹಿಡಿಯುವಂತೆಯೂ ತಂತ್ರಾಂಶವನ್ನು ರೂಪಿಸಬಹುದು.
ಬಹುಮಾನ ಗೆದ್ದವರು ಅಂಕಿತ್,ಬೆಂಗಳೂರು.ಅಭಿನಂದನೆಗಳು.

ಬ್ಲಾಗೋಕ್ತಿಗಳು
*ಬೆಲೆ ಇಳಿಸಲು UPAಯ :ಎಲ್ಲರ UPAವಾಸ (http://www.anveshi.net)
*ಹುಡುಗ ಹುಡುಗಿಯ ಮುದ್ದು ಮುಖಕ್ಕೆ ಸೋತು,ಆಕೆ ತನಗೆ ಬೇಕೆನ್ನುವುದನ್ನು ಫೇಸ್‌ಬುಕಿಂಗ್ ಎನ್ನಬಹುದೇ?(http://ganakindi.blogspot.com)
Udayavani
*ಅಶೋಕ್‌ಕುಮಾರ್ ಎ