ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಅಯ್ಯೋ ಮೂಢಾ 

ಎಲ್ಲ ಪಕ್ಷದ

ನಾಯಕರಿಗೂ

ಸೈಟ್ಗಳ

ಹಂಚಿಕೆ ಮಾಡಿದೆ

ಮೈಸೂರು

ಮೂಡಾ...

 

ಇದರಲ್ಲಿ

ಜನಸಾಮಾನ್ಯರ

ಒಂದೂ

ಹೆಸರು

ಕೇಳಿ ಬರಲಿಲ್ಲವೋ

ಮೂಢಾ!

***

ರಾಜಾಸ್ಥಾನದಿಂದ ನಾಯಿ ಮಾಂಸ....! 

ರಾಜಾಸ್ತಾನದಿಂದ

ನಾಯಿಮಾಂಸ

ಬಂದಿದೆಯಂತೆ!

ಜನ ತಿನ್ನದಂತೆ

ಎಚ್ಚರವಹಿಸಿ

ನಾಯಕರೇ...

 

ಕುರಿಗಳಂತೆ

ತಲೆ ಬಗ್ಗಿಸಿ

ಹೋಗುತ್ತಿದ್ದವರು-

ನಾಯಿಗಳಂತೆ

ಬೊಗಳಿಯಾರು

ತಡೆಯಿರೇ!

***

ಪಾದಯಾತ್ರೆ 

ಎಲೆಕ್ಷನ್

ಮುಗಿಯಿತೀಗ

ಕೊಂಚ ಫ್ರೀ-

ಮುಗಿಯಿತು

ರಾಜಕೀಯ

ಆಡಂಬರದ ಜಾತ್ರೆ...

 

ದೇಹದ

ಕೊಬ್ಬನಿಳಿಸಲು

ವೈದ್ಯರ ಸಲಹೆ-

ಹೊರಟಿಹರು

ಮೈಸೂರಿಗೆ

ಪಾದಯಾತ್ರೆ

***

ಲ್ಯಾಬ್ ವರದಿ 

ಯಾಕೋ-

ರಾಜಾಸ್ತಾನ

ಮಾಂಸ

ತಿಂದವರು

ಬೊಗಳಲೇ

ಇಲ್ಲವಂತೆ....

 

ಗೃಹಸಚಿವರು

ಹೇಳಿದ್ದಾರೆ-

ಲ್ಯಾಬ್ ವರದಿ

ಪ್ರಕಾರ

ಅದು ಕುರಿಯ

ಮಾಂಸವಂತೆ!

***

ಧಿಮಾಕು 

ಈಗ

ಎಲ್ಲವೂ ಕೈಗೆ

ಸಿಗುತಿರ್ಪುದಿಂ-

ಮಾಡುತ್ತಿರ್ಪರು

ಇನ್ನಿಲ್ಲದ 

ಧಿಮಾಕು...

 

ಹಿಂದೆ ತುತ್ತು

ಅನ್ನಕೂ

ಪರದಾಡುತ್ತಿರೆ-

ಕಾಣುತಿದ್ದರ್

ಜೀವನದೋಳ್ 

ಬೆಳಕು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್