ಒಂದಿಷ್ಟು ಹನಿಗಳು !
ಕವನ
ಅಭೇದ್ಯ...!
ಗದಗದಲ್ಲಿ
ಸಿದ್ದರಾಮಯ್ಯಗೆ.
ಮುಜುಗರ-
ಕಾಲು ನೋವಿನಿಂದ
ಮೆಟ್ಟಿಲು ಹತ್ತಲು
ಅಸಾಧ್ಯ...
ಯಾರ
ಮುಂದೆ
ಗೆದ್ದು ಬೀಗಿದರೂ-
ಈ ದೇಹ ಪ್ರಕೃತಿಯ
ಮುಂದೆ ನೋ...ನೋ...
ಅಭೇದ್ಯ!
***
ಮಿತಿಯಿರಲಿ...
ಆರ್ ಸಿ ಬಿ-
ಈ ಸಾರಿ
ಕಪ್ ನಮ್ದೇ...
ಈ ಅಮೂಲ್ಯವಾದ
ಪ್ರಾಣವೂ
ನಿಮ್ದೇ...
ಅತಿರೇಕದ
ಹುಚ್ಚಾಟವಿರದಿರಲಿ
ಯುವಜನಾಂಗವೇ...
ಸಂಭ್ರಮಾಚರಣೆಗೂ
ಒಂದು
ಮಿತಿಯಿರಲಿ!
***
ತಲೆದಂಡ...
ಆರ್ ಸಿ ಬಿ
ಸಂಭ್ರಮಾಚರಣೆ-
ತಲೆದಂಡ ತಲೆದಂಡ...
ಸರ್ಕಾರ
ತನ್ನ ತಲೆ ಉಳಿಸಿಕೊಳ್ಳಲು
ತಲೆದಂಡ...
ತನ್ನ ಬೇಜವಾಬ್ದಾರಿ
ತಪ್ಪಿಸಿಕೊಳ್ಳಲು-
ಪಾಪದ ಪೋಲೀಸರ
ತಲೆದಂಡ;
ಜನ ನಿಮ್ಮ ಕಿತ್ತೆಸೆದಾರು
ಎಚ್ಚರಿಕೆಯೆಂದ!
***
ಓದಿನ ಮೋಜು!
ಸಿನಿಮಾ ನಟ;
ಕ್ರಿಕೆಟ್ ಆಟಗಾರರಿಗೆ
ಸಿಗುವ ಅಭಿಮಾನಿಗಳ ಸ್ವಾಗತ
ಕವಿಗಳಿಗೆ ಏಕೆ ಸಿಗುತ್ತಿಲ್ಲ?-
ಅಕೆಡಮಿ ಅಧ್ಯಕ್ಷ
ಎನ್ ಎಲ್ ಮುಕುಂದರಾಜು
ಓದಿನ ಸುಖವನರಿಯದ
ಮೂಢರು;
ಕಷ್ಟಪಡದೆ ಸುಖವ
ಬಯಸುವ ಜಾಣರು...
ಬೇಕವರಿಗೆ
ಸುಲಭದ ಮೋಜು!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
