ಒಂದು ಒಳ್ಳೆಯ ನುಡಿ - 116
ದುರ್ಜನರ ಸಹವಾಸದಿಂದ ಪದೇ ಪದೇ ಮಾನಹಾನಿಯಾಗುತ್ತದೆ. ಹೇಗೆ ಬೆಂಕಿಯು ಕಬ್ಬಿಣದೊಡನೆ ಸೇರಿ ಆಗುವಾಗ ಸುತ್ತಿಗೆಯ ಹೊಡೆತವನ್ನು ತಿನ್ನುವುದೋ ಹಾಗೆ. ಅವರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಯಾವ ಕ್ಷಣ ಬೇಕಾದರೂ ಮಾನಹಾನಿ ಮಾಡಲು ಹೇಸರು. ತುಂಬಾ ಜಾಗ್ರತೆಯಾಗಿರಬೇಕು. ಆದಷ್ಟೂ ಕೆಟ್ಟ ಗುಣಗಳನ್ನು ಮೈಗೂಡಿಸಿಕೊಂಡಿರುವ ಮನುಜರ ಸ್ನೇಹ ಮಾಡದಿರುವುದು ಕ್ಷೇಮ. ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸುವುದು. ಎಷ್ಟು ಮಾತ್ರಕ್ಕೂ ಆಗುವುದಿಲ್ಲ ಎಂದಾದರೆ ಬಿಟ್ಟು ಬಿಡುವುದೇ ಲೇಸು. ‘ದುರ್ಜನರ ಸಂಗ ಮೈಯೆಲ್ಲಾ ಕೀಟಗಳು ಕಡಿದಂತೆ’. ನವೆಯಾಗುತ್ತಾ ಆಗಾಗ ಕಾಟ ಕೊಡುತ್ತಿರಬಹುದು. ಗೊತ್ತಾಗದೆ ಹಳ್ಳಕ್ಕೆ ಬೀಳುವವರು ಬಹಳ ಮಂದಿ. ಎಷ್ಟೋ ಜನ ಹೇಳ್ತಾರೆ 'ಬಲೆಯೊಳಗೆ ಸಿಲುಕಿದ್ದೇನೆ. ಹೊರ ಬರಲಾಗುತ್ತಿಲ್ಲ' ಎಂದು. ಗೊತ್ತಾಗದೆ ಇದ್ದರೆ, ಗೊತ್ತಾದ ಮೇಲೆ ಹೊರ ಬರುವುದೇ ಕ್ಷೇಮ. ಇಲ್ಲದಿದ್ದರೆ ಪೂರ್ತಿ ಮಾನ ಹೋಗಬಹುದು. ಅವ ಹೇಗೂ ಹಾಳಾದ. ಜೊತೆಗೆ ಇತರರನ್ನೂ ಹಾಳುಮಾಡಿಯಾನು. ಇರುವ ಬದುಕಲ್ಲಿ ನೆಮ್ಮದಿಯಿಂದ ಇರಲು ಪ್ರಯತ್ನಿಸೋಣ, ಇತರರಿಗೂ ಸಂತಸ ನೀಡೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ