ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ನೋ ರಿಟೈರ್ಮೆಂಟ್ 

ಸರ್ಕಾರೀ

ನೌಕರರಿಗೆ

ಖಾಯಂ ನಿವೃತ್ತಿ;

ಖಾಸಗೀ

ಕೆಲಸಗಾರರೂ

ಹೋಗುವರು ಬತ್ತಿ...

 

ಈ ರಾಜಕಾರಣಿಗಳಿಗೆ

ಮಾತ್ರ ಎಂದೂ

ಬತ್ತದ ಶಕ್ತಿ;

ಬದುಕಿರುವವರೆಗೂ

ಗಳಿಸಿದ್ದನ್ನು

ಉಳಿಸುವ ಕುಯುಕ್ತಿ!

***

ಹಣವೊಂದೇ ಜೀವನವಲ್ಲವೋ...

ಹಣವನು

ಗಂಟು

ಮಾಡಿ ಮಾಡಿ

ಸರ್ಪದಂತೆ

ಸದಾ ಏಕೆ

ಕಾಯುವಿರೋ...?

 

ದೇವರು ಕೊಟ್ಟ

ಈ ಜಗದ

ಸೌಂದರ್ಯವ

ಆಸ್ವಾದಿಸುವ

ಆವಕಾಶವನು

ಕಳೆದುಕೊಳ್ಳುವಿರಲ್ಲೋ...!

***

ಶ್ರೇಷ್ಠ ಕನ್ನಡಿ 

ಓ ಶ್ರೇಷ್ಠ

ಕನ್ನಡಿಯೇ-

ನೀನೆನಗೆ

ಈ ಜಗದ

ನಿಜ

ಸಖನಲ್ತೇ....

 

ನಾನತ್ತೊಡೆ

ನೀನೂ

ಅಳುವೆ;

ಈ ವ್ಯಂಗ್ಯದ

ಜಗದೊಳು-

ನೀ ನಗಲಾರೆಯಲ್ತೇ!?

***

ಡ್ರಗ್ಸ್ ಮಹಾಮಾರಿ 

ಈ ಡ್ರಗ್ಸೇ ಹೀಗೆ-

ಮುನುಷ್ಯರನ್ನು

ಅನಾಗರೀಕರನ್ನಾಗಿಸಿ

ಹಿಂಡಿ ಹಿಪ್ಪೇ

ಮಾಡಿ

ಎಸೆಯುವುದು...

 

ಇಂಡಿಯಾದಲಿ

ವಾಹನ

ವೀಲ್ಹರ್;

ಅಮೇರಿಕಾದಲ್ಲಿ

ಹೋಮ್ಲೆಸ್ ಜನರು-

ಇದರ ಕೊಡುಗೆಯೇ!

***

ಹೊಸಜನ್ಮ 

ಈ ಜನ್ಮದಲಿ

ಜೀವನದಿ-

ಪ್ರತಿದಿನ ಇಹುದು

ಕಷ್ಟ-ಸುಖ

ಹುಟ್ಟು-ಸಾವು...

ಗೊತ್ತಿಲ್ಲ ನಿನಗೆ ಮರ್ಮ...

 

ಹೆದರಿ-ಬೆದರಿ

ಬಳಲಿ ಬೆಂಡಾಗಿ

ನಿರಾಶನಾಗುವಿಯೇಕೋ

ಮರುದಿನಕೆ ಕಾದಿಹುದು

ನಿನಗೆ ಮತ್ತೊಂದು 

ಹೊಸ ಜನ್ಮ!

***

ಧೋಕಾ ದುನಿಯಾ 

ಏನೀ

ಜಗದ ಮಾಯೇ-

ಎಲ್ಲೆಲ್ಲೂ

ಒಬ್ಬರನೊಬ್ಬರು

ದೋಚುವವರೇ

ಸಖಾ...

 

ಈ ಹಾಳು

ಮುಖಗಳಿಗಿಂತ-

ಖಳೆ, ಹೊಳೆಯಾಗಿ

ಅರಳುತಿದೆ

ಶ್ರಮಿಕ ರೈತನ

ಮುಖ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್