ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ಮೆಟ್ರೋ ಪ್ರಯಾಣ ದರ ಏರಿಕೆ...

ಸ್ಮೂತಾಗಿ 

ಸ್ಪೀಡಾಗಿ

ಆಕಾಶದಲ್ಲಿ

ಹಾರಾಡುವುದೆಂದರೆ-

ಅಷ್ಟು ಸುಲಭವೇನೋ

ಹುಚ್ಚಾ...

 

ಮೆಟ್ರೋ

ಪ್ರಯಾಣ

ದರಕೆ-

ನೀ ತೆರಬೇಕು

ಕೊಂಚ

ಹೆಚ್ಚು ವೆಚ್ಚ!

***

ರಮ್ಯಾ ಮತ್ತು ಮದುವೆ! 

ಪಾಯಸದ

ಸಿಹಿ ಊಟ

ಯಾವಾಗ್ಲಾದ್ರೂ

ಹಾಕಿಸಬಹುದು-

ಓ ಮೋಹಕ

ತಾರೆ ರಮ್ಯಾ...

 

ಈ ಮದುವೆಯ

ಗತ್ತು ಗೈರತ್ತಿನ

ಸಿಹಿ ಊಟ ಮಾತ್ರ-

ಜೀವನದಲ್ಲಿ

ಒಂದೋ ಎರಡೋ

ಸಾರಿ ಅಷ್ಟೇ ಕಣಮ್ಮಾ!

***

ಸಿ ಎಂ ಮತ್ತು ಕುರ್ಚಿ 

ಗಾಲಿ ಕುರ್ಚಿಯಲ್ಲಿ

ಸಿ ಎಂ-

ಎಂತಹ

ಪರಿಸ್ಥಿತಿಗೂ ಕುರ್ಚಿ

ಬಿಟ್ಟುಕೊಡದ

ಗಟ್ಟಿಗಾರಿಕೆ...

 

ಇದು-

ಎಲ್ಲಾ ಲಘುವಾಗಿ

ತೆಗೆದುಕೊಳ್ಳುವ

ಸಿ ಎಂ ಗೆ-

ದೇಹ ಕೊಟ್ಟ

ಎಚ್ಚರಿಕೆ!

***

ಜನರ ಮಧ್ಯೇ ಖುಷಿ ಪಡುವ ಸರದಾರ! 

ರಾಜಕೀಯ

ನಿವೃತ್ತಿ ಇಲ್ಲ;

ಜನರ ಮಧ್ಯೆ

ಇರುವುದೇ

ಖುಷಿ-

ಸಿದ್ದರಾಮಯ್ಯಾ...

 

ಜನರ ಮಧ್ಯೇ ಇದ್ದು

ಖುಷಿಪಡುವುದಾದರೆ-

ನಮ್ಮೂರ ಪ್ರಸಿದ್ಧ

ಜಾತ್ರೆಯ

ಜನಜಂಗುಳಿ

ಆಗಬಹುದೇ ಅಯ್ಯಾ!?

***

ವ್ಯವಹಾರ ಚತುರ ಟ್ರಂಪ್...! 

ಒಟ್ಟಿನಲ್ಲಿ

ಟ್ರಂಪ್

ಯುದ್ಧದಾಹಿಯಲ್ಲ;

ಭಲೇ

ವ್ಯವಹಾರ

ಚತುರ...

 

ಎಲ್ಲಾ ದೇಶಗಳಿಗೂ

ತೆರಿಗೆಭೂತ

ಹೊರಡಿಸಿ-

ಅಮೇರಿಕೆಯ ಬೊಕ್ಕಸ

ತುಂಬಿಸಿಕೊಳ್ಳುವ

ಸಿರಿವರ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್