ಒಂದಿಷ್ಟು ಹನಿಗಳು...
ತೆರೆದ ಪುಸ್ತಕ!
'ನಾನು ತೆರೆದ
ಪುಸ್ತಕ' ಎಂದು
ಪದೇಪದೇ ಹೇಳಿ-
ಪುಸ್ತಕಕ್ಕೇಕೆ
ಮಾಡುವಿರಿ
ಅವಮಾನ...?
ನೀವು ಪಾಪಗಳ
ಮಾಡುವಾಗ-
ಮುಚ್ಚಿದ ಪುಸ್ತಕ;
ಹಗರಣ
ಬಯಲಾದ ಮೇಲೆ-
ಅಸ್ತಮಾನ!
***
ಎಚ್ಚರಾ
ರಾಜಕಾರಣಿಗಳೇ-
ನೀವ್ಯಾರೂ
ನ್ಯಾಯದ
ದೋಣಿಯಲ್ಲಿ
ಪಯಣಿಸುತ್ತಿಲ್ಲ
ಬೆಪ್ಪರಾ...
ಅನ್ಯಾಯದ
ದೋಣಿಗೆ
ತೂತುಗಳು
ನೂರಾರು-
ಮುಳುಗಿ ಹೋದೀರಿ
ಎಚ್ಚರಾ!
***
ತೆಂಗಿನ ಕಾಯಿ ಬೆಲೆ ಏರಿಕೆ?
ತೆಂಗು-
ಎಳನೀರಿಗೆ
ಬಲಿ-
ದರ
ಏರಿದ
ಕೊಬ್ಬರಿ...
ಈಗ
ಅದರ
ಇಳುವರಿ
ಕಡಿಮೆ ಆಗಿ-
ರೈತನ
ಬೊಬ್ಬಿರಿ!
***
ಸಿರಿಗರ
ಹೆಂಡ
ಕುಡಿದವರ
ನುಡಿಸಬಹುದು;
ಗಾಂಜಾ
ಸೇವಿಸಿದವರನೂ
ಭರಿಸಬಹುದು...
ಆದರೆ
ಸಿರಿಗರ ಹೊಡೆದು
ಗರಗರ
ತಿರುಗುವವರನು
ಎಂದೂ
ತಿದ್ದಲಾಗದು!
***
ದಸರಾ ಆಮಂತ್ರಣ ಪತ್ರ....
ಇದು
ವಿಶ್ವ ವಿಖ್ಯಾತ
ಮೈಸೂರು
ದಸರಾ
ಅಲ್ಲವೇ
ಅಲ್ಲಾ...
ಸರ್ಕಾರಗಳ
ಮಂತ್ರೀವರ್ಯರ
ವೈಭವದ
ಜಂಬೂ
ಸವಾರಿಯೇ
ಎಲ್ಲಾ!
***
ವರಾಹರೂಪೀ...
ಹಂದಿಹಂದಿಯೆಂದು
ನಿಂದಿಸುವಿರೇಕೆ?
ಸುಖ ಭೋಜನಕೆ
ಹಂದಿ;
ಹೇಸಿಗೆ ಸ್ವಚ್ಛತೆಗೆ
ನಿರಪಾಯಕಾರೀ ಹಂದಿ...
ಸ್ವಾರ್ಥಿ
ಮಾನವನನು;
ರಾಜಕಾರಣಿಗಳನು-
ಹಂದಿಗೆ
ಹೋಲಿಸಿ
ಆಗದಿರಿ ಚಿಂದಿ ಚಿಂದಿ!
***
ಮಹಾತ್ಮ ಗಾಂಧಿ
ಓ..ದೇಶಕೆ
ಸ್ವಾತಂತ್ರ್ಯ
ತಂದುಕೊಟ್ಟ
ವಿಶ್ವದ
ಅಹಿಂಸೆಯ
ಸರದಾರ....
ನಿಮಗಿದೋ
ನೂರೈವತ್ತೈದನೆಯ
ಹುಟ್ಟುಹಬ್ಬದ
ಹೃತ್ಪೂರ್ವಕ
ಅಭಿನಂದನೆಯ
ನಮಸ್ಕಾರ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ