ಒಂದು ಒಳ್ಳೆಯ ನುಡಿ - 124

* ನನ್ನಿಂದೇನಾಗುತ್ತೆ ಅಂತ ಕೀಳರಿಮೆ ಬೇಡ, ನೀವು ಮಾಡುವ ಕೆಲಸವನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ, ಅನ್ನೋದನ್ನ ತಿಳಿದುಕೊಳ್ಳಿ.
* "ಸಿಟ್ಟು" ಮಾಡಿಕೊಳ್ಳುವದೆಂದರೆ ಮತ್ತೊಬ್ಬರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಿದಂತೆ.
* ನಿಮ್ಮ ಮುಂದೆ ಹೊಗಳುವುದು ನಿಮ್ಮ ಸಾಧನೆಯಲ್ಲ, ನೀವು ಇಲ್ಲದೆ ಇರುವಾಗ ಹೊಗಳುವುದು ಅದು ನಿಮ್ಮ ನಿಜವಾದ ಸಾಧನೆ.
* ಪ್ರೀತಿಸೋರಿಗೆ ಪ್ರೀತಿಯನ್ನು ಎಲ್ಲರೂ ಕೊಡ್ತಾರೆ, ದ್ವೇಷಿಸೋರಿಗೆ ಪ್ರೀತಿಯನ್ನು ಯಾರು ಕೊಡ್ತಾರೆ ಅವರು ಮಹಾನ್ ವ್ಯಕ್ತಿಗಳಾಗುತ್ತಾರೆ.
* ಸಹನಾಶೀಲತೆಯಿಂದ ಯಾರು ಕಾಯುತ್ತಾರೆಯೋ ಅವರಿಗೆ ಬೇಕಾದ ಪ್ರತಿಯೊಂದು ವಸ್ತುಗಳು ಯಾವುದಾದರೂ ಮೂಲದಿಂದ ಸಿಕ್ಕೇ ಸಿಗುತ್ತವೆ.
* ಭಗವಂತನ ದೃಷ್ಟಿಯಲ್ಲಿ ದಿನಾಲೂ "ಕೋಟಿ" ದುಡ್ಡು ಗಳಿಕೆ ಮಾಡುವವನಕ್ಕಿಂತ,"ಕೋಟಿ" ಜನರ ಹೃದಯದಲ್ಲಿರುವವನು ದೊಡ್ಡವನು.
* ಅನವಶ್ಯಕವಾದ ಯೋಚನೆಗಳನ್ನು ಬಿಟ್ಟುಬಿಡಿ ಅಂದಾಗ ಮಾತ್ರ ನಿಮ್ಮ ಜೀವನ ಸರಾಗವಾಗಿ ಸಾಗುತ್ತೆ.
*ನಿಮ್ಮ ಮೇಲೆ ಬಹಳ ಸಿಟ್ಟಾದ್ರೂ ಕೂಡ ನಿಮ್ಮ ಜೊತೆಗೆ ಇರ್ತಾರೆ ಅಂದ್ರೇ ತಿಳ್ಕೊಳ್ಳಿ ನಿಮ್ಮ ಜೊತೆ ಹೃದಯಪೂರ್ವಕ ಸಂಬಂಧ ಇದೆ ಅಂತ.
* ಯಾವುದೇ ವ್ಯಕ್ತಿ ತನ್ನಷ್ಟಕ್ಕೆ ತಾನು ಬದಲಾಗೋದಿಲ್ಲ, ಕೆಲವೊಂದು ಪರಿಸ್ಥಿತಿಗಳು ಹಾಗೆ ಮಾಡುತ್ತವೆ, ಬದಲಾವಣೆಗೆ ಕಾರಣವಾಗುತ್ತವೆ.
* ನಾವು ಯಾರಿಂದ ಹಾಗೂ ಯಾವ ವಸ್ತುಗಳಿಂದ ಹೆಚ್ಚಿನ ಸುಖವನ್ನು ಬಯಸುತ್ತೇವೆಯೋ ಅವುಗಳಿಂದಲೇ ಹೆಚ್ಚು ದುಃಖನೂ ಆಗುತ್ತೆ.
* ನಾವು ಎಷ್ಟು ಬೇಕಾದ್ರೂ ದೂರ ನೋಟವನ್ನು ನೋಡಬಹುದು, ನೋಡಿರಲೂಬಹುದು, ಆದರೆ ಅದರ ಆಚೆಗೂ ಒಂದು ಜಗತ್ತು ಇದೆ ಎಂಬುದನ್ನು ಮರೆಯಬೇಡಿ.
* "ಅಹಂಕಾರ"ವೆಂಬ ಗಿಡವು "ವಿನಾಶ" ಎಂಬ ಫಲವನ್ನು ಮಾತ್ರ ಕೊಡುತ್ತೆ, ಅದು ಎಂದಿಗೂ ಒಳ್ಳೆಯ ಫಲ ಕೊಡಲ್ಲ.
* ಜನರು ವರ್ಷ (ಕ್ಯಾಲೆಂಡರ) ಬದಲಾಗೋದನ್ನ ನೋಡ್ತಾರೆ, ಆದ್ರೆ ಯಾರು ವರ್ಷ ಪೂರ್ತಿ ಜನರು ಬದಲಾಗೋದನ್ನ ನೋಡೋದೇ ಇಲ್ಲಾ.
* ಒಳ್ಳೆಯತನ ಹಾಗೂ ಸತ್ಯ ಇವೆರಡೂ ನಿಮ್ಮೊಳಗೆ ಇರದೇ ಇದ್ದರೆ ಜಗತ್ತಿನಲ್ಲಿ ಎಲ್ಲಿಯೂ ಯಾರ ಹತ್ರ ಹುಡುಕಿದರೂ ಸಿಗಲ್ಲ.
* ಸಮುದ್ರ, ಸ್ಮಶಾನ, ಆಸೆ, ಮನಸ್ಸು ಇವು ನಾಲ್ಕು ಎಂದಿಗೂ ತುಂಬಲಾರದ ಸ್ಥಳಗಳು. ಮನಸ್ಸಿಗೆ ಆದ ನೋವು ಶರೀರಕ್ಕೆ ಆದ ನೋವಿಗಿಂತ ನೂರು ಪಟ್ಟು ಹೆಚ್ಚು ತೊಂದರೆ ಕೊಡುತ್ತೆ.
-ಬಸಯ್ಯ ಜಿ.ಮಳಿಮಠ, ಹುಬ್ಬಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ