ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಚೆಲ್ಲಾಟ-ಹುಚ್ಚಾಟ 

ಈ ರಾಜಕೀಯದವರು

ಜನರ

ಧಾರ್ಮಿಕ

ಭಾವನೆಗಳೊಂದಿಗೆ

ಆಡುತಿರುವರು

ಚೆಲ್ಲಾಟ...

 

ಅಯ್ಯೋ

ಅಧಿಕಾರಿಗಳೇ-

ನೀವೂ

ತುಳಿಯುತಿರುವಿರಾ

ಪವಿತ್ರ ಧರ್ಮದ

ತೋಟ!

***

ಧರ್ಮಾಂಧ ರಕ್ಕಸರು 

ಧರ್ಮದ

ಹೆಸರ ಹೇಳಿ

ಅಮಾಯಕರ

ಕೊಲ್ಲುವ

ಉಗ್ರಗಾಮಿ

ಉಗ್ರರೇ...

 

ನಿಮ್ಮಅಂತ್ಯ

ಇದಕಿಂತಲೂ ಭೀಕರ

ಎಂಬುದ ತಿಳಿಯಿರಿ-

ಆಧುನಿಕ 

ಅಮಾನವೀಯ

ರಕ್ಕಸರೇ!

***

'ಡಾ. ರಾಜ್ ಕುಮಾರ್' ಹುಟ್ಟು ಹಬ್ಬದ ಶುಭಾಶಯಗಳು...

       ಮತ್ತೆ  ಹುಟ್ಟಿ ಬನ್ನಿರಿ

           ಓ ವರನಟರೇ...

      ನಟಸಾರ್ವಭೌಮರೇ...

     ಮೌಲ್ಯಗಳ ಸರದಾರರೇ-

         ಸಕಲ ಪಾತ್ರಗಳ

      ಎರಕ ಹೊಯ್ದವರೇ...

 

         ಉಡುಗುತಿರುವ

             ಮೌಲ್ಯಗಳ

          ಎತ್ತಿ ಹಿಡಿಯಲು

              ಮತ್ತೊಮ್ಮೆ

            ಕರುನಾಡಿನಲಿ

          ಆವಿರ್ಭವಿಸಿ ಬನ್ನೀ...

***

ಭಾರತೀಯ ಸಿಂಹ..ಸಿಂಹ....! 

ಓ ಭಯೋತ್ಪಾದರೇ-

ನೀವು ನಿಜವಾದ

ಗಂಡಸರಾದರೆ ಬನ್ನಿ-

ನಮ್ಮ ಯೋಧರೊಂದಿಗೆ

ಮುಖಾಮುಖಿ ಹೋರಾಡಿ

ರಣ ಹೇಡಿ ಹುಚ್ಚರಾ...

 

ಕಣಿವೆಗಳಲಿ

ಬಚ್ಚಿಟ್ಟುಕೊಂಡು

ಏತಕೀ ಹೊಂಚಿನ ಸಂಚಿನ

ಅಸಂಬದ್ಧ ಯುದ್ಧ...

ಭಾರತೀಯ ಎದ್ದು ನಿಂತರೆ-

ಸಿಂಹ..ಸಿಂಹ..ಎಚ್ಚರಾ!

***

ಲಡ್ಡಿನ ಜಿಡ್ಡು 

ಮೈತುಂಬಾ

ಬಂಗಾರ

ಹೊತ್ತುಬಂದ

ತಿರುಪತಿ

ದೇವಸ್ಥಾನದ

ಲಡ್ಡು ಗುತ್ತಿಗೆದಾರ...

 

ಪಾಪ

ಈತ ಪ್ರಾಮಾಣಿಕ:

ತಾನು ಗಳಿಸಿದ

ಜಿಡ್ಡನ್ನೆಲ್ಲಾ

ಜಗತ್ತಿಗೆ ತೋರಿಸಿದ

ಸರದಾರ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್